ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪಿಪಿಪಿ ಮಾದರಿ ವಿರೋಧಿಸಿ, ಸಂಪೂರ್ಣ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 18ನೇ ದಿನ ಪೂರೈಸಿದೆ. ಸತ್ಯಾಗ್ರಹದಲ್ಲಿ ಜಿಲ್ಲೆಯ ಕವಿಗಳು, ಪ್ರತಿರೋಧ ಕವಿಗೋಷ್ಠಿ ನಡೆಸುವ ಮೂಲಕ ಜಿಲ್ಲೆಗೆ ಪೂರ್ಣ ಪ್ರಮಾಣದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕವಿತೆ ಓದುವ ಮೂಲಕ ಪ್ರತಿರೋಧ ಕವಿ ಗೋಷ್ಠಿಗೆ ಚಾಲನೆ ನೀಡಿದ ಸಾಹಿತಿ ಪರಶುರಾಮ ಶಿವಶರಣ ಮಾತನಾಡಿ, “ಕೈ ಬಿಡದಿದ್ದರೆ ಪಿಪಿಪಿ ವೈದ್ಯಕೀಯ ಕಾಲೇಜಿನ ಪಿಂಡ, ರಾಜಕಾರಣಿಗಳ ಬುಡಕ್ಕೆ ತಾಗುವುದು ಪ್ರಮುಖರ ಹೋರಾಟದ ಕೆಂಡ” ಎಂಬ ಕವಿತೆ ವಾಚಿಸುವ ಮೂಲಕ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿದರು.

ಪ್ರೊ. ಅಡವಿ ಸ್ವಾಮಿ ಕೊಳಮಲಿ, ನಿಂಗೊಂಡಪ್ಪ ರೋಡಗಿ, ದೀಪಕ ಶಿಂದೆ, ಲಲಿತ ಬಿಜ್ಜರಗಿ, ಭರತ್ ಕುಮಾರ್ ಎಚ್ ಟಿ, ಗಂಗೂಬಾಯಿ ಉಳ್ಳಾಗಡ್ಡಿ, ರಮೇಶ ಜೋಗುರ ಸೇರಿದಂತೆ 20ಕೂ ಅಧಿಕ ಕವಿಗಳು ಕವಿತೆಗಳನ್ನು ವಾಚಿಸಿ ಜಿಲ್ಲೆಗೆ ಪೂರ್ಣ ಪ್ರಮಾಣದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ನೆರೆ ಹಾವಳಿ ವೀಕ್ಷಿಸಿದ ಬಿಜೆಪಿ ತಂಡ
ಹೋರಾಟಗಾರರಾದ ಅನಿಲ ಹೊಸಮನಿ, ಭಗವಾನ ರೆಡ್ಡಿ, ಮಲ್ಲಿಕಾರ್ಜುನ ಯಂಡಿಗೇರಿ, ಅರವಿಂದ ಕುಲಕರಣಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್ ಟಿ,ಸಿದ್ದಲಿಂಗ ಬಾಗೇವಾಡಿ, ಗೀತಾಎಚ್ ಟಿ, ಅಕ್ಷಯ ಕುಮಾರ ಅಜಮನಿ ಇದ್ದರು.