ಕಾಂಗ್ರೆಸ್ ಕಛೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

Date:

Advertisements

ಕೋಲಾರ :ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಗುರುವಾರ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಮಾತನಾಡಿ ಗಾಂಧೀಜಿಯವರು ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಪ್ರತಿಪಾದಿಸಿದ ತತ್ವ ಸಿದ್ದಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ ಅಹಿಂಸೆಯೇ ಗಾಂಧಿಜೀಯವರ ಅಸ್ತ್ರವಾಗಿತ್ತು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ರಾಷ್ಟ್ರೀಯ ರಜಾದಿನವೆಂದು ಗುರುತಿಸಲಾಗಿದೆ. ವಿಶ್ವಸಂಸ್ಥೆಯು ಗಾಂಧಿ ಜಯಂತಿಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನ ಎಂದು ಆಚರಿಸಿ ಮಹಾತ್ಮ ಗಾಂಧಿಗೆ ತಮ್ಮ ಗೌರವ ನಮನಗಳನ್ನು ಸಲ್ಲಿಸುತ್ತದೆ ಎಂದರು

Advertisements

ನಗರ ಬ್ಲಾಕ್ ಅಧ್ಯಕ್ಷ ಅಪ್ಸರ್ ಮಾತನಾಡಿ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ಎಲ್ಲಾ ಘಟಕಗಳಿಂದ ಕಾರ್ಯಕ್ರಮ ಮಾಡೋಣ ಪಕ್ಷವು ಅವಕಾಶ ಕೊಟ್ಟಿದೆ ಸಂಘಟನೆಗೆ ಎಲ್ಲರ ಜೊತೆಗೆ ಗುಂಪುಗಾರಿಕೆ ಇಲ್ಲದೆ ಕೆಲಸ ಮಾಡೋಣ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಮುಖಂಡರ ವಿಶ್ವಾಸ ತೆಗೆದುಕೊಂಡು ಹೋಗತ್ತೇವೆ ಬೂತ್ ಮತ್ತು ಗ್ರಾಮದಲ್ಲಿ ಮಟ್ಟದಲ್ಲಿ ಸಂಘಟನೆಗೆ ಒತ್ತು ನೀಡಲಾಗುತ್ತದೆ ಎಂದರು

ಇದನ್ನು ಓದಿದ್ದೀರಾ..? ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ಪ್ರಸಾದ್ ಬಾಬು, ಅಂಬರೀಷ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಜಯದೇವ್, ಎಸ್ಟಿ ಘಟಕದ ನಾಗರಾಜ್ ಮುಖಂಡರಾದ ಒಬಿಸಿ ಮಂಜುನಾಥ್, ವೆಂಕಟಪತಿಯಪ್ಪ, ವೀರೇಂದ್ರ ಪಾಟೀಲ್, ಯಲವಾರ ರಾಜಕುಮಾರ್, ಜಗನ್ ಜಗದೀಶ್, ಚಿನ್ನಾಪುರ ನಾರಾಯಣಸ್ವಾಮಿ, ನದೀಂ, ಕುಮಾರ್, ಜಾಲಿಬಾನು, ಹರೀಷ್, ಮುಂತಾದವರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರ ದಂಪತಿ

ಶಿವಮೊಗ್ಗ, ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯೋರ್ವರ ಮೇಲೆ...

ಶಿವಮೊಗ್ಗ | ಅಮ್ಜದ್ ಹತ್ಯೆ ಯತ್ನ, ಐವರು ಸೆರೆ : ಪೊಲೀಸ್ ವರಿಷ್ಟಧಿಕಾರಿ ಮಿಥುನ್ ಕುಮಾರ್ ಮಾಹಿತಿ

ಶಿವಮೊಗ್ಗ, ನಿನ್ನೆ ಸಂಜೆ ನಗರದಲ್ಲಿ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜಾದ್ ಸೇರಿದಂತೆ ಇಬ್ಬರ...

ಶಿವಮೊಗ್ಗ | ಶ್ರೀ ಮೈಲಾರೇಶ್ವರ ದಸರಾ ಹಾಗೂ ರಾಜಬೀದಿ ಉತ್ಸವ

ಶಿವಮೊಗ್ಗ ನಗರದ ಬಿ, ಹೆಚ್, ರಸ್ತೆಯಲ್ಲಿ ಇರುವ ಶ್ರೀ ಮೈಲಾರೇಶ್ವರ ದೇವಸ್ಥಾನದಲ್ಲಿ...

ಶಿವಮೊಗ್ಗ | ಅ. 6ರಿಂದ ಅರಸಾಳು, ಕುಂಸಿಯಲ್ಲಿ ಇಂಟರ್ಸಿಟಿ ರೈಲು‌ ನಿಲುಗಡೆ

ಶಿವಮೊಗ್ಗ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಬೆಂಗಳೂರು –...

Download Eedina App Android / iOS

X