ಚಾಮರಾಜನಗರ ಜಿಲ್ಲೆ, ಕೊಳ್ಳೆಗಾಲ ತಾಲ್ಲೂಕು ಕೊಂಗನಹಳ್ಳಿ ಗ್ರಾಮದ ಯುವಕ ರಾಜಪ್ಪ (30) ಆನ್ಲೈನ್ ಸಾಲದ ಆಪ್ ನಿಂದ ವಂಚನೆಗೊಳಗಾಗಿ ಮಾನಕ್ಕೆ ಅಂಜಿ ಅಸಹಜ ಸಾವಿಗೀಡಾಗಿರುವ ಪ್ರಕರಣ ವರದಿಯಾಗಿದೆ.
ಆನ್ಲೈನ್ ಸಾಲದ ಆಪ್ 10 ರಿಂದ 15 ಲಕ್ಷ ಸಾಲ ನೀಡುವ ಭರವಸೆ ನಂಬಿ, ಯುವಕ ರಾಜಪ್ಪ ಆನ್ಲೈನ್ ಮೂಲಕ ₹2,50,000 ರೂಪಾಯಿ ಪಾವತಿ ಮಾಡಿದ್ದಾರೆ. ಇಂಜಿನಿಯರ್ ವಿದ್ಯಾರ್ಥಿಯಾಗಿದ್ದು, ಸಾಲ ಸಿಗುವ ಭರವಸೆ ನಂಬಿ ಹಣ ಪಾವತಿ ಮಾಡಿ ಮೋಸ ಹೋಗಿರುವುದು ಮನದಟ್ಟಾದ ಬಳಿಕ ಮಾನಕ್ಕೆ, ಮನೆಯವರಿಗೆ ಅಂಜಿ ಅಸಹಜ ಸಾವಿಗೆ ಶರಣಾಗಿರುವುದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಗುಂಡ್ಲುಪೇಟೆ | ಹುಲಿ ಪತ್ತೆಗೆ ಬೋನಿಟ್ಟ ಅರಣ್ಯ ಇಲಾಖೆ; ಸಿಬ್ಬಂದಿಯನ್ನೇ ಕೂಡಿಟ್ಟ ಗ್ರಾಮಸ್ಥರು
ವಿಷಯ ತಿಳಿದ ಪೋಷಕರು ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಸುಪ್ರೀತ್ ರವರು ಸಿಬ್ಬಂದಿಗಳೊಡನೆ ಆಸ್ಪತ್ರೆಗೆ ಭೇಟಿ ನೀಡಿ ದೇಹ ಪರಿಶೀಲನೆ ನಡೆಸಿ, ಸದರಿ ಪ್ರಕಾರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.