ಪೊಲೀಸರ ಬಗ್ಗೆ ಭಯ ಬೇಡ ಬದಲಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸಹಕರಿಸಿ: ಎಸ್.ಪಿ. ಕುಶಾಲ್ ಚೌಕ್ಸೆ

Date:

Advertisements

ಚಿಕ್ಕಬಳ್ಳಾಪುರ: ರಾಜ್ಯದಾದ್ಯಂತ ಮನೆ ಮನೆ ಪೊಲೀಸ್ ಕಾರ್ಯಕ್ರಮ ನಡೆಯುತ್ತಿದೆ ಜನಸಾಮಾನ್ಯರೊಂದಿಗೆ ಪೊಲೀಸರು ಮತ್ತಷ್ಟು ಆತ್ಮೀಯ ಸಂಬಂಧ ಬೆಳೆಸಲು,ಜನರಲ್ಲಿ ಪೊಲೀಸರ ಬಗ್ಗೆ ಇರುವ ಭಯವನ್ನು ದೂರಮಾಡಿ ಅವರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ನಗರದ ವಾರ್ಡ್ 13 ಬಾಪೂಜಿನಗರದಲ್ಲಿ ನಡೆದ ಮಾದರಿ ಪೊಲೀಸ್ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು,ಪೋಲೀಸರು ನಿಮ್ಮ ರಕ್ಷಣೆಗೆ ಇದ್ದಾರೆ ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ ಬದಲಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸಹಕರಿಸಿ,ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.

ಅಕ್ರಮ ಗಾಂಜಾ ಮಧ್ಯ ಸಾಗಾಣಿಕೆ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಜನರ ಸಹಕಾರ ಅತ್ಯಗತ್ಯ ಎಂದು ಒತ್ತಿ ಹೇಳಿದರು.ಒಬ್ಬ ವ್ಯಕ್ತಿಯಿಂದ ಶುರುವಾಗುವ ಕಾನೂನು ಬಾಹಿರ ಚಟುವಟಿಕೆ,ನಂತರ ಹಲವರ ಜೀವನವನ್ನು ಹಾಳು ಮಾಡುತ್ತದೆ ಆದ್ದರಿಂದ ಮಕ್ಕಳ ಚಲನವಲನಗಳ ಮೇಲೆ ಪೋಷಕರು ಕಣ್ಣಿಡಬೇಕು ದುಷ್ಚಟಗಳಿಂದ ಮುಕ್ತ ಕುಟುಂಬವೇ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.ಇದಲ್ಲದೆ ಸಂಚಾರ ನಿಯಮ ಪಾಲನೆಯ ಅಗತ್ಯವನ್ನೂ ಅವರು ತಿಳಿಸಿ ಚಿಕ್ಕ ಗ್ರಾಮವಾಗಲಿ ಅಥವಾ ದೊಡ್ಡ ನಗರವಾಗಲಿ,ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮಧ್ಯಪಾನ ಮಾಡಿ ಜೀವಕ್ಕೆ ಅಪಾಯಕ್ಕೆ ಆಹ್ವಾನಿಸಬೇಡಿ ಎಂದು ಎಚ್ಚರಿಸಿದರು.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳು ಹಾಗೂ ಆನ್‌ಲೈನ್ ಗೇಮಿಂಗ್,ಡಿಜಿಟಲ್ ಅರೆಸ್ಟ್ ಮುಂತಾದ ಮೋಸಗಳಿಗೆ ಯುವಕರು ಹೆಚ್ಚು ಜಾಗರೂಕರಾಗಿರಬೇಕೆಂದು ಸಲಹೆ ನೀಡಿದರು.
ಮಾಜಿ ಶಾಸಕ ಎಂ.ಶಿವಾನಂದ್ ಮಾತನಾಡಿ,ಮನೆ ಮನೆ ಪೊಲೀಸ್ ಕಾರರ್ಯಕ್ರಮ ಜನ ಸಾಮಾನ್ಯರಿಗೆ ಹತ್ತಿರವಾಗುವಂತಹ,ತಮ್ಮ ಅಹವಾಲುಗಳನ್ನು ನಿರ್ಭೀತಿಯಾಗಿ ತಿಳಿಸಲು ಸೂಕ್ತ ವೇದಿಕೆ ಈ ಕಾರ್ಯಕ್ರಮದ ಮೂಲಕ ನಾಗರಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಪೊಲೀಸರ ಮುಂದೆ ಹಂಚಿಕೊಳ್ಳಲು ಅವಕಾಶ ದೊರಕುತ್ತಿದ್ದು,ಪೊಲೀಸರು ಕೂಡಾ ಜನಸ್ನೇಹಿ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸದಾ ಮುಂದಿದ್ದು ಜನರೊಂದಿಗೇ ನಾವು ಇದ್ದೇವೆ ಎಂಬ ಧೈರ್ಯವನ್ನು ಪೊಲೀಸರು ಈ ಕಾರ್ಯಕ್ರಮದ ಮೂಲಕ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾರ್ಡಿನ ನಿವಾಸಿಗಳ ಪರವಾಗಿ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ ಅವರು,ಸಾಕ್ಷರತೆ ಪ್ರಮಾಣ ಹೆಚ್ಚಾದಲ್ಲಿ ಅಪರಾಧ ಪ್ರಮಾಣವು ಸಹ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ
ನಾವೆಲ್ಲರೂ ಒಂದಾಗಿ ಬಂದು ಸಮಾಜದಿಂದ ಎಲ್ಲ ರೀತಿಯ ಕೆಟ್ಟ ಕೆಲಸಗಳನ್ನು ನಿವಾರಿಸಿ,ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ದಾರಿ ಹಿಡಿಯೋಣ ಎಂದು ಕರೆ ನೀಡಿದರು.


ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಮರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ನಗರ ಪ್ರದೇಶದಲ್ಲಿ ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ಮಾಡುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಆರಂಭಿಸಿದೆ ಇದಕ್ಕೆ ಜನರ ಸಹಕಾರ ಬಹಳ ಮುಖ್ಯ, ಈ ಯೋಜನೆಯನ್ವಯ 50-60 ಮನೆಗಳ ಸಮೂಹ ರಚಿಸಿ,ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ,ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಪ್ರತಿ ವಾರ್ಡಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ನಗರಸಭೆ ಸದಸ್ಯೆ ನಿರ್ಮಲಾ ಪ್ರಭು ಮಾತನಾಡಿ ಮೊದಲಿಗಿಂತ ಈಗ ಬಾಪೂಜಿನಗರದ ವಾತಾವರಣ ಉತ್ತಮವಾಗಿದೆ ಯುವಕರು ಸಣ್ಣ ಪುಟ್ಟ ಮಾತುಗಳಿಗೆ ಜಗಳ ಮಾಡಿಕೊಂಡು ಕಾನೂನ್ನ ಕೈಗೆತ್ತಿಕೊಳ್ಳಬಾರದು ಇದರಿಂದ ಭವಿಷ್ಯದಲ್ಲಿ ತೂಂದರೆ ಆಗುತ್ತೆ ಎಂದ ಅವರು ಪೋಲಿಸ್ ಇಲಾಖೆ ಈ ಒಂದು ಕಾರ್ಯಕ್ರಮದಿಂದ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುತ್ತೆ ಅಪರಾಧ ಮುಕ್ತ ವಾರ್ಡ್ ಮಾಡಲು ಎಲ್ಲರೂ ಶ್ರಮಿಸೋಣ ಎಂದರು.

ವಕೀಲ ಸಂದೀಪ್ ಚಕ್ರವರ್ತಿ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕರ ಪಾತ್ರ ಮುಖ್ಯ ಯುವಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಪೋಲಿಸ್ ಇಲಾಖೆಯು ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಮನೆ ಮನೆ ಪೋಲಿಸ್ ಮುಖಾಂತರ ಜನರ ಸೇವೆಗೆ ಮುಂದಾಗಿರುವ ಪೋಲಿಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಿ ನಮ್ಮ ವಾರ್ಡ್ನನ್ನ ಮಾದರಿ ವಾರ್ಡ್ ಆಗಿ ರೋಪಿಸಬೇಕು. ಅಪರಾದಗಳಿಂದ ದೂರವಿದ್ದು ಯುವಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.


ಮಾಜಿ ಶಾಸಕಿ ಕೆ.ವಿ.ಅನುಸೂಮ್ಮನಟರಾಜನ್, ಸ್ಥಳೀಯ ಯುವ ಮುಖಂಡರಾದ ರಮಣ್ ಅಕೇಶ್, ಶ್ರೀಮತಿ ಕಸ್ತೂರಿ ಶಿವಾನಂದ್, ಕುಮಾರ್ ಸೇರಿದಂತೆ ಇತರರು ಈ ಕಾರ್ಯಕ್ರಮ ಯಶಸ್ವಿಯಾಗಲು ನಾವೆಲ್ಲರೂ ಪೊಲೀಸರೊಂದಿಗೆ ಸಹಕರಿಸಬೇಕೆನ್ನುವ ಕುರಿತಾಗಿ ಮಾತನಾಡಿದರು.ಇದೇ ವೇಳೆ ಬಾಪೂಜಿನಗರದ ಪರವಾಗಿ ಡಾ. ಎಂ.ಶಿವಾನಂದ್, ಸಂದೀಪ್ ಚಕ್ರವರ್ತಿ,ನಗರಸಭಾ ಸದಸ್ಯರಾದ ನಿರ್ಮಲಾ ಪ್ರಭು ಸೇರಿದಂತೆ ಇತರರು ಕೂಡಿ ಎಸ್.ಪಿ. ಕುಶಲ್ ಚೌಕ್ಸೆ ಅವರನ್ನ ಗೌರವಿಸಿ ಸನ್ಮಾನಿಸಿದರು

ಇದನ್ನು ಓದಿದ್ದೀರಾ..? ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವೆ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ


ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯೆ ಪದ್ಮವತಿ ಶಿವಯ್ಯ,ಎಂ.ಮುನಿಕೃಷ್ಣ, ವಕೀಲರಾದ ರಾಮಮೂರ್ತಿ,,ಬಾಪೂಜಿನಗರದ ಮುಖಂಡರಾದ ಬಿ.ವಿ. ವೆಂಕಟೇಶ್,ಸಂಜೀವ,ಮಹದೇವ,ಹೆಚ್.ಶ್ರೀನಿವಾಸ್, ರಮಣ್ ಆಕೇಶ್,ರಾಜೇಂದ್ರ, ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ರತ್ನಾಬಾಯಿ, ಮಹಿಳಾ ಪೊಲೀಸ್ ಠಾಣೆಯ ಗುಣವತಿ ಸೇರಿದಂತೆ ವಾರ್ಡನ ಪ್ರಮುಖರು ಮತ್ತು ಇತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X