1,500 ಆಲಿವ್ ರಿಡ್ಲೆ ಆಮೆಗಳ ಸಾವು; ಮೀನುಗಾರಿಕಾ ಬಲೆಗಳೇ ಕಾರಣ ಎಂದ ತಜ್ಞರು

Date:

ಒಡಿಶಾದ ಗಹಿರ್ಮಠ ಸಮುದ್ರ ಸಂರಕ್ಷಿತ ಪ್ರದೇಶದ ಹುಕಿತೋಲಾದಿಂದ ಏಕಕುಲ ಬೀಚ್‌ವರೆಗಿನ ಸುಮಾರು 15 ಕಿ.ಮೀ. ಕರಾವಳಿಯುದ್ದಕ್ಕೂ ಸುಮಾರು 1,500 ಆಲಿವ್ ರಿಡ್ಲೆ ಆಮೆಗಳ ಕಳೇಬರಗಳು ಕಂಡುಬಂದಿವೆ. ಮೀನುಗಾರಿಕಾ ಬಲೆಗಳಲ್ಲಿ ಸಿಲುಕಿಕೊಂಡಿದ್ದರಿಂದ ಈ ಆಮೆಗಳು ಮೃತಪಟ್ಟಿರಬಹುದು ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

- Advertisement -

ಗಹಿರ್ಮಠ ಪ್ರದೇಶ ಸಮುದ್ರ ಆಮೆಗಳು ಮತ್ತು ಮ್ಯಾಂಗ್ರೋವ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹೇಮಂತ್ ರಾವತ್ ಹೇಳುವಂತೆ; “ಅನೇಕ ಕಳೇಬರಗಳು ಸಮುದ್ರದಿಂದ ದಡಕ್ಕೆ ತೇಲಿಬಂದಿವೆ. ಕಳೇಬರಗಳ ಮೇಲೆ ಗಾಯಗಳ ಗುರುತುಗಳಿವೆ. ಇದು ಅವು ಟ್ರಾಲ್ ಬಲೆಗಳು ಅಥವಾ ಗಿಲ್ ನೆಟ್‌ಗಳಲ್ಲಿ ಸಿಲುಕಿಕೊಂಡು ಸಾವನ್ನಪ್ಪಿವೆ ಎಂಬುದನ್ನು ಸೂಚಿಸುತ್ತದೆ.”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ...

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ...

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

“ಒಡಿಶಾ ಸಮುದ್ರ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1982ರ ಪ್ರಕಾರ, ಟ್ರಾಲರ್‌ಗಳು ಕರಾವಳಿಯಿಂದ 5 ಕಿ.ಮೀ.ಗಿಂತ ದೂರದಲ್ಲಿ ಮೀನುಗಾರಿಕೆ ಮಾಡಬೇಕು. ಸಮುದ್ರ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕರಾವಳಿಯಿಂದ 20 ಕಿ.ಮೀ.ಗಿಂತ ಆಚೆ ಕಾರ್ಯಾಚರಣೆ ನಡೆಸಬೇಕು. ಆದರೆ, ನೂರಾರು ಟ್ರಾಲರ್‌ಗಳು ಈ ನಿಯಮಗಳನ್ನು ಉಲ್ಲಂಘಿಸಿ ಕರಾವಳಿಯ ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿವೆ. ಇದರಿಂದಾಗಿ ಆಮೆಗಳು ಬಲೆಯಲ್ಲಿ ಸಿಲುಕಿಕೊಳ್ಳುತ್ತಿವೆ” ಎಂದು ರಾವತ್ ಆರೋಪಿಸಿದ್ದಾರೆ.

ಅಧಿಕಾರಿಗಳು ಆಮೆಗಳ ಸಾವಿನ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ. “ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ಮೃತಪಟ್ಟ ಆಮೆಗಳ ಸಂಖ್ಯೆಯನ್ನು ಕಡಿಮೆ ಮಾಡಿ ತೋರಿಸುತ್ತಾರೆ. ಪ್ರತಿ ವರ್ಷ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆಮೆಗಳು ಸಾಯುತ್ತಿರುವುದು ಈ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದದ ಸಂತತಿಯ ಮೇಲೆ ಭೀಕರ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ‘ಆಲಿವ್ ರಿಡ್ಲೆ’ ಆಮೆಗಳ ಸಂತಾನೋತ್ಪತ್ತಿ ಸಮಯ; ಒಡಿಶಾ ಸಮುದ್ರ ತೀರದಲ್ಲಿ ‘ಆಪರೇಷನ್ ಒಲಿವಿಯಾ’ ಜಾರಿ!

“ಟ್ರಾಲರ್‌ಗಳಲ್ಲಿ ‘ಟರ್ಟಲ್ ಎಕ್ಸ್‌ಕ್ಲೂಡರ್ ಡಿವೈಸಸ್’ (TEDs) ಅಳವಡಿಸಿದರೆ ಆಲಿವ್ ರಿಡ್ಲೆ ಆಮೆಗಳ ಪ್ರಾಣಾಪಾಯವನ್ನು ಕಡಿಮೆ ಮಾಡಬಹುದು. ಇದು ಮೀನುಗಾರಿಕಾ ಬಲೆಯ ಒಳಗೆ ಅಳವಡಿಸುವ ಸಣ್ಣ ಹೆಚ್ಚುವರಿ ಬಲೆ ಅಥವಾ ಲೋಹದ ಗ್ರಿಡ್ ಆಗಿದ್ದು, ಬಲೆಯಲ್ಲಿ ಸಿಕ್ಕಿಬಿದ್ದ ಆಮೆಗಳು ಹೊರಹೋಗಲು ಅನುವು ಮಾಡಿಕೊಡುತ್ತದೆ. ಮೀನುಗಳು ಬಲೆಯಲ್ಲೇ ಉಳಿಯುತ್ತವೆ. ಆದರೆ, ಟ್ರಾಲರ್ ಬಲೆಗಳಲ್ಲಿ TEDಗಳ ಬಳಕೆಯನ್ನು ಜಾರಿಗೊಳಿಸುವಲ್ಲಿ ಯಾವುದೇ ಪ್ರಗತಿಯಾಗಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಹಿರ್ಮಠ ಅರಣ್ಯ ವಲಯ ಅಧಿಕಾರಿ ಕಪಿಲೇಂದ್ರ ಪ್ರಧಾನ್ ಮಾತನಾಡಿ, “ನವೆಂಬರ್ 1ರಿಂದ ಸಮುದ್ರ ಸಂರಕ್ಷಿತ ಪ್ರದೇಶದೊಳಗೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 345 ಮೀನುಗಾರರನ್ನು ನಾವು ಬಂಧಿಸಿದ್ದೇವೆ. ಪಶ್ಚಿಮ ಬಂಗಾಳದ ಎರಡು ಮತ್ತು ಆಂಧ್ರಪ್ರದೇಶದ ಎರಡು ದೋಣಿಗಳು ಸೇರಿದಂತೆ ಒಟ್ಟು 38 ನೌಕೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | SIR : ಕರಡು ಪಟ್ಟಿಗೆ 15,227 ಹೊಸ ಮತದಾರರು ಸೇರ್ಪಡೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ 18...

ಬೀದರ್‌ | ಸಮತೆಯ ಪಾಲನೆಗಾಗಿ ವಚನ ಕ್ರಾಂತಿ ನಡೆಸಿದ ಶರಣರು: ಹಂಸಲೇಖ

ಕಾರ್ಮಿಕರು, ಕೃಷಿಕರು ಮತ್ತು ಶ್ರಮಿಕರು ಸಮಾಜದ ಜೀವಾಳ. ಇವರ ಶ್ರಮದಿಂದಲೇ ಬದುಕು...

ಭಿನ್ನಮತದ ಹಕ್ಕಿಗೆ ಸಂಚಕಾರ; ಶಾಂತಿ ಬಾಂಡ್‌ಗೆ ಸಹಿ ಹಾಕುವ ಪ್ರಶ್ನೆಯೇ ಇಲ್ಲ ಎಂದ ನೇಹಾ ಬೋರಾ

ದೆಹಲಿ ಹೈಕೋರ್ಟ್‌ನಲ್ಲಿ ರಿಲೀಫ್ ಸಿಗದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ವಿಧಿಸಿರುವ 10,000...