ಅಸ್ಸಾಂ | 1,500 ಮುಸ್ಲಿಂ ಕುಟುಂಬಗಳ ಮನೆ ಉರುಳಿಸಲು ಮುಂದಾದ ಸರ್ಕಾರ

Date:

Advertisements

ಅಸ್ಸಾಂ ಸರ್ಕಾರವು ಗೋಲಾಘಾಟ್ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ತೆರವು ಕಾರ್ಯಾಚರಣೆ ಆರಂಭಿಸಿದೆ. 1,500ಕ್ಕೂ ಹೆಚ್ಚು ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಸ್ಲಿಂ ಕುಟುಂಬಗಳು ವಾಸವಾಗಿರುವ 3,600 ಎಕರೆಗಿಂತಲೂ ಹೆಚ್ಚು ಭೂಮಿಯನ್ನು ಅರಣ್ಯ ಪ್ರದೇಶವನ್ನು ಸರ್ಕಾರ ವಾದಿಸುತ್ತಿದೆ. ಅದನ್ನು ಮುಸ್ಲಿಮರು ಒತ್ತುವರಿ ಮಾಡಿಕೊಂಡು, ಮನೆ ಕಟ್ಟಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಗೋಲಾಘಾಟ್ ಜಿಲ್ಲೆಯ ಉರಿಯಾಮ್‌ಘಾಟ್‌, ಗೋಲ್ಪಾರಾ, ಬಿದ್ಯಾಪುರ ಪ್ರದೇಶದಲ್ಲಿ ಸರ್ಕಾರ ತೆರವು ಕಾರ್ಯಾಚರಣೆ ನಡೆಸುತ್ತಿದೆ. ಸರ್ಕಾರದ ಒತ್ತುವರಿ ಆರೋಪವನ್ನು ಸ್ಥಳೀಯ ಮುಸ್ಲಿಮರು ಅಲ್ಲಗಳೆದಿದ್ದಾರೆ.

“ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಜಲ ಜೀವನ್ ಮಿಷನ್ (JJM) ಅಡಿಯಲ್ಲಿ ನೀರಿನ ಸಂಪರ್ಕ ಪಡೆದಿದ್ದೇವೆ. ಸರ್ವ ಶಿಕ್ಷಣ ಅಭಿಯಾನ (SSA) ಅಡಿಯಲ್ಲಿ ಸರ್ಕಾರಿ ಶಾಲೆಗಳು ನಿರ್ಮಾಣಗೊಂಡಿವೆ. ಬಹುತೇಕ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ, ಜೊತೆಗೆ ಮಾರುಕಟ್ಟೆಗಳು, ಮಸೀದಿಗಳು, ಮದರಸಗಳು ಹಾಗೂ ಚರ್ಚ್‌ಗಳು ಇವೆ. ಇದು ನಮ್ಮದೇ ಭೂಮಿ” ಎಂದು ಮುಸ್ಲಿಂ ಸಮುದಾಯ ಹೇಳಿಕೊಂಡಿದೆ.

ಆದರೆ, ಅಧಿಕಾರಿಗಳು ಸುಮಾರು 10,500 ರಿಂದ 11,000 ಹೆಕ್ಟೇರ್ ಭೂಮಿಯನ್ನು ಜನರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

“ಈ ಪ್ರದೇಶಗಳಲ್ಲಿ ಸುಮಾರು 2,000 ಕುಟುಂಬಗಳು ವಾಸಿಸುತ್ತಿವೆ. ಅವರಲ್ಲಿ, ಸುಮಾರು 1,500 ಕುಟುಂಬಗಳು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿವೆ. ಅವರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಉಳಿದ ಕುಟುಂಬಗಳು ಅರಣ್ಯವಾಸಿಗಳಾಗಿದ್ದು, ಅರಣ್ಯ ಹಕ್ಕುಗಳ ಸಮಿತಿ (FRC) ಇಂದ ಪ್ರಮಾಣಪತ್ರಗಳನ್ನು ಪಡೆದಿವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಡವಲ್ಪಡುತ್ತಿರುವ ಮನೆಗಳ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿವೆ. ಆದರೆ, FRC ಪ್ರಮಾಣಪತ್ರಗಳನ್ನು ಹೊಂದಿರುವವರು ಬೋಡೋ, ನೇಪಾಳಿ, ಮಣಿಪುರಿ ಹಾಗೂ ಇತರ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ನೋಟಿಸ್ ಪಡೆದ ಸುಮಾರು 80% ಕುಟುಂಬಗಳು ಕಳೆದ ಕೆಲವು ದಿನಗಳಲ್ಲಿ ತಮ್ಮ ಅಕ್ರಮ ಮನೆಗಳನ್ನು ಖಾಲಿ ಮಾಡಿದ್ದಾರೆ. ನಾವು ಕೇವಲ ಅವರ ಮನೆಗಳನ್ನು ಕೆಡವುತ್ತಿದ್ದೇವೆ” ಎಂದು ಅಧಿಕಾರಿ ಹೇಳಿಕೊಂಡಿದ್ದಾರೆ.

ಈ ಲೇಖನ ಓದಿದ್ದೀರಾ?: ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಚುನಾವಣಾ ಮಾನದಂಡಗಳೇನು?

ಅಸ್ಸಾಂ ಸರ್ಕಾರವು ಉರಿಯಾಮ್‌ಘಾಟ್‌ನಲ್ಲಿ 11,000 ಹೆಕ್ಟೇರ್ ಭೂಮಿಯನ್ನು ತೆರವುಗೊಳಿಸಲು ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಮತ್ತು ಬುಲ್ಡೋಜರ್‌ಗಳನ್ನು ನಿಯೋಜಿಸಿದೆ.

ಗೋಲ್ಪಾರಾದಲ್ಲಿ ನಡೆಯುತ್ತಿರುವ ತೆರವು ಕಾರ್ಯಾಚರಣೆ ಹಿಂಸೆ ತಿರುಗಿದೆ. ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಓರ್ವ ನಿವಾಸಿ ಮೃತಪಟ್ಟಿದ್ದಾರೆ.

ಬಿದ್ಯಾಪುರದ ಸಂತ್ರಸ್ತ ಕುಟುಂಬಗಳು ತೆರವು ಕಾರ್ಯಾಚರಣೆಯ ತಾರ್ಕಿಕತೆಯನ್ನು ಪ್ರಶ್ನಿಸಿವೆ. ಈ ಪ್ರದೇಶವನ್ನು ನಾಗಾಲ್ಯಾಂಡ್‌ನ ಆಕ್ರಮಣದಿಂದ ರಕ್ಷಿಸುವ ಉದ್ದೇಶದಿಂದ ಹಿಂದಿನ ಸರ್ಕಾರಗಳು ತಮ್ಮನ್ನು ಇಲ್ಲಿಗೆ ಸ್ಥಳಾಂತರಿಸಿದ್ದವು ಎಂದು ಹೇಳಿಕೊಂಡಿವೆ.

“ನಾವು ಇಲ್ಲಿಂದ ಎಲ್ಲಿಗೆ ಹೋಗಬೇಕು? ನನ್ನ ತಂದೆ ಸುಮಾರು 40 ವರ್ಷಗಳ ಹಿಂದೆ ನಾಗಾನ್ ಜಿಲ್ಲೆಯಿಂದ ಬಂದಿದ್ದರು. ಆದರೆ ನಾನು ಇಲ್ಲಿ ಜನಿಸಿದೆ. 1980ರ ದಶಕದಲ್ಲಿ ನಾಗಾಲ್ಯಾಂಡ್‌ನಿಂದ ಒತ್ತುವರಿಯಾಗದಂತೆ ರಕ್ಷಿಸಲು ನಮ್ಮನ್ನು ಇಲ್ಲಿಗೆ ಸರ್ಕಾರವೇ ಕರೆತಂದಿವೆ” ಎಂದು ಬಿದ್ಯಾಪುರದ ಸಂತ್ರಸ್ತ ಅಲಿ ಕಾಜಿ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

Download Eedina App Android / iOS

X