ಯಾದಗಿರಿ | ದೀಕ್ಷಾ ಕನ್ಸಲ್ಟೆನ್ಸಿ ರಾಯಚೂರು ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ದಸಂಸ ಆಗ್ರಹ

Date:

ದೀಕ್ಷಾ ಕನ್ಸಲ್ಟೆನ್ಸಿ ರಾಯಚೂರು ಏಜೆನ್ಸಿಯ ಮಾಲಿಕ ಮತ್ತು ಶಹಾಪೂರದ ಉಪ ಗುತ್ತಿಗೆದಾರ ವೇಂಕಟೇಶ ಯಕ್ಷಂತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡರು ಪ್ರತಿಭಟನೆ ನಡೆಸಿದರು.

- Advertisement -

ಶಹಾಪೂರದ ನಗರದ ತಹಶೀಲ್ದಾರರ ಕಚೇರಿ ಎದುರು ದಸಂಸ (ಭೀಮವಾದ) ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿಯ ಅಧಿಕಾರಿಗಳು 28 ಜನ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ವಜಾಗೊಳಿಸಿದ್ದಾರೆ. ಇದು ಕಾರ್ಮಿಕ ವಿರೋಧಿ ನೀತಿಯಾಗಿದೆ. ವಜಾಗೊಂಡ ಕಾರ್ಮಿಕರನ್ನು ಮರು ನೇಮಕಾತಿ ಮಾಡಿಕೂಳ್ಳಬೇಕು ಎಂದು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ದಸಂಸ ಮುಖಂಡ ಶರಣು ದೋರನಹಳ್ಳಿ ಹಾಗೂ ಶ್ರೀಶೈಲ ಹೊಸಮನಿ ಮಾತನಾಡಿ,
“ದೀಕ್ಷಾ ಕನ್ಸಲ್ಟೆನ್ಸಿ ರಾಯಚೂರು ಶಾಖೆಯು, ಶಹಾಪೂರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಪ್ರತಿ ತಿಂಗಳು 5ನೇ ತಾರೀಕು ವೇತನ ಪಾವತಿ ಮಾಡಲಾಗುತ್ತಿಲ್ಲ. ಸರ್ಕಾರದ ಆದೇಶದನ್ವಯ ಮೀಸಲಾತಿಯನ್ನು ಅನುಸರಿಸದೇ ಕಾರ್ಯಾದೇಶದಲ್ಲಿನ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸದೇ ಪ್ರತಿ ತಿಂಗಳು ಸಿಬ್ಬಂದಿಗಳ ಹೆಸರಿನಲ್ಲಿ ಸರ್ಕಾರಕ್ಕೆ ವಂಚಿಸಿ ಲಕ್ಷಾಂತರ ರೂಪಾಯಿ ಹಣವನ್ನು ಲೂಟಿ ಮಾಡುತ್ತಿದೆ. ಇವರು ಲೂಟಿ ಮಾಡಿದ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಮರಳಿ ಭರಿಸುವಂತೆ ಕ್ರಮ ವಹಿಸಬೇಕು. ಹೊರ ಗುತ್ತಿಗೆ ಸಿಬ್ಬಂದಿಗಳ ಹೆಸರಿನಲ್ಲಿ ಲೂಟಿ ಮಾಡಿದ ಹಣವನ್ನು ತನಿಖೆ ಮಾಡಲು ಒಂದು ಉನ್ನತ ಮಟ್ಟದ ತನಿಖಾ ತಂಡವನ್ನು ನಿಯೋಜಿಸಬೇಕು” ಎಂದು ಆಗ್ರಹಿಸಿದರು.

WhatsApp Image 2025 09 15 at 10.28.10 PM

“ಸರ್ಕಾರದ ಸುತ್ತೋಲೆಯನ್ವಯ ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ. ಟೆಂಡ‌ರ್ ಕಾರ್ಯಾದೇಶದಲ್ಲಿರುವಂತೆ ಬಾಲಕಿಯರ ವಸತಿ ನಿಲಯಗಳಿಗೆ ಮಾತ್ರ ಕಾವಲುಗಾರರನ್ನು ನಿಯೋಜಿಸಲು ಅವಕಾಶವಿದೆ. ಆದರೆ ಕೆಲವು ಬಾಲಕರ ವಸತಿ ನಿಲಯಗಳಲ್ಲಿ ಅಡುಗೆ ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ ಕೆಲಸ ಮಾಡಿಸಿಕೊಂಡು ವೇತನ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ದಿನವೆಲ್ಲಾ ದುಡಿಸಿಕೊಂಡು, ರಾತ್ರಿ ಕಾವಲುಗಾರ ಎಂದು ಸುಳ್ಳು ದಾಖಲಿಸಿ ಅವರಿಗೆ ಕಡಿಮೆ ವೇತನ ಜಮಾ ಮಾಡಿ ವಂಚನೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಹೊರಗುತ್ತಿಗೆ ನೌಕರ ರಾಜು ಜಾಲಹಳ್ಳಿ ಮಾತನಾಡಿ, “ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸ್ವಾಧೀನಕ್ಕೆ ಸಂಬಂಧಿಸಿದ ಕೃಷಿ ಸಂಶೋಧನಾ ಕೇಂದ್ರ ಭೀಮರಾಯನಗುಡಿಯಲ್ಲಿ ಸುಮಾರು 10-20 ವರ್ಷಗಳಿಂದ ಗುತ್ತಿಗೆ ದಿನಗೂಲಿ ನೌಕರರಾಗಿ 28 ಜನರು ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಕಾನುನು ಬಾಹಿರವಾಗಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಿ 28 ಜನ ಕಾರ್ಮಿಕರನ್ನು ಕೆಲಸದಿಂದ ತೆರವುಗೊಳಿಸಿರುತ್ತಾರೆ. ಜೀವನವೇ ಈ ಕೆಲಸದ ಮೇಲೆ ಅವಲಂಬಿತರಾಗಿರುವ ಈ ಕುಟುಂಬಗಳಿಗೆ ಈ ರೀತಿ ಅನ್ಯಾಯವೆಸಗಿರುವುದು ಸರಿಯಲ್ಲ. ಕಾರ್ಮಿಕರಿಗೆ ಸರ್ಕಾರ ನೂರಾರು ಕಾನೂನು ತಂದರೂ ಸಹ ದುಡಿಯುವ ಕೈಗಳಿಗೆ ನ್ಯಾಯ ಸಿಗುತ್ತಿಲ್ಲ. ಇವರನ್ನು ಈ ಕೂಡಲೇ ಮರು ನೇಮಕ ಮಾಡಿಕೊಂಡು 28 ಜನರ ಜೀವನಕ್ಕೆ ಅನೂಕೂಲ ಮಾಡಿಕೊಡಬೇಕೆಂದು” ಮನವಿ ಮಾಡಿದರು.

