ಇದೇನು ಬಿಗ್‌ ಬಾಸ್‌ ಆಟವೇ: ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಕಾಂಗ್ರೆಸ್‌ ಲೇವಡಿ

Date:

ನಿತಿನ್‌ ನಬಿನ್‌ ಅವರನ್ನು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಂಗಳವಾರ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಕೇಸರಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. “ಬಿಜೆಪಿಯು ಮೊದಲು ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡುತ್ತದೆ, ಆಮೇಲೆ ಚುನಾವಣೆ ನಡೆಯಲಿದೆ ಎನ್ನುತ್ತದೆ, ಆದರೆ ವಾಸ್ತವದಲ್ಲಿ ಅಲ್ಲಿ ಯಾವುದೇ ಚುನಾವಣೆ ನಡೆಯುವುದೇ ಇಲ್ಲ,” ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

- Advertisement -

​ಇದೇ ವೇಳೆ, ಈ ಪ್ರಕ್ರಿಯೆಯಲ್ಲಿ ‘ತಿರುಚಲು’ ಏನೂ ಸಿಗದ ಕಾರಣ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳುವ ಮೂಲಕ, ಚುನಾವಣಾ ಆಯೋಗದ ವಿರುದ್ಧವೂ ವಿರೋಧ ಪಕ್ಷ ಪರೋಕ್ಷವಾಗಿ ಹರಿಹಾಯ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಬೆಂಗಳೂರು ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಕಟ್ಟಿಕೊಂಡಿರುವ ‘ಶಿಕ್ಷಕರ ಕೋಟೆ’...

ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿಅಕ್ಟೋಬರ್ 23ರ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು- ‘ಬೆಂಗಳೂರು ಶಿಕ್ಷಕರ ಕ್ಷೇತ್ರ'. ಇಲ್ಲಿ ಕಾಂಗ್ರೆಸ್‌ನಿಂದ ಸ್ಫರ್ಧಿಸಿರುವ ಪುಟ್ಟಣ್ಣ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿರುವ...

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

​’ಚುನಾವಣಾ ಆಯುಕ್ತರಿಗೆ ಕೆಲಸವೇ ಇಲ್ಲ’
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸಿಇಸಿ ಜ್ಞಾನೇಶ್‌ ಕುಮಾರ್‌ ಅವರಿಗೆ ಇಲ್ಲಿ ಯಾವುದೇ ಪಾತ್ರವಿಲ್ಲ. ಅವರು ಇಲ್ಲಿ ಪ್ರಭಾವ ಬೀರಲು ಅಥವಾ ಏನನ್ನೂ ತಿರುಚಲು ಸಾಧ್ಯವಾಗದ ಕಾರಣ, ಪ್ರತಿಭಟನಾರ್ಥವಾಗಿ ರಾಜೀನಾಮೆ ನೀಡಲು ಬಯಸುತ್ತಿದ್ದಾರೆ,” ಎಂದು ಕುಟುಕಿದರು.

ಚುನಾವಣಾ ಅಕ್ರಮಗಳ ಕುರಿತು ಪ್ರತಿಪಕ್ಷಗಳು ನಿರಂತರವಾಗಿ ಆಯೋಗವನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಖೇರಾ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
​
‘ಬಾಸ್‌-ಬಾಸ್‌’ ಆಟ ಮತ್ತು ಸ್ವಾಮೀಜಿಗಳ ಕಣ್ಣೀರು
ಪಕ್ಷದ ವಿಚಾರದಲ್ಲಿ ನಿತಿನ್‌ ನಬಿನ್‌ ಅವರು ತಮ್ಮ ‘ಬಾಸ್‌’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಖೇರಾ, “ಅವರು ತಮ್ಮೊಳಗೆ ಆಟ ಆಡುತ್ತಿರಲಿ. ಕೆಲವೊಮ್ಮೆ ಮೋಹನ್ ಭಾಗವತ್ ಬಾಸ್ ಆದರೆ, ಇನ್ನು ಕೆಲವೊಮ್ಮೆ ಮೋದಿ ಬಾಸ್ ಆಗುತ್ತಾರೆ. ಆದರೆ ಇತ್ತೀಚೆಗೆ ಪ್ರಯಾಗರಾಜ್‌ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರಿಗೆ ಗಂಗಾ ಸ್ನಾನಕ್ಕೆ ಅಡ್ಡಿಪಡಿಸಿದ ಘಟನೆಯಿಂದ ಹಿಂದೂ ಧರ್ಮದ ಶ್ರೇಷ್ಠ ಸ್ವಾಮೀಜಿಗಳು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಇವರೆಲ್ಲರೂ ‘ಬಾಸ್-ಬಾಸ್’ ಆಟದಲ್ಲಿ ಮುಳುಗಿದ್ದಾರೆ,” ಎಂದರು.

​”ಇಲ್ಲಿ ಬಿಗ್‌ ಬಾಸ್‌ ಆಟ ನಡೆಯುತ್ತಿದೆಯೇ? ಇದೇನು? ಹಿಂದೂ ಧರ್ಮದ ಅತ್ಯುನ್ನತ ಸ್ಥಾನದಲ್ಲಿರುವವರು ಕಣ್ಣೀರು ಹಾಕುತ್ತಿದ್ದರೆ, ಬಿಜೆಪಿ ನಾಯಕರು ಬಿಗ್‌ ಬಾಸ್‌ ಆಡುವುದರಲ್ಲಿ ವ್ಯಸ್ತರಾಗಿದ್ದಾರೆ,” ಎಂದು ಖೇರಾ ಆಕ್ರೋಶ ವ್ಯಕ್ತಪಡಿಸಿದರು.

​ಅತ್ಯಂತ ಕಿರಿಯ ಅಧ್ಯಕ್ಷ
ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ 45 ವರ್ಷದ ನಿತಿನ್‌ ನಬಿನ್‌ ಅವರನ್ನು ಮಂಗಳವಾರ ಔಪಚಾರಿಕವಾಗಿ ಘೋಷಿಸಲಾಯಿತು. ಬಿಜೆಪಿ ಸಾಂಸ್ಥಿಕ ಚುನಾವಣೆಯ ಚುನಾವಣಾ ಅಧಿಕಾರಿ ಕೆ.ಲಕ್ಷ್ಮಣ್‌ ಅವರು ಫಲಿತಾಂಶ ಪ್ರಕಟಿಸಿ, ನಬಿನ್‌ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು. ಇದರೊಂದಿಗೆ ನಬಿನ್‌ ಅವರು ಈ ಉನ್ನತ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

​ಬಿಜೆಪಿ ಸ್ಥಾಪನೆಯಾದ (1980) ವರ್ಷವೇ ಜನಿಸಿದ ನಬಿನ್‌, ಪಕ್ಷದ 12ನೇ ಅಧ್ಯಕ್ಷರಾಗಿದ್ದಾರೆ. ಬಿಹಾರ ಸರ್ಕಾರದಲ್ಲಿ ಕಾನೂನು, ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿದ್ದ ಇವರು, ಕಳೆದ ಡಿಸೆಂಬರ್‌ 14ರಂದು ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​7 ದಿನಗಳ ಜೈಲುವಾಸ ಅಂತ್ಯ: ಕೊನೆಗೂ ಬಿಡುಗಡೆಯಾದ ಕಾಕ್ರೋಚ್ ಜನತಾ ಪಾರ್ಟಿ ನಾಯಕರು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಕಾಕ್ರೋಚ್...

ಪ್ರತಿಭಟನೆಗಳ ವಿರುದ್ಧ ಅತಿಯಾದ ಬಲಪ್ರಯೋಗ ನಿಲ್ಲಿಸಿ; ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆ ತಜ್ಞರ ಆಗ್ರಹ

ಭಾರತದಲ್ಲಿ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಸ್ವತಂತ್ರ...

ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...

ಸಾಮಾನ್ಯ ಶಿಸ್ತುಕ್ರಮವನ್ನು ‘ಆತ್ಮಹತ್ಯೆಗೆ ಪ್ರಚೋದನೆ’ ಎನ್ನಲಾಗದು: ಮದ್ರಾಸ್ ಹೈಕೋರ್ಟ್

ರಜೆ ಅರ್ಜಿಯನ್ನು ತಿರಸ್ಕರಿಸುವುದು, ಕರ್ತವ್ಯಕ್ಕೆ ಗೈರುಹಾಜರಿ ಎಂದು ದಾಖಲಿಸುವುದು ಹಾಗೂ ಶಿಸ್ತುಕ್ರಮ...