ಕಳೆದ ಒಂದು ವರ್ಷದಿಂದ ವಿಶೇಷ ಪರಿಹಾರ ಬೋಧನಾ ಕೇಂದ್ರದಲ್ಲಿ ಪ್ರತಿದಿನ ಸಂಜೆ 5 ರಿಂದ 7 ಗಂಟೆಯವರೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಇಂತಹ ವಿಶೇಷ ಪರಿಹಾರ ಭೋದನಾ ಕೇಂದ್ರಗಳನ್ನು ವರ್ಲ್ಡ್ ವಿಜನ್ ಇಂಡಿಯಾ ಸಂಸ್ಥೆಯು ಜಿಲ್ಲೆಯ 10 ಆಯ್ದ ಗ್ರಾಮಗಳಲ್ಲಿ ನಡೆಸುತ್ತಿದೆ. ಈ ಯೋಜನೆಯು ಹಿಂದುಳಿದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ರಾಷ್ಟ್ರೀಯ ಕಚೇರಿಯ ಉಪ ನಿರ್ದೇಶಕ ಸ್ಯಾಮ್ಸನ್ ಬಂಟು ಹೇಳಿದರು.
ಗುರುವಾರ ಶಹಾಪುರ್ ತಾಲೂಕಿನ ಕಾನ್ಯಕುಳ್ಳೂರ ಗ್ರಾಮದ ಜಾಪಾನಾಯಕ್ ತಾಂಡದಲ್ಲಿ ವರ್ಲ್ಡ್ ಮಿಜನ್ ಇಂಡಿಯಾ ಸಂಸ್ಥೆ ವತಿಯಿಂದ ವಿಶೇಷ ಪರಿಹಾರ ಬೋಧನಾ ಕೇಂದ್ರದಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಕಥೆಗಳ ಮೂಲಕ ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಅನಿಲ್ ತೇಜಪ್ಪ ಮಾತನಾಡಿ, ‘ಸಂಸ್ಥೆಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಮಾಹಿತಿ ನೀಡುವುದರ ಜೊತೆಗೆ ಅನೇಕ ಫಲಾನುಭವಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯ ನೀಡಲಾಗಿದೆ’ ಎಂದು ಹೇಳಿದರು.
ಈ ವೇಳೆ ಮುಖ್ಯ ಗುರು ಅಬ್ದುಲ್ ಹಮೀದ್ ಮಾತನಾಡಿ, ‘ಈ ಕಾರ್ಯಕ್ರಮದ ಹಿನ್ನೆಲೆ ಗ್ರಾಮದಲ್ಲಿ ಹಬ್ಬದ ವಾತಾವರಣವಿತ್ತು. ಮಕ್ಕಳಲ್ಲಿ ಉತ್ಸಾಹ ಹೆಚ್ಚಾಗಿದ್ದು, ಪೋಷಕರು ಸಹ ಭಾಗವಹಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಅಘೋಷಿತ ಸ್ಲಂಗಳನ್ನು ಸ್ಲಂ ಎಂದು ಘೋಷಣೆ ಮಾಡಿ: ಸ್ಲಂ ಜನಾಂದೋಲನದಿಂದ ಸಿಎಂಗೆ ಮನವಿ
ಈ ಸಂದರ್ಭದಲ್ಲಿ ಮೌನೇಶ್, ಹನುಮಂತ್, ಮಾರುತಿ ಚೌಹಾಣ್, ಶಂಕರ್ ಪೂಜಾರಿ, ಅಬ್ದುಲ್ ಅಹಮದ್, ಅನಿತಾ ಚವಾನ್, ತಾರಾಬಾಯಿ, ರಾಬರ್ಟ್, ಮೈಕಲ್, ಮೆನಕಾ, ಸಿದ್ದಮ್ಮ, ಶಿವು, ಅಶೋಕ್, ಶರಣು, ರೇಖಾ, ಮಂಜುಳಾ ಉಪಸ್ಥಿತರಿದ್ದರು.