ಒಂದು ವಾರದೊಳಗಾಗಿ ಈ ಎರಡು ಸಮಸ್ಯೆ ಕುರಿತು ಕ್ರಮ ವಹಿಸದಿದ್ದಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗಳೊಂದಿಗೆ ನಿರಂತರ ಉಪವಾಸ ಧರಣಿ ಹಮ್ಮಿಕೊಳುತ್ತೇವೆಂದು ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಯಾದಗಿರಿ | ಸತ್ಯ, ನ್ಯಾಯದ ಪರ ನಿಲ್ಲುವುದೇ ನಿಜವಾದ ಧರ್ಮ

ಮನವಿ ಸ್ವೀಕರಿಸಿ ತಾಲೂಕು ತಹಶೀಲ್ದಾರ ಸಿದ್ದಾರೂಢ ಮಾತನಾಡಿ, “ಸರಕಾರಿ ನೌಕರರಾಗಿರಲಿ, ಹೊರಗುತ್ತಿಗೆ ನೌಕರರಾಗಿರಲಿ ಅವರಿಗೆ ಇಎಸ್‌ಐ, ಇಪಿಎಫ್ ನೀಡುವುದು ಕಡ್ಡಾಯವಾಗಿದೆ. ದೀಕ್ಷಾ ಏಜೆನ್ಸಿಗಳ ಮೇಲೆ ಇರುವ ಆರೋಪ ಮತ್ತು ಕೃಷಿ ಸಂಶೋಧನಾ ಕೇಂದ್ರದ 28 ಜನ ಗುತ್ತಿಗೆ ದಿನಗೂಲಿ ನೌಕರರನ್ನು ಏಕಾಏಕಿ ಕೆಲಸದಿಂದ ವಜಾ ಗೋಳಿಸಿರುವ ಕುರಿತು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಹದಿನೈದು ದಿನಗಳ ಒಳಗಾಗಿ ಕ್ರಮ ಕೈಗೊಳ್ಳಲಾಗುವುದೆಂದು” ತಿಳಿಸಿದರು.

ಈ ಸಂದರ್ಭದಲ್ಲಿ ಕದಸಂಸ ಭೀಮವಾದ ರಾಜ್ಯ ಸಮಿತಿ ಸದಸ್ಯ ಶಿವು ಪೋತೆ, ದಸಂಸ ಜಿಲ್ಲಾಧ್ಯಕ್ಷ ವಿಶ್ವ ನಾಟೇಕರ್, ತಾಲೂಕು ಸಂಚಾಲಕ ಶೇಖರ್ ಬಡಿಗೇರ, ಸಂತೋಷ ಗೋಗಿ, ಸುನೀಲ್ ಗೋಗಿ, ಮಲ್ಲಿಕಾರ್ಜುನ ಬಡಿಗೇರ, ವಿಶ್ವ ಪರಸಪೂರ್, ಮಲ್ಲಿಕಾರ್ಜುನ ಮೈಕೆ, ಸಾಬಣ್ಣ ಹೊಯಾಳ, ಜೈಭೀಮ ಯಮನೂರ್, ವಿಶ್ವ ಹಲಭಾವಿ, ಪರಶುರಾಮ ಐಯಾಳ, ಮಾಳಪ್ಪ ಹಲಭಾವಿ, ಮರಲಿಂಗ ಸಾವೂರ್, ದೇವರಾಜ್, ರಾಜು ದೇವಿಕೇರಿ ಹೊರಗುತ್ತಿಗೆ ನೌಕರರಾದ ರಾಜು ಜಲಹಳ್ಳಿ, ಬಸವರಾಜ ದಿಗ್ಗಿ, ಸಂತೋಷ ಪವಾರ್, ವಿನೋದ, ಬಸವರಾಜ್ ಗೋಗಿ, ಭೀಮರಾಯ, ರಾಜುಗೌಡ, ಮಾನಿಬಾಯಿ, ಲಲಿತಾ, ಬಸಮ್ಮ, ನಿಲಮ್ಮ, ಲಕ್ಷ್ಮಿಬಾಯಿ, ಉಮಾ, ಅಯ್ಯಮ್ಮ, ಉಮಾ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...