ನಗರಸಭೆಯಲ್ಲಿ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು ಲಂಚ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪ ಶುಕ್ರವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಅರ್ಜಿದಾರ ಶಶಿಕುಮಾರ್ ಜ್ಞಾನಮಿತ್ರರಿಂದ ದಾಖಲೆ ನೀಡಲು 8 ಸಾವಿರ ಲಂಚ ಕೇಳಿದ ಹಿನ್ನೆಲೆ ಮೊದಲಿಗೆ ಫೋನ್‌ಪೇ ಮೂಲಕ 5 ಸಾವಿರ ಪಡೆದಿದ್ದಾರೆ.
ಇದನ್ನೂ ಓದಿ: ಭೀಮಾನದಿ ಪ್ರವಾಹ : ಒಂದೇ ವಾರದಲ್ಲಿ 1.18 ಹೆಕ್ಟೇರ್ ಬೆಳೆ ಹಾನಿ, ಹಲವು ಸೇತುವೆ ಮುಳುಗಡೆ
ಅರ್ಜಿದಾರರ ನೀಡಿದ ದೂರಿನ ಆಧಾರದ ಮೇಲೆ ಎಸ್‌ಪಿ ಹಾಗೂ ಡಿವೈಎಸ್‌ಪಿ ರವರ ಮಾರ್ಗದರ್ಶನದಲ್ಲಿ ಪಿಐ ಸಂಗಮೇಶ ಮತ್ತು ಸಿದ್ದರಾಮ್ ಬಳೂರ್ಗಿ ನೇತೃತ್ವದ ತಂಡ ನಿಖರ ಮಾಹಿತಿ ಆಧಾರದ ಮೇಲೆ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪರ ರವರ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ.