ಯಾದಗಿರಿ | ಮಕ್ಕಳನ್ನು ಅಂಗನವಾಡಿಯಲ್ಲಿ ಬಿಟ್ಟು ಬೀಗ ಹಾಕಿದ ಸಹಾಯಕಿ!

Date:

Advertisements

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬುದೂರು ಗ್ರಾಮದ ಅಂಗನವಾಡಿ ಕೇಂದ್ರ-1ರ ಸಹಾಯಕಿಯೊಬ್ಬರು ಅಂಗನವಾಡಿಗೆ ಬಂದ ಮಕ್ಕಳನ್ನು ಅಂಗನವಾಡಿಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ಜಮೀನಿಗೆ ತೆರಳಿದ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಕಾರ್ಯಕರ್ತೆ ಸರೋಜ ಕಂದಕೂರ ಅವರು ಇಲಾಖೆ ಸಭೆ ನಿಮಿತ್ಯ ಬೇರೆ ಗ್ರಾಮಕ್ಕೆ ತೆರಳಿದರು. ಈ ವೇಳೆ ಮಕ್ಕಳನ್ನು ಸಹಾಯಕಿ ನೋಡಿಕೊಳ್ಳುತ್ತಿದ್ದರು. ಆದರೆ ಸಹಾಯಕಿ ಸಾವಿತ್ರಮ್ಮ ಎಂಬುವವರು ಮಕ್ಕಳನ್ನು ಕೇಂದ್ರದಲ್ಲಿ ಬಿಟ್ಟು ಬೀಗ ಹಾಕಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕೇಂದ್ರದಿಂದ ಹೊರಗಡೆ ಬರಲಾಗದಕ್ಕೆ ಭೀತಿಗೊಂಡ ಮಕ್ಕಳು ಅಳಲಾರಂಭಿಸಿದ್ದಾರೆ. ಇದನ್ನು ಕೇಳಿದ ಸ್ಥಳೀಯರು ತಕ್ಷಣ ಅಂಗನವಾಡಿ ಕೇಂದ್ರದೆಡೆಗೆ ದಾವಿಸಿ ಮಕ್ಕಳಿಗೆ ಸಮಾಧಾನ ಪಡಿಸಿದ್ದಾರೆ.

ಬಳಿಕ ಅಂಗನವಾಡಿ ಸಹಾಯಕಿಯ ನಿರ್ಲಕ್ಷ್ಯವನ್ನು ಖಂಡಿಸಿ ಸಭೆಗೆಂದು ತೆರಳಿದ ಅಂಗನವಾಡಿ ಕಾರ್ಯಕರ್ತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಕಾರ್ಯಕರ್ತೆ ಸರೋಜ ಕೇಂದ್ರಕ್ಕೆ ಬಂದು ಬೀಗ ತೆಗೆದ ಬಳಿಕ ಮಕ್ಕಳು ನಿಟ್ಟುಸಿರು ಬಿಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿ | ಆಸ್ತಿಗಾಗಿ ಅಕ್ಕನನ್ನು ಕೊಂದ ತಮ್ಮನಿಗೆ ಕಠಿಣ ಜೀವಾವಧಿ ಶಿಕ್ಷೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಜೆಡಿಯು ಪಕ್ಷದಿಂದ ಚಾಲನೆ

ಕೋಲಾರ: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ...

ಸೊರಬ | ಹಬ್ಬದ ಹೋರಿ ಜೈ ಹನುಮಾನ್ ಅನಾರೋಗ್ಯದಿಂದ ಸಾವು

ಸೊರಬ, ತಾಲೂಕಿನ ಗಡಿಭಾಗ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ...

ಶಿರಸಿ | ಅರಣ್ಯವಾಸಿಗಳ ಮೇಲ್ಮನವಿ ಅಭಿಯಾನ; 20 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಅರಣ್ಯ ವಾಸಿಗಳು ಶಿರಸಿ ಪಟ್ಟಣದ ಪ್ರಮುಖ...

ಧಾರವಾಡ | ನಿಗದಿತ ಅವಧಿಗಿಂತ ಮೊದಲು ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕ ಗುಡೇನಕಟ್ಟಿ’ಗೆ ಸನ್ಮಾನ

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಳಿಸಿದ ಶಿಕ್ಷಕ...

Download Eedina App Android / iOS

X