2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಶುಕ್ರವಾರ ಘೋಷಣೆಯಾಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಮತ್ತು ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ‘ಜವಾನ್’ ಸಿನಿಮಾದ ನಟನೆಗಾಗಿ ಶಾರುಖ್ ಖಾನ್ ಅವರು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘12th ಫೇಲ್’ ಸಿನಿಮಾದ ನಟನೆಗಾಗಿ ವಿಕ್ರಾಂತ್ ಮಾಸಿ ಕೂಡ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಕಥಲ್’ ಅತ್ಯುತ್ತಮ ಹಿಂದಿ ಚಿತ್ರ
‘ಕಥಲ್’ ಚಿತ್ರಕ್ಕೆ ಅತ್ಯುತ್ತಮ ಹಿಂದಿ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಲಾಗಿದೆ. ಸನ್ಯಾ ಮಲ್ಹೋತ್ರಾ, ವಿಜಯ್ ರಾಜ್ ಮತ್ತು ಅನಂತ್ ಜೋಶಿ ಅವರಂತಹ ತಾರೆಯರು 2023 ರಲ್ಲಿ ಬಿಡುಗಡೆಯಾದ ‘ಕಥಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡದ ‘ಸನ್‌ಪ್ಲವರ್ ವೇರ್ ದಿ ಫಸ್ಟ್ ಒನ್ ಟು ನೊ’ ಚಿತ್ರಕ್ಕೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಹಾಗೂ ‘ಕಂದೀಲು’ ಸಿನಿಮಾ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.