1988ರ ನಂತರದಲ್ಲಿ ಪಂಜಾಬ್‌ನಲ್ಲಿ ಮತ್ತೆ ಭೀಕರ ಪ್ರವಾಹ ಕಾಣಿಸಿಕೊಂಡಿದ್ದು ಈವರೆಗೆ 30 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 3,54,000ಕ್ಕೂ ಹೆಚ್ಚು ಮಂದಿ ಬಾಧಿತರಾಗಿದ್ದಾರೆ. ಪಂಜಾಬ್‌ನ ಎಲ್ಲಾ 23 ಜಿಲ್ಲೆಗಳ ಮೇಲೆಯೂ ಪ್ರವಾಹ ಪರಿಣಾಮ ಉಂಟಾಗಿದೆ.
ಭೀಕರ ಪ್ರವಾಹಕ್ಕೆ 1,400ಕ್ಕೂ ಅಧಿಕ ಹಳ್ಳಿಗಳು ಮುಳುಗಿ ಹೋಗಿದ್ದು ಸುಮಾರು 3 ಲಕ್ಷ ಎಕರೆ ಕೃಷಿ ಭೂಮಿ ಮುಳುಗಿ ಹೋಗಿದೆ. ಅಧಿಕಾರಿಗಳು ತಗ್ಗು ಪ್ರದೇಶದಲ್ಲಿರುವ ಪರಿಹಾರ ಕೇಂದ್ರಗಳಿಗೆ ಸುಮಾರು 20 ಸಾವಿರ ಮಂದಿಯನ್ನು ಸ್ಥಳಾಂತರಿಸಿದ್ದಾರೆ.
ಇದನ್ನು ಓದಿದ್ದೀರಾ? ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಜಲ ಪ್ರಳಯಗಳೂ ಹೆಚ್ಚಾಗಲಿವೆ ; ನೆಮ್ಮದಿಯ ದಿನಗಳೂ ಮಾಯವಾಗಲಿವೆ
ಪ್ರವಾಹ ಹಿನ್ನೆಲೆ ಪಂಜಾಬ್‌ನಾದ್ಯಂತ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ. ಹಾಗೆಯೇ 1988ರ ನಂತರದ ರಾಜ್ಯದ ಅತ್ಯಂತ ಭೀಕರ ಪ್ರವಾಹ ಇದಾಗಿದೆ ಎಂದು ವಿವರಿಸಲಾಗಿದೆ. ಭೀಕರ ಮಳೆಯಿಂದಾಗಿ ಐದು ದಿನದಲ್ಲೇ ರಾಜ್ಯದಾದ್ಯಂತ ಪ್ರವಾಹ ಸ್ಥಿತಿ ಉಂಟಾಗಿದೆ ಎಂದು ವರದಿಯಾಗಿದೆ.
ಮೊಹಾಲಿ, ಫಿರೋಜ್‌ಪುರ ಮತ್ತು ಕಪುರ್ಥಾಲಾದಂತಹ ಪ್ರದೇಶಗಳಲ್ಲಿ ಹೆದ್ದಾರಿಗಳು, ವಸತಿ ಪ್ರದೇಶಗಳು ನೀರಿನಿಂದ ಮುಳುಗಿದೆ. ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿದಿವೆ. ಕೃಷಿ ಭೂಮಿಗಳೆಲ್ಲಾ ನೀರಿನಿಂದ ತುಂಬಿ ಹೋಗಿವೆ.
ಪಂಜಾಬ್‌ನಲ್ಲಿ 1988ರಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಪಂಜಾಬ್‌ನ 12,989 ಹಳ್ಳಿಗಳ ಪೈಕಿ 9,000 ಹಳ್ಳಿಗಳು ಬಾಧಿತವಾಗಿತ್ತು. ಪಂಜಾಬ್‌ನ ಇತಿಹಾಸದಲ್ಲೇ ಅತಿ ದೊಡ್ಡ ಪ್ರವಾಹ ಇದಾಗಿದ್ದು, 34 ಲಕ್ಷಕ್ಕೂ ಅಧಿಕ ಜನರ ಜೀವನವನ್ನು ಅಸ್ತವ್ಯಸ್ಥಗೊಳಿಸಿತ್ತು. ಸಾವಿರಾರು ಜನರು ಸಾವನ್ನಪ್ಪಿದ್ದರು.
