ಚಿಕ್ಕಬಳ್ಳಾಪುರ | ಡಿಸ್ಕವರಿ ವಿಲೇಜ್‌ನಲ್ಲಿ ಪೌರಕಾರ್ಮಿಕರ ದಿನಾಚರಣೆ ಆಯೋಜಿಸಿದ ನಗರಸಭೆ

Date:

Advertisements

ಚಿಕ್ಕಬಳ್ಳಾಪುರ: ನಗರದ ಸ್ವಚ್ಚತೆ ಮತ್ತು ನಾಗರೀಕರ ಆರೋಗ್ಯಕ್ಕಾಗಿ ವರ್ಷದ ೩೬೫ ದಿನಗಳೂ ಶ್ರಮಿಸುವ ಪೌರಕಾರ್ಮಿಕರ ಅಕಂಳಕ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ.ಇದನ್ನು
ಮನಗಂಡ ಚಿಕ್ಕಬಳ್ಳಾಪುರ ನಗರಾಡಳಿತ ಪೌರಕಾರ್ಮಿಕರ ದಿನಾಚರಣೆಯನ್ನು ಡಿಸ್ಕವರಿ ವಿಲೇಜ್‌ನಲ್ಲಿ ಆಚರಿಸುವ ಮೂಲಕ ಈ ವರ್ಗದ ಸೇವೆಯನ್ನು ಸ್ಮರಿಸುವ ಕೆಲಸವನ್ನು ಮಾಡಿರುವುದು ನಾಗರೀಕ ವಲಯದ ಪ್ರಶಂಸೆಗೆ ಪಾತ್ರವಾಗಿದೆ.

ಹೌದು ಚಿಕ್ಕಬಳ್ಳಾಪುರ ನಗರಸಭೆಯ ಆಡಳಿತ ಮಂಗಳವಾರ ವಿಶ್ವಪೌರಕಾರ್ಮಿಕರ ದಿನಾಚರಣೆಯನ್ನು ಸಾಂಪ್ರದಾಯಿಕವಾಗಿ ನಗರಸಭೆ ಆವರಣದಲ್ಲಿ ಆಚರಿಸುವ ಬದಲಿಗೆ ನಂದಿಬೆಟ್ಟದ ತಪ್ಪಲಿನಲ್ಲಿರುವ ಪ್ರತಿಷ್ಟಿತ ಡಿಸ್ಕವರಿ ವಿಲೇಜ್‌ನಲ್ಲಿ ಆಚರಿಸಿ ಗಮನ ಸೆಳೆದಿದೆ.

ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ಪೌರಕಾರ್ಮಿಕರ ಕುಟುಂಬಗಳನ್ನು ಈ ದಿನ ಅವರ ಸೇವೆಗೆ ಒಂದುದಿನ ವಿರಾಮ ನೀಡಿ ಅವರನ್ನೆಲ್ಲಾ ಡಿಸ್ಕವರಿ ವಿಲೇಜ್‌ಗೆ ಆಹ್ವಾನಿಸಿ ಮನರಂಜನಾ ಕಾರ್ಯಕ್ರಮ, ಕ್ರೀಡಾಕೂಟ,ಸ್ವಿಮ್ಮಿಂಗ್ ಇತ್ಯಾದಿಗಳಲ್ಲಿ ತೊಡಗಿಸುವ ಮೂಲಕ ಏಕತಾನತೆಯ ಬದುಕಿಗೆ ಒಂದುದಿನವಾದರೂ ವಿರಾಮ ನೀಡುವುದು ಆಮೂಲಕ ಪೌರಕಾರ್ಮಿಕರಲ್ಲಿ ಜೀವನೋತ್ಸಾಹ ಹೆಚ್ಚುವಂತೆ ಮಾಡುವಲ್ಲಿ ನಗರಾಡಳಿತ ಸಂಪೂರ್ಣವಾಗಿ ಯಶಸ್ವಿಯಾಯಿತು.

ಮಧ್ಯಾಹ್ನ ಅವರಿಗೆ ಇಷ್ಟದ ಊಟವನ್ನು ಉಣಬಡಿಸುವ ಮೂಲಕ ಶ್ರಮಜೀವಿಗಳ ಹೊಟ್ಟೆತಣ್ಣಗಿರಲಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಮೂಲಕ ಪೌರಕಾರ್ಮಿಕರ ದಿನಾಚರಣೆಯನ್ನು ಹೀಗೂ ಆಚರಿಸಬಹುದು ಎಂಬ ಸಂದೇಶವನ್ನು ರವಾನಿಸಲಾಯಿತು.
ಇದೇ ಸಂದರ್ಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ಎ.ಗಜೇಂದ್ರ ನಗರದ ಆರೋಗ್ಯ ಕಾಪಾಡಲು ವರ್ಷವಿಡೀ ಅಹರ್ನಿಶಿ ಶ್ರಮಿಸುತ್ತಿರುವ ಪೌರಕಾರ್ಮಿಕರು ನಾಗರೀಕರ ಆರೋಗ್ಯ ಕಾಪಾಡುವ ನಿಜವಾದ ಸೇನಾನಿಗಳು.ಸೂರ್ಯೋದಯಕ್ಕೂ ಮುನ್ನವೇ ಬೀದಿಗಿಳಿಯುವ ಇವರು ನಗರ ಬೀದಿಬೀದಿಗಳಲ್ಲಿ ಹರಡಿರುವ ಕಸವನ್ನು ಗುಡಿಸಿ ಸ್ವಚ್ಛಮಾಡುವ ಜತೆಗೆ ಮನೆಮನೆಗೆ ತೆರಳಿ ಹಸಿಕಸ ಹೊಣಕಸ ಸಂಗ್ರಹಿಸುವ ಕೆಲಸವನ್ನು ಒಂದು ದಿನವೂ ಬಿಡದೆ ಮಾಡುತ್ತಿದ್ದಾರೆ.ಇಂತಹ ಪೌರ ಕಾರ್ಮಿಕರ ದಿನವನ್ನು ವಿಶಿಷ್ಟವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಎಲ್ಲಾ ೩೧ ವಾರ್ಡುಗಳ ಸದಸ್ಯರು,ಆಯುಕ್ತರು,ಎಲ್ಲಾ ಸಿಬ್ಬಂದಿಯನ್ನು ಇಲ್ಲಿಗೆ ಆಹ್ವಾನಿಸಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ನಂದಿಬೆಟ್ಟದ ತಪ್ಪಲಿನಅಲ್ಲಿ ಪ್ರಕೃತಿಯ ಮಡಿಲಿನಲ್ಲಿಯೇ ವಿಭಿನ್ನವಾದ ಪರಿಸರದಲ್ಲಿ ಪೌರಕಾರ್ಮಿಕರ ದಿನಾಚರಣೆ ಆಯೋಜನೆ ಮಾಡುವ ಮೂಲಕ ಶ್ರಮಿಕ ಕುಂಟುಂಬಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೇವೆ.ಅವರೂ ಕೂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಭಾಗಿಯಾಗಿ ಸಂತೋಷಪಟ್ಟಿದ್ದಾರೆ.ಭಗವಂತ ಈ ಕುಟುಂಬಗಳಿಗೆ ಆರೋಗ್ಯ ಭಾಗ್ಯದ ಜತೆಗೆ ಎಲ್ಲವನ್ನೂ ಕರುಣಿಸಲಿ ಎಂದು ಇದೇ ವೇಳೆ ಹಾರೈಸಿ ಶುಭಕೋರಿದರು.

ನಾಗರಾಜ್ ಮಾತನಾಡಿ ಪೌರಕಾರ್ಮಿಕರ ದಿನಾಚರಣೆಯನ್ನು ಡಿಸ್ಕವರಿ ವಿಲೇಜ್‌ನಲ್ಲಿ ಆಯೋಜಿಸಿರುವುದು ಸಂತೋಷ ತಂದಿದೆ.ನಗರಸಭೆಗೆ ಒಳ್ಳೆಯ ಆಯುಕ್ತರು ಬಂದಿದ್ದಾರೆ.ಎಲ್ಲರೂ ಕೂಡಿ ನಗರಸಭೆಯ ಘನತೆ ಗೌರವ ಕಾಪಾಡಲು ಶ್ರಮಿಸೋಣ.ಪೌರಕಾರ್ಮಿಕರ ಅಗತ್ಯಗಳನ್ನು ಕಾಲಕಾಲಕ್ಕೆ ಪೂರೈಸೋಣ,ಸರಕಾರಿ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡೋಣ ಎಂದರು.

ಹಿರಿಯ ಸದಸ್ಯೆ ನಿರ್ಮಲಾ ಪ್ರಭು ಮಾತನಾಡಿ ಇದೊಂದು ವಿಭಿನ್ನ ಕಾರ್ಯಕ್ರಮ.ನನ್ನ ಅನುಭವದ ೨೦ ವರ್ಷದಲ್ಲಿ ಈ ರೀತಿಯ ಕಾರ್ಯಕ್ರಮ ಯಾರೂ ಮಾಡಿರಲಿಲ್ಲ.ಪೌರಕಾರ್ಮಿಕರು ಇದೇ ಜೀವನ ಎಂದು ಭಾವಿಸಿ ಬದುಕನ್ನು ಅಸಹನೀಯ ಮಾಡಿಕೊಳ್ಳದೆ,ನಿತ್ಯವೂ ತಮ್ಮ ಬದುಕಲ್ಲಿ ಸಂತೋಷ ಕಾಣಬೇಕು.ಉದ್ಯೋಗದ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯಚಾರಿ ಮಾತನಾಡಿ ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರಿಗಾಗಿ ಮಾಡುತ್ತಿರುವುದು ದಿನಾಚರಣೆ ಅಲ್ಲ ಬದಲಿಗೆ ಇದೊಂದು ಹಬ್ಬವಾಗಿದೆ.ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದು ಮಾತು ಮುಗಿಸಿದರು.

ಪೌರಕಾರ್ಮಿಕ ಲೋಡರ್ ಚಂದ್ರ ಮಾತನಾಡಿ ನಗರಸಭೆ ಆಡಳಿತ ನಮಗೆ ನೀಡುವ ಸಂಬಳವನ್ನು ನೇರಪಾವತಿ ಮೂಲಕ ನೀಡುವಂತಾದರೆ ತುಂಬಾ ಅನುಕೂಲ ಆಡಲಿದೆ.ಇದನ್ನು ಮಾಡಿಸಿಕೊಡಿ ಎಂದು ಮನವಿ ಮಾಡಿದರು.

ಪೌರಕಾರ್ಮಿಕ ಸುರೇಶ್ ಮಾತನಾಡಿ ಔಟ್ ಸೋರ್ಸ್ ಕಾರ್ಮಿಕರ ಯೋಗಕ್ಷೇಮ ಕಾಪಾಡಲು ನಗರಾಡಳಿತ ಮುಂದಾಗಬೇಕಿದೆ.ಹತ್ತಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು. ಇದೇ ವೇಳೆ
ಆಯುಕ್ತರಾದ ಮನ್ಸೂರ್ ಅಲಿ ಮಾತನಾಡಿದರು.

ಇದನ್ನು ಓದಿದ್ದೀರಾ..? ಚಿಂತಾಮಣಿ | ಎಸ್‌ಟಿ ಪಟ್ಟಿಗೆ ಕುರುಬ ಸಮುದಾಯ ಸೇರಿಸಲು ನಡೆಸುತ್ತಿರುವ ಪ್ರಯತ್ನ ಕೈಬಿಡಲು ಮನವಿ

ಇದೇ ವೇಳೆ ನಾರ ನಾರಾಯಣಮೂರ್ತಿ, ಸತ್ಯನಾರಾಯಣ ಎಂಬ ಇಬ್ಬರು ಸೇವಾ ನಿವೃತ್ತ ನೌಕರರಿಗೆ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ನಿವೃತ್ತಿ ಜೀವನಕ್ಕೆ ಶುಭಕೋರಲಾಯಿತು.
ಸದಸ್ಯರಾದ ಮಂಜುನಾಥಾಚಾರಿ, ಯತೀಶ್, ನರಸಿಂಹಮೂರ್ತಿ, ಮುನಿರಾಜು, ಸತೀಶ್, ಭಾರತಿ ದೇವಿ, ಭಾಗ್ಯಮ್ಮ, ಮತ್ತಿತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

ಜನಸ್ಪಂದನ, ಸೌಲಭ್ಯಗಳ ವಿತರಣೆಯ ತಾಣವಾಗಲಿ-ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ:ಕಳೆದ ಹಲವಾರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮತ್ತು ಜನಸ್ನೇಹಿಯಾಗಿ ನಡೆಯುತ್ತಿರುವ ಜನಸ್ಪಂಧನ...

Download Eedina App Android / iOS

X