ವಿಜಯಪುರ ಜಿಲ್ಲೆಯಲ್ಲಿ ಇನ್ನೂ ಶೇ.20ರಷ್ಟು ರೈತರ ಜಮೀನಿನಲ್ಲಿ ಕಬ್ಬು ಇದೆ. ಅವುಗಳ ಕಟಾವು ಆಗುವವರೆಗೂ ಕಾರ್ಖಾನೆಗಳು ಕಬ್ಬು ಖರೀದಿಸುವವದನ್ನು ಮುಂದುವರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಕ್ಕರೆ ಕಾರ್ಖಾನೆಯನ್ನೇ ಅವಲಂಬಿಸಿ ಇಟ್ಟುಕೊಂಡು ಕಬ್ಬು ಬೆಳೆದಿರುವ ರೈತರಿಗೆ ಕಬ್ಬು ಕಾರ್ಖಾನೆಗೆ ಕಳುಹಿಸದಿದ್ದರೆ ತುಂಬಾ ನಷ್ಟವಾಗುವುದು, ಇನ್ನೊಂದು ಹದಿನೈದು ದಿನಗಳವರೆಗೆ ಕಬ್ಬು ಖರೀದಿ ಮುಂದುವರಿಸಬೇಕು. ಇನ್ನು ಅಲ್ಲಲ್ಲಿ ಉಳಿದ ಕಬ್ಬನ್ನು ರೈತರು ಕಳಿಸಲು ಸಾಧ್ಯವಾಗುತ್ತದೆ.
ಒಂದು ವೇಳೆ ಎಲ್ಲಾ ರೈತರ ಕಬ್ಬು ಮುಗಿಯುವ ಮುಂಚೆನೆ ಕಬ್ಬು ಕರೀದಿ ಬಂದ್ ಮಾಡಿದ್ದೇ ಆದರೆ, ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂಗಮೇಶ ಸಗರ ಮನವಿಯಲ್ಲಿ ಆಗ್ರಹಿಸಿದ್ದಾರೆ.