ಅನ್ನಭಾಗ್ಯ ಯೋಜನೆಯಡಿಯಲ್ಲಿ ನೇರ ಹಣ ವರ್ಗಾವಣೆ (ಡಿಬಿಟಿ) ಜಾಗೃತಿ, ಬಳಕೆ ಆದ್ಯತೆಗಳು ಹಾಗೂ ಅಡೆತಡೆಗಳ ಕುರಿತು ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೌಲ್ಯಮಾಪನದ ಕೇಂದ್ರೀಕೃತ ಗುಂಪು ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಗು ಮತ್ತು ಕಾನೂನು ಕೇಂದ್ರ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಬೆಂಗಳೂರು, ಅನೌಪಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದವು.
ಸರ್ಕಾರದ ಮಹತ್ವವಾದ ಯೋಜನೆಯದ ಅನ್ನಭಾಗ್ಯ ಯೋಜನೆ, ಪ್ರಾರಂಭವಾದ ಬಳಿಕ ನಿಜವಾದ ಫಲಾನುಭವಿಗಳಿಗೆ ಯೋಜನೆ ತಲುಪಿದೆಯಾ ಅಥವಾ ಇಲ್ಲ ಎಂಬುದನ್ನು ಅಧ್ಯಯನವನ್ನು ಮಾಡಲು ಸರ್ಕಾರ ಮಗು ಮತ್ತು ಕಾನೂನು ಕೇಂದ್ರ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾವನ್ನು ಕೇಳಿಕೊಂಡಿತ್ತು. ಇದರ ಪ್ರತಿಯಾಗಿ ನ್ಯಾಷನಲ್ ಲಾ ಕಾಲೇಜ್ ಕರ್ನಾಟಕ ಐದು ಜಿಲ್ಲೆಗಳಾದ ಚಾಮರಾಜನಗರ, ರಾಯಚೂರು, ಹಾಸನ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಡಿಬಿಟಿ ಕುರಿತು ಸಣ್ಣದೊಂದು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಸಭೆಯಲ್ಲಿ ಅನೇಕ ಫಲಾನುಭವಿಗಳು ಹಣದ ಬದಲಾಗಿ ಹೆಚ್ಚುವರಿ ಆಹಾರ ಧಾನ್ಯಗಳನ್ನು ವಿತರಣೆ ಮಾಡುವಂತೆ ಮನವಿ ಮಾಡಿದರು. ಅದೇ ರೀತಿ ಪಡಿತರ ಅಂಗಡಿಗಳಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಪಡಿತರವನ್ನು ಕೆಲವೇ ದಿನಗಳ ಮಾತ್ರ ಹಂಚಿಕೆ ಮಾಡುತ್ತಾರೆ. ಮಸಾಲೆ ಪದಾರ್ಥಗಳನ್ನು ಅಂಗಡಿಯವರು ಹೆಚ್ಚುವರಿ ಯಾಗಿ ತನ್ನ ಲಾಭಕ್ಕೆ ಮಾರುತ್ತಾನೆ. ಅವುಗಳನ್ನು ತೆಗೆದುಕೊಂಡರೆ ಪಡಿತರವನ್ನು ನೀಡುತ್ತಾರೆ ಇಲ್ಲವಾದರೆ ಪಡಿತರ ಸಿಗುವುದಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಇಬ್ಬರು ಸದಸ್ಯರು ಇರುವ ಕಡೆ ಹೊಸ ಕಾಡುಗಳನ್ನು ಮಾಡಿಕೊಡುತ್ತಿಲ್ಲ. ಅವರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಡಿಬಿಟಿ ಯೋಜನೆಯಲ್ಲಿ ದಾಖಲಾತಿ ಸಮಸ್ಯೆಗಳಿಂದ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಆಗುತ್ತಿಲ್ಲ. ಇಲಾಖೆಯ ಸರ್ವರ್ ಸಮಸ್ಯೆ ಇದೆ. ಬ್ಯಾಂಕಿನವರು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲವೆಂದು ಅಧಿಕಾರಗಳ ಗಮನಕ್ಕೆ ತಂದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟಿಯೋಳ್ ಮಚಾದ್ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ದೊರಕುವಂತಾಗಬೇಕು. ಯಾರು ಕೂಡ ಹಸಿವಿನಿಂದ ಬಳಲಬಾರದು. ಆಹಾರ ಭದ್ರತೆ ಎಲ್ಲರಿಗೂ ಸಿಗುವ ಮೂಲಕ ಬಡವರ ಹಸಿವನ್ನು ನೀಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕಾಗಿದೆ ಎಂದರು.
ಉಪನಿರ್ದೇಶಕ ವಿನಯ್ ಕುಮಾರ್ ಪಾಟೀಲ್, ಸಮಸ್ಯೆಗಳು ಕಂಡು ಬಂದರೆ ದೂರು ಸಲ್ಲಿಸಬೇಕು. ಇಲ್ಲವಾದರೆ ಸಹಾಯವಾಣಿ 1967ಗೆ ದೂರವಾಣಿ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇವತ್ತಿನ ಸಭೆಯಲ್ಲಿ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಆಲಿಸಿದ್ದೇನೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಾಗಿ ಭರವಸೆ ನೀಡಿದರು.
ವಿನಯ್ ಕುಮಾರ್ ಪಾಟೀಲ್, ಉಪ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವಿವರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಗು ಮತ್ತು ಕಾನೂನು ಕೇಂದ್ರ ನ್ಯಾಷನಲ್ ಲಾ ಆಫ್ ಇಂಡಿಯಾ ಆಯೋಜಕರಾದ ಮಹೇಶ್, ಕುಮಾರಸ್ವಾಮಿ, ಸುಧಾ ಎಂ, ರೇಣುಕಾ ಕೋಟ್ಯಾಳ, ಇತರರು ಇದ್ದರು.