ಹಳಿ ದಾಟುತ್ತಿದ್ದಾಗ ಡಿಕ್ಕಿ ಹೊಡೆದ ರೈಲು; 3 ಕಾಡಾನೆಗಳು ಸಾವು

Date:

Advertisements

ರೈಲ್ವೇ ಹಳಿ ದಾಟುವಾಗ ರೈಲೊಂದು ಡಿಕ್ಕಿ ಹೊಡೆದಿದ್ದು, ಮೂರು ಕಾಡಾನೆಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬಸ್ತೋಲಾ ರೈಲು ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟ ಆನೆಗಳಲ್ಲಿ ಎರಡು ಮರಿ ಆನೆಗಳು ಎಂದು ತಿಳಿದುಬಂದಿದೆ.

ಖರಗ್‌ಪುರ-ಟಾಟಾನಗರ ನಡುವಿನ ರೈಲ್ವೇ ಮಾರ್ಗದಲ್ಲಿ ಏಳು ಆನೆಗಳು ಹಳಿ ದಾಟುತ್ತಿದ್ದಾಗ, ಮೂರು ಆನೆಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಆನೆಗಳು ಪಶ್ಚಿಮ ಬಂಗಾಳದ ಖರಗ್‌ಪುರದ ಜಾರ್ಗ್ರಾಮ್ ಕಾಡಿನಿಂದ ಬಂದಿರಬಹುದು ಎಂದು ಹೇಳಲಾಗಿದೆ.

ಆನೆಗಳ ಮೃತದೇಹವನ್ನು ಕ್ರೇನ್‌ಗಳ ಮೂಲಕ ತೆರವುಗೊಳಿಸಲಾಗಿದೆ. ಆದರೆ, ಇಂತಹ ಘಟನೆಗಳು ಇದೇ ಮೊದಲೇನು ಅಲ್ಲ. ರೈಲ್ವೇ ಹಳಿಗಳನ್ನು ದಾಟುವಾಗ ಆನೆಗಳು ಸಾವನ್ನಪ್ಪಿದ ಹಲವಾರು ಪ್ರಕರಣಗಳು ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವರದಿಯಾಗಿವೆ.

ಬದಲಾಗುತ್ತಿರುವ ಹವಾಮಾನ ಮತ್ತು ಋತುಮಾನಗಳಿಂದಾಗಿ ಆಹಾರ ಮತ್ತು ಸೂಕ್ತ ಆವಾಸಸ್ಥಾನಕ್ಕಾಗಿ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ವಲಸೆ ಹೋಗುತ್ತಿವೆ. ಹೀಗಾಗಿ, ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ರೈಲ್ವೇ ಹಳಿ ದಾಟುವಾಗ ರೈಲುಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವಿಗೆ ತುತ್ತಾಗುತ್ತಿವೆ ಎಂದು ಹೇಳಲಾಗಿದೆ.

ಆದಾಗ್ಯೂ, ಪ್ರಾಣಿಗಳು ರೈಲ್ವೇ ಹಳಿಗಳನ್ನು ದಾಟುವಾಗಲೆಲ್ಲ ರೈಲು ಚಾಲಕರಿಗೆ ಎಚ್ಚರಿಕೆ ನೀಡಲು ಅಂತಹ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ತಂತ್ರಜ್ಞಾನವನ್ನು ಬಳಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ತಮಿಳುನಾಡು, ಒಡಿಶಾ, ಅಸ್ಸಾಂ ಹಾಗೂ ಉತ್ತರಾಖಂಡಗಳಲ್ಲಿ ಆನೆಗಳ ಹಿಂಡು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುವ ಬಗ್ಗೆ ಸ್ಪಷ್ಟ ಸಂದೇಶ ಒದಗಿಸಲು ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

Download Eedina App Android / iOS

X