ಬಿಜೆಪಿ ನಾಯಕ ಸಿ ಕೃಷ್ಣಕುಮಾರ್ ವಿರುದ್ಧ ಮಹಿಳೆಯೋರ್ವರು ಲೈಂಗಿಕ ಕಿರುಕುಳ ಆರೋಪಿಸಿದ್ದಾರೆ. ಆದರೆ ಸಿ ಕೃಷ್ಣಕುಮಾರ್ ಈ ಆರೋಪವನ್ನು ನಿರಾಕರಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹಿಳೆಯೋರ್ವರು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ಸಿ ಕೃಷ್ಣಕುಮಾರ್ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದರ ಬೆನ್ನಲ್ಲೇ ಸಿ.ಕೃಷ್ಣಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವಶಕ್ತಿ ಸದ್ಬಳಕೆಗೆ ಇದು ಸಕಾಲ: ಮೋದಿ ಮನಸ್ಸು ಮಾಡುವರೇ?
“ಪಾಲಕ್ಕಾಡ್ ನಿವಾಸಿಯಾದ ದೂರುದಾರ ಮಹಿಳೆಯು ನನ್ನ ಪತ್ನಿಯ ನಿಕಟ ಸಂಬಂಧಿ. ಆಸ್ತಿ ವಿವಾದದಿಂದಾಗಿ ಹಲವಾರು ವರ್ಷಗಳಿಂದ ಈಕೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಎಂದು ಸಿ. ಕೃಷ್ಣಕುಮಾರ್ ಹೇಳಿದ್ದಾರೆ.
ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ವಿವಿಧ ಲೈಂಗಿಕ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಕಾಂಗ್ರೆಸ್ ಪಕ್ಷವು ಪಕ್ಷದಿಂದ ಅಮಾನತುಗೊಳಿಸಿದ ಎರಡು ದಿನಗಳ ನಂತರ ಬಿಜೆಪಿಯ ಹಿರಿಯ ನಾಯಕ ಸಿ.ಕೃಷ್ಣಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
