ಲಡಾಖ್‌| ಸೇನೆಯ ಟ್ಯಾಂಕ್ ಅಪಘಾತ; ನೀರಿನಲ್ಲಿ ಕೊಚ್ಚಿ ಹೋದ ಐವರು ಯೋಧರು

Date:

ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಟಿ -72 ಟ್ಯಾಂಕ್‌ನಲ್ಲಿ ನದಿಯನ್ನು ದಾಟುತ್ತಿದ್ದಾಗ ನಡೆದ ಅವಘಡದಲ್ಲಿ ಐವರು ಯೋಧರು ನೀರಿನಲ್ಲಿ ಕೊಚ್ಚಿ ಹೋಗಿ, ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

- Advertisement -

“ಜೂನ್ 28ರಂದು ಈ ಘಟನೆ ನಡೆದಿದೆ. ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳದಿಂದಾಗಿ ಪೂರ್ವ ಲಡಾಖ್‌ನ ಸಾಸರ್ ಬ್ರಂಗ್ಸಾ ಬಳಿಯ ಶ್ಯೋಕ್ ನದಿಯಲ್ಲಿ ಸೇನಾ ಟ್ಯಾಂಕ್ ಕೊಚ್ಚಿ ಹೋಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆದರೆ ಹೆಚ್ಚಿದ ಪ್ರವಾಹ ಮತ್ತು ನೀರಿನ ಮಟ್ಟದಿಂದಾಗಿ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿಲ್ಲ” ಎಂದು ಭಾರತೀಯ ಸೇನೆಯು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

ಇದನ್ನು ಓದಿದ್ದೀರಾ?  ಬೀದರ್‌ | ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ವ್ಯಕ್ತಿ ಆತ್ಮಹತ್ಯೆ

“ಟ್ಯಾಂಕ್ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ವ ಲಡಾಖ್‌ನಲ್ಲಿ ಕಾರ್ಯಾಚರಣೆಯಲ್ಲಿ ನಿಯೋಜಿಸಲ್ಪಟ್ಟಾಗ ಐವರು ಕೆಚ್ಚೆದೆಯ ಸಿಬ್ಬಂದಿಯನ್ನು ಕಳೆದುಕೊಂಡ ಭಾರತೀಯ ಸೇನೆಯು ವಿಷಾದಿಸುತ್ತದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಸೇನೆ ಉಲ್ಲೇಖಿಸಿದೆ.

ಕಳೆದ ವರ್ಷ, ಲೇಹ್ ಜಿಲ್ಲೆಯ ಕಿಯಾರಿ ಬಳಿ ಅವರು ಪ್ರಯಾಣಿಸುತ್ತಿದ್ದ ಸೇನಾ ಟ್ರಕ್ ರಸ್ತೆಯಿಂದ ಆಚೆ ಬಂದು ಆಳವಾದ ಕಮರಿಗೆ ಬಿದಿದ್ದು ಜೆಸಿಒ ಸೇರಿದಂತೆ ಒಂಬತ್ತು ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮೂಹಿಕ ಅತ್ಯಾಚಾರಕ್ಕೆ ಮಹಿಳೆ ನೆರವಾಗಿದ್ದರೆ ಆಕೆಯೂ ಆರೋಪಿ: ದೆಹಲಿ ಹೈಕೋರ್ಟ್

ಮಹಿಳೆಯೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆ ಪ್ರತ್ಯಕ್ಷವಾಗಿ ದೈಹಿಕ...

ದೇಶದ ನಿರುದ್ಯೋಗ ಪ್ರಮಾಣದಲ್ಲಿ ಸ್ಥಿರತೆ; ನಗರ ಮಹಿಳೆಯರ ನಿರುದ್ಯೋಗದಲ್ಲಿ ಏರಿಕೆ!

ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಸೆಪ್ಟೆಂಬರ್ 2026ರಲ್ಲಿ ಶೇ. 5ರಷ್ಟೇ ಇದ್ದು, ಹಿಂದಿನ...

ರಾತ್ರಿ ವೇಳೆಯಲ್ಲೂ ರವಿ; ಸೂರ್ಯನ ಬೆಳಕು ಮಾರಾಟ ಮಾಡಲು ಅಮೆರಿಕ-ಭಾರತ ಸಹಭಾಗಿತ್ವ: ಏನಿದು ಯೋಜನೆ?

ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ...