ಚಿಂತಾಮಣಿ ನಗರ ಠಾಣೆಯ ರಾಮಕುಂಟೆ ಬಳಿ ರಸ್ತೆಯಲ್ಲಿ ಸಾರ್ವಜನಿಕರಿಂದ ದರೋಡೆ ಹಾಗೂ ಇತರೆ ಸಮಾಜಘಾತಕ ಕೃತ್ಯಗಳನ್ನು ಎಸಗಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಚಿಂತಾಮಣಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಭಾಸ್ ಅಲಿಯಾಸ್ ದೀಪು ಬಿನ್ ಚಂದ್ರಬಾಬು,30ವರ್ಷ,ಬಾಳೇಗೌಡನಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು,ಸಲ್ಮಾನ್ ನಾಯಕ್ ಬಿನ್ ಮನಸುಲಾಲ್ 22ವರ್ಷ ಶಿಡ್ಲಘಟ್ಟ,ಶಾರುಖಾನ್ ಬಿನ್ ಬಾಗಿಲಾಲ್,27ವರ್ಷ,ಮೂರ್ತಿ ಬಿನ್ ಲೇಟ್ ಚಿನ್ನಪ್ಪ, 48ವರ್ಷಮಿಟ್ಟೇಮರಿ ಗ್ರಾಮ,ಬಾಗೇಪಲ್ಲಿ ತಾಲ್ಲೂಕು ತರುಣ್ ಬಿನ್ ಇರಾ,24ವರ್ಷ,ಶಿಡ್ಲಘಟ್ಟ ತಾಲ್ಲೂಕು ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ..? ಶಿಕ್ಷಕಿ ಮೇಲೆ ಹಲ್ಲೆ ಖಂಡನೀಯ :ಸೂಕ್ತ ರಕ್ಷಣೆಗೆ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಒತ್ತಾಯ
ಬಂಧಿತ ಆರೋಪಿಗಳು ಬೆಳಗಿನ ಮುಸಕಿನ ಜಾವದಲ್ಲಿ ಮಾರಾಕಾಸ್ತ್ರಗಳನ್ನು ಇಟ್ಟುಕೊಂಡು ಹೊಂಚು
,ಹಾಗೂ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪಿ.ಐ ವಿಜಿಕುಮಾರ್ ಬಿ.ಎ ರವರ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಠಾಣೆಯ ಪೊಲೀಸರು ಐದು ಜನ ದರೋಡೋಕೋರರನ್ನು ಬಂಧಿಸಿ ಅವರಿಂದ ಒಂದು ಚಾಕು,ಎರಡು ಬಿದರಿನ ದೊಣ್ಣೆಗಳು,ಕಾರದ ಪುಡಿ ಹಾಗೂ ಒಂದು ಮೊಬೈಲ್ ಪೋನ್ ನ್ನು ವಶಪಡಿಸಿಕೊಂಡು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.