ಒಂದೇ ದಿನ ಹೃದಯಾಘಾತದಿಂದ ಅಣ್ಣ-ತಮ್ಮ ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಮಂಗಳವಾರ ನಡೆದಿದೆ.
ಇರ್ಫಾನ್ ಪೇಶಮಾಮ್ (38) ಹಾಗೂ ಶಮಶುದ್ದೀನ್ ಪೇಶಮಾಮ್ (42) ಮೃತ ಸಹೋದರರು ಎಂದು ತಿಳಿದು ಬಂದಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಮೊದಲು ಇರ್ಫಾನ್ ಪೇಶಮಾಮ್ ಹೃದಯಾಘಾತದಿಂದ ಸಾವನ್ನಪ್ಪಿದ, ಅಣ್ಣನ ಸಾವಿನ ಸುದ್ದಿ ಕೇಳಿ ತಮ್ಮನಿಗೂ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇಷ್ಟು ದಿನ ಜೊತೆಯಾಗಿ ಬೆಳೆದಿದ್ದ ಸಹೋದರರು, ಒಂದೇ ದಿನ ಸಹೋದರರು ಸಾವನ್ನಪ್ಪಿದ್ದು, ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಇಬ್ಬರನ್ನು ಕಳೆದುಕೊಂಡಿರುವ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.