ಕೇಂದ್ರ ಸರ್ಕಾರ ಶೇ.12ರಿಂದ 5ಕ್ಕೆ ಜಿಎಸ್ಟಿ ಕಡಿತ ಮಾಡಿದ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಕೆಎಂಎಫ್ ತನ್ನ ನಂದಿನಿ ಹಾಲಿನ ಕೆಲವು ಉತ್ಪನ್ನಗಳ ಮೇಲಿನ ದರ ಇಳಿಕೆ ಮಾಡಿದೆ.
ಸೆ.22ರಿಂದ ಹೊಸ ದರ ಜಾರಿಗೆ ಬರಲಿದ್ದು, ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಶನಿವಾರ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.
ಜಿಎಸ್ಟಿ ಸ್ಲ್ಯಾಬ್‌ಗಳ ಮತ್ತು ದರಗಳ ಕಡಿತ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ವಿಚಾರಾವಗಿ ಕೆಎಂಎಫ್ ಶುಕ್ರವಾರ ಅಧಿಕಾರಿಗಳು ಸಭೆ ಮಾಡಿ ಹೊಸ ದರ ನಿಗದಿ ಮಾಡಿದ್ದಾರೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ಕೆಎಂಎಫ್ ವ್ಯವಸ್ಥಾಪಕರು ವಿವರಿಸಿದ್ದಾರೆ.