ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ದೇಶಭಕ್ತರು ಮತ್ತು ಕ್ರಾಂತಿಕಾರಿಗಳನ್ನು ‘ಅರಾಜಕತಾವಾದಿಗಳು’ ಎಂದು ಕರೆದಿತ್ತು. ಬ್ರಿಟಿಷ್ ಆಳ್ವಿಕೆಯ ಪರವಾಗಿ ಕೆಲಸ ಮಾಡಿತ್ತು. ಆರ್‌ಎಸ್‌ಎಸ್ ಕೈಗಳು ಮಹಾತ್ಮ ಗಾಂಧಿಯವರ ರಕ್ತದ ಕಲೆಗಳಿಂದ ತುಂಬಿಕೊಂಡಿವೆ ಎಂದು ಕಾಂಗ್ರೆಸ್ ಹೇಳಿದೆ.
ಬುಧವಾರ, ಆರ್‌ಎಸ್‌ಎಸ್‌ನ ಶತಮಾನೋತ್ಸವದ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ, “ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ಥಾಪಕ ಕೆ.ಬಿ ಹೆಡಗೇವಾರ್ ಸೇರಿದಂತೆ ಹಲವು ಸದಸ್ಯರು ಜೈಲಿಗೆ ಹೋಗಿದ್ದಾರೆ” ಎಂದು ಹೇಳಿದ್ದರು. ಅವರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಮೋದಿ ಹೇಳಿಕೆ ಸುಳ್ಳು ಎಂದು ಹೇಳಿದೆ.
“ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಿದ್ದಾರೆ. ಹಿಂದುತ್ವ ಸಂಘಟನೆ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಬ್ರಿಟಿಷರೊಂದಿಗೆ ಕೈ ಜೋಡಿಸಿತ್ತು. ಆರ್‌ಎಸ್‌ಎಸ್ ‘ದೇಶವನ್ನು ವಿಭಜಿಸುತ್ತದೆ” ಎಂದು ಕಾಂಗ್ರೆಸ್ ಆರೋಪಿಸಿದೆ.
“ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್ ನಾಯಕರು ಜೈಲಿಗೆ ಹೋಗಿಲ್ಲ, ಅದನ್ನು ಬ್ರಿಟಿಷರು ಎಂದಿಗೂ ನಿಷೇಧಿಸಿರಲಿಲ್ಲ. 1942ರಲ್ಲಿ ಬ್ರಿಟಿಷರ ವಿರುದ್ಧ ಪ್ರಾರಂಭವಾದ ‘ಕ್ವಿಟ್ ಇಂಡಿಯಾ ಚಳುವಳಿ’ಯ ಸಮಯದಲ್ಲಿ, ಇಡೀ ದೇಶ ಜೈಲಿಗೆ ಹೋಗುತ್ತಿದ್ದಾಗ, ಆರ್‌ಎಸ್‌ಎಸ್ ಈ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು” ಎಂದು ಕಾಂಗ್ರೆಸ್ ತಿಳಿಸಿದೆ.