ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆರ್‌ಪಿ ಡಾಬಾದ ಬಳಿ ಶುಕ್ರವಾರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಿಂಗದಳ್ಳಿ ಗ್ರಾಮದ ಅಮಸಿದ್ದ ಹೂಗಾರ ಎಂಬುವವರು ಗಾಯಾಳು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ವೃದ್ಧೆಯ ಕಪಾಳಕ್ಕೆ ಹೊಡೆದ ಬಸ್ ನಿರ್ವಾಹಕಿ; ಪ್ರಯಾಣಿಕರ ತೀವ್ರ ಆಕ್ರೋಶ
ಅಪಘಾತದ ಬಳಿಕ ಕಾರಿನ KA 28 MA 1089 ಸಂಖ್ಯೆಯ ಪ್ಲೇಟ್ ಕೆಳಗೆ ಬಿದ್ದಿದೆ. ಆದರೆ, ಕಾರು ಚಾಲಕ ಕಾರಿನ ಸಮೇತ ಪರಾರಿಯಾಗಿದ್ದಾನೆ. ಗಾಯಾಳವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.