ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಗಡಿ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಮೀಕ್ಷರು ಮನೆಯ ಚಾವಣಿ ಮೇಲೆ ಕುಳಿತು, ಕುಟುಂಬ ಸದಸ್ಯರಿಂದ ಮಾಹಿತಿ ಪಡೆದು ಗಣತಿ ಕಾರ್ಯ ನಡೆಸುತ್ತಿದ್ದಾರೆ.
ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ಗೋಳು ಕೇಳುವವರೇ ಇಲ್ಲ. ಸಮೀಕ್ಷೆದಾರರು, ಮೇಲ್ವಿಚಾರಕರು, ಟೆಕ್ನಿಷಿಯನ್‌ಗಳ ಸಮಸ್ಯೆಗೆ ಹಿರಿಯ ಅಧಿಕಾರಿಗಳು, ಪರಿಹಾರವೆ ಸೂಚಿಸುತ್ತಿಲ್ಲ. ಗ್ರೂಪ್‌ಗಳಲ್ಲಿ ಸಮೀಕ್ಷೆ ಮಾಡುವ ಶಿಕ್ಷಕರು ಆಕ್ರೋಶ ಹೊರಹಾಕಿದರೂ ಬಾರದ ಉತ್ತರಕ್ಕೆ ಬೇಸತ್ತು ಬೆರಳೆಣಿಕೆಯಷ್ಟು ಸಮೀಕ್ಷೆ ನಡೆಸಿ ಮನೆಗೆ ನಡೆಯುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ತಿಳಿಸಿದರು.
ಇದನ್ನೂ ಓದಿ: ವಿಜಯಪುರ | ಅಬಕಾರಿ ಬಾಕಿ ಪಾವತಿಸದ ರೈತನ ಜಮೀನು ಹರಾಜು ಕ್ರಮಕ್ಕೆ ಗ್ರಾಮಸ್ಥರ ವಿರೋಧ
ಸಮೀಕ್ಷಕರ ಮೊಬೈಲ್‌ಗಳಲ್ಲಿ ಆ್ಯಪ್ ಇನ್‌ಸ್ಟಾಲ್ ಆಗುತ್ತಿಲ್ಲ, ಮೊಬೈಲ್‌ಗಳಿಗೆ ಒಟಿಪಿ ತಕ್ಷಣ ಬರುತ್ತಿಲ್ಲ, ಎಲ್ಲ ಮಾಹಿತಿ ತುಂಬಿದರೂ ಸಬ್‌ಮಿಟ್ ಆಗುತಿಲ್ಲ. ಒಂದು ಮನೆ ಸಮೀಕ್ಷೆ 2-3 ಗಂಟೆ ಆಗುತ್ತಿದ್ದು, ದಿನಕ್ಕೆ ಮೂರ್ನಾಲ್ಕು ಸಮೀಕ್ಷೆ ಮಾತ್ರ ಆಗುತ್ತಿದೆ ಎಂದು ಸಮೀಕ್ಷಕರು ದೂರಿದ್ದಾರೆ.