ಬಿಲ್‌ ಬಿದ್ದಿದ್ದೇ ತಡ, ಪ್ರೊಟೆಸ್ಟ್‌ಗಿಳಿದ ಬಿಜೆಪಿ ಮಹಿಳಾ ಎಂಪಿಗಳು: ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್

Date:

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ನೆಪದಲ್ಲಿ ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಉದ್ದೇಶದ ಬಿಜೆಪಿಯ ಸಂವಿಧಾನ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಬಿದ್ದದ್ದೇ ತಡ ಬಿಜೆಪಿ ಮಹಿಳಾ ಸಂಸದರು ಶುಕ್ರವಾರ ಸಂಸತ್ ಭವನದ ಸಂಕೀರ್ಣದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ಪ್ರತಿಭಟನೆಯ ಸಮಯ ಮತ್ತು ಸಂಸದರು ಹಿಡಿದಿದ್ದ ಪ್ಲಕಾರ್ಡ್‌ಗಳ ಬಗ್ಗೆ ನೆಟ್ಟಿಗರು ಬಿಜೆಪಿಯನ್ನು ತೀವ್ರವಾಗಿ ಲೇವಡಿ ಮಾಡುತ್ತಿದ್ದಾರೆ.

- Advertisement -

ಸೋಷಿಯಲ್ ಮೀಡಿಯಾದಲ್ಲಿ ಈ ಪ್ರತಿಭಟನೆಯ ಸಮಯದ ಬಗ್ಗೆಯೇ ಈಗ ದೊಡ್ಡ ಚರ್ಚೆ ನಡೆಯುತ್ತಿದೆ. ಸಂಜೆ 7.35ಕ್ಕೆ ಲೋಕಸಭೆಯಲ್ಲಿ ಮಸೂದೆಯ ಮೇಲೆ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಮಸೂದೆಗೆ ಅಗತ್ಯ ಬಹುಮತ ಸಿಗದ ಕಾರಣ ಕೇವಲ ಹತ್ತು ನಿಮಿಷಗಳಲ್ಲಿ, ಅಂದರೆ 7:45ಕ್ಕೆ ಸದನವನ್ನು ಮುಂದೂಡಲಾಯಿತು. ಅಚ್ಚರಿಯೆಂದರೆ, ಸದನ ಮುಂದೂಡಿಕೆಯಾದ ಸರಿಯಾಗಿ ಹದಿನೈದು ನಿಮಿಷಕ್ಕೆ, ಅಂದರೆ ರಾತ್ರಿ 8 ಗಂಟೆಗೆ ಬಿಜೆಪಿ ಸಂಸದರು ಸಂಸತ್ತಿನ ಹೊರಗೆ ಪ್ಲಕಾರ್ಡ್‌ಗಳನ್ನು ಹಿಡಿದು ಪ್ರತಿಭಟನೆಗೆ ನಿಂತಿದ್ದರು! ಮತದಾನದ ಫಲಿತಾಂಶ ಬಂದ ಕೇವಲ 15 ನಿಮಿಷಗಳಲ್ಲಿ ಬಣ್ಣ ಬಣ್ಣದ, ವಿವಿಧ ಘೋಷಣೆಗಳಿರುವ ಪ್ಲಕಾರ್ಡ್‌ಗಳನ್ನು ಸಿದ್ಧಪಡಿಸಿ ಪ್ರತಿಭಟನೆ ಆರಂಭಿಸಿದ್ದು ಹೇಗೆ ಎಂಬುದು ಈಗ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ಮಸೂದೆ ಬಿದ್ದ ಕೇವಲ 15 ನಿಮಿಷಗಳಲ್ಲಿ ಅಷ್ಟು ಸುಂದರವಾದ, ಬಣ್ಣ ಬಣ್ಣದ ಮತ್ತು ಬೇರೆ ಬೇರೆ ಘೋಷಣೆಗಳಿರುವ 20ಕ್ಕೂ ಹೆಚ್ಚು ಪ್ಲಕಾರ್ಡ್‌ಗಳನ್ನು ಪ್ರಿಂಟ್ ಮಾಡಿ, ಅಂಟಿಸಿ ಪ್ರತಿಭಟನೆಗೆ ತಂದಿದ್ದು ಹೇಗೆ? ಇದು ಸೂಪರ್ ಫಾಸ್ಟ್ ತಂತ್ರಜ್ಞಾನವೇ ಅಥವಾ ಮುಂಚಿತವಾಗಿಯೇ ಸಿದ್ಧಪಡಿಸಿದ ‘ಸ್ಕ್ರಿಪ್ಟ್’ ಪ್ಲಾನೇ? ಎಂದು ಜನರು ಕಾಲೆಳೆಯುತ್ತಿದ್ದಾರೆ.

ಸಾಮಾಜಿಕ ಜಾಲತಾಣ ʼXʼ, ಫೇಸ್‌ಬುಕ್‌, ಇನ್ಸ್ಟಾಗಳಲ್ಲಿ ಹಂಚಿಕೊಂಡಿರುವ ಪ್ರತಿಭಟನೆಯ ವಿಡಿಯೋಗಳಿಗೆ ಹಲವರು ಹಲವಾರು ರೀತಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಗೆ ತನ್ನ ಸಂಖ್ಯಾಬಲದ ಮೇಲೆ ನಂಬಿಕೆ ಇರಲಿಲ್ಲವೇ? ಮಸೂದೆ ಸೋಲುತ್ತದೆ ಎಂಬುದು ಖಚಿತವಾಗಿದ್ದರಿಂದಲೇ ಈ ಪ್ಲಕಾರ್ಡ್‌ಗಳನ್ನು ಮೊದಲೇ ರೆಡಿ ಮಾಡಿ ಇಟ್ಟುಕೊಳ್ಳಲಾಗಿತ್ತು. ಇದು ಮಹಿಳೆಯರ ಪರ ಕಾಳಜಿಯಲ್ಲ, ವಿರೋಧ ಪಕ್ಷಗಳನ್ನು ದೂಷಿಸಲು ಮಾಡಿದ ಸಂಚು” ಎಂದು ಹಲವರು ಕಮೆಂಟ್ ಮಾಡಿದ್ದಾರೆ.

“ಕೇವಲ 15 ನಿಮಿಷದಲ್ಲಿ ಇಷ್ಟೊಂದು ಸಿದ್ಧತೆ ಮಾಡಿಕೊಳ್ಳುವುದು ಅಸಾಧ್ಯ. ಈ ವೇಗವನ್ನು ನೋಡಿದರೆ ಸುಸಜ್ಜಿತ ಸಿನಿಮೀಯ ಶೂಟಿಂಗ್‌ನಂತೆ ಕಾಣುತ್ತಿದೆ” ಎಂದು ಕೆಲವರು ಹಾಸ್ಯಾಸ್ಪದವಾಗಿ ಬರೆದುಕೊಂಡಿದ್ದಾರೆ. “ಜನರ ಗಮನ ಸೆಳೆಯಲು ಇವರು ಯಾವುದೇ ಹಂತಕ್ಕಾದರೂ ಹೋಗುