ವಿಜಯಪುರ | ನನ್ನ ಸೋಲಿಗೆ ಪಕ್ಷದ ಯಾರನ್ನೂ ಹೊಣೆ ಮಾಡಲು ಇಚ್ಛಿಸುವುದಿಲ್ಲ: ರಾಜು ಆಲಗೂರು

Date:

Advertisements

ಆಲಗೂರ ದಲಿತ ಸಂಘಟನೆಗಳಿಂದ ಬಂದವನು. ಅಯ್ಕೆಯಾಗಿ ಬಂದರೆ ಲಿಂಗಾಯತರು ಸೇರಿದಂತೆ ಮೇಲ್ವರ್ಗದವರಿಗೆ ತೊಂದರೆ ನೀಡುತ್ತಾನೆ ಎಂಬ ಸಂಸದ ರಮೇಶ ಜಿಗಜಿಣಗಿ ಅವರ ಸುಳ್ಳು ಆರೋಪವು ಲೋಕಸಭೆ ಚುನಾವಣೆಯಲ್ಲಿ ನಾನು ಸೋಲಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.

ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಸದ ರಮೇಶ ಜಿಗಜಿಣಗಿ ಅವರು ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಇಷ್ಟೊಂದು ಕೀಳುಮಟ್ಟದ ಟೀಕೆ ಮಾಡುತ್ತಾರೆಂದು ನಿರೀಕ್ಷಿಸರಲಿಲ್ಲ. ಅವರಿಂದ ಇಂತಹ ಟೀಕೆ ಬಂದಿರುವುದು ಲಿಂಗಾಯತ ಸೇರಿದಂತೆ ಕೆಲ ಸಮಾಜಗಳ ಮತದಾರರ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟರು.

“ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಪಕ್ಷದ ಮುಖಂಡರು ಕಾರ್ಯಕರ್ತರು ಶಕ್ತಿ ಮೀರಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಯಾರೊಬ್ಬರೂ ಬಿಜೆಪಿ ಅಭ್ಯರ್ಥಿಯೊಂದಿಗೆ ಒಳ ಒಪ್ಪಂದ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲವೆಂಬ ವಿಶ್ವಾಸ ಇದೆ. ನನ್ನ ಸೋಲಿಗೆ ಪಕ್ಷದ ಯಾರನ್ನೂ ಹೊಣೆ ಮಾಡಲು ಇಚ್ಛಿಸುವುದಿಲ್ಲ” ಎಂದರು.

“ಭವಿಷ್ಯದಲ್ಲಿ ರಾಜಕೀಯವಾಗಿ ಯಾವುದೇ ಯೋಚನೆಗಳು ಸದ್ಯಕ್ಕೆ ಇಲ್ಲ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿರ್ವಹಿಸಿಕೊಂಡು ಇರುತ್ತೇನೆ” ಎಂದರು.

“ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಅವರು ನನಗೆ ಫೋನ್ ಮಾಡಿ, ಚುನಾವಣೆ ಫಲಿತಾಂಶದ
ಬಗ್ಗೆ ವಿವರವಾದ ಮಾಹಿತಿ ಪಡೆದು ಪಡೆದುಕೊಂಡಿದ್ದಾರೆ. ಅಲ್ಲದೆ, ಈ ಸಂಬಂಧ ವರದಿ ನೀಡುವಂತೆಯೂ ಕೇಳಿದ್ದಾರೆ. ಶೀಘ್ರದಲ್ಲೇ ಸೋಲಿಗೆ ಕಾರಣಗಳನ್ನು ಕುರಿತು ವಿವರವಾಗಿ ಅವರ ಗಮನಕ್ಕೆ ತರುತ್ತೇನೆ” ಎಂದು ಹೇಳಿದರು.

“ಸಚಿವರು, ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಲೀಡ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಆಲಗೂರ, ಸಚಿವರು, ಶಾಸಕರು ಪಕ್ಷದ ಗೆಲುವಿಗಾಗಿ ಶ್ರಮಿಸಿದ ಪರಿಣಾಮ ನನಗೆ 5,95,552 ಮತಗಳು ಬರಲು ಸಾಧ್ಯವಾಗಿದೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಪಕ್ಷಕ್ಕೆ ಇಷ್ಟೊಂದು ಮತಗಳು ಬಂದಿಲ್ಲ. ಆದರೆ, ನನ್ನ ಪ್ರಕಾರ 6.5 ಲಕ್ಷ ಮತಗಳ ನಿರೀಕ್ಷೆ ಇತ್ತು. ಜಿಲ್ಲೆಯಲ್ಲಿ ಇದ್ದ ಮೋದಿ ಪರವಾದ ಅಲೆ, ಹಿಂದುತ್ವದ ಪರಿಣಾಮ ಸೇರಿದಂತೆ ಇತರ ಕಾರಣಗಳಿಂದ ಸೋಲಬೇಕಾಯಿತು” ಎಂದರು.

“ಟಿಕೆಟ್ ನೀಡುವ ಸಂದರ್ಭದಲ್ಲಿ ಪಕ್ಷದಿಂದ ಒಗ್ಗಟ್ಟಿನಿಂದ ನನ್ನೊಬ್ಬನ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿ, ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ಯಾರೊಬ್ಬರೂ ನನ್ನ ವಿರುದ್ಧವಾಗಿ ಚುನಾವಣೆ ಮಾಡಿಲ್ಲ. ನಂಬಿಕೆ ದ್ರೋಹ ಆಗಿಲ್ಲ” ಎಂದರು.

“ಪಕ್ಷದ ಮುಖಂಡರೊಂದಿಗೆ ಆತ್ಮಾವಲೋಕನ ಮಾಡಿ ಕುರಿತು ಸಭೆಯನ್ನು ಚರ್ಚಿಸಲಾಗುವುದು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಹಾಕಿ ಬೆಂಬಲಿಸಿದ ಜಿಲ್ಲೆಯ ಮತದಾರರಿಗೆ, ಪಕ್ಷದ ಶಾಸಕರು, ಸಚಿವರು, ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಗೆದ್ದಿರುವ ರಮೇಶ ಜಿಗಜಿಣಗಿ ಅವರನ್ನು ಅಭಿನಂದಿಸುತ್ತಾ ಮುಂಬರುವ ದಿನಗಳಲ್ಲಿ ಅವರು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡುತ್ತೇನೆ” ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ಪ್ರೊ. ಬಿ. ಕೃಷ್ಣಪ್ಪ ಜನ್ಮದಿನ ʼಸಂಘರ್ಷ ದಿನʼವಾಗಿ ಆಚರಿಸಲು ನಿರ್ಧಾರ: ಬಾಲರಾಜ ಅರಬರ‌

ಮುಖಂಡರುಗಳಾದ ಹಮೀದ್ ಮುಶ್ರೀಫ್, ಅಬ್ದುಲ್ ಎಂ ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಗಂಗಾಧರ ಸಂಬ ವೈಜನಾಥ ಕರ್ಪೂರಮಠ, ಜಮೀರ್ ಅಹಮದ್ ರಫೀಕ್ ಟಪಾಲ್, ಸಾಹೇಬಗೌಡ ಬಿರಾದಾರ, ಗಡಗಲಾವ, ಸತೀಶ ಅಡವಿ, ಕೃಷ್ಣಾ ಕಾಮಟಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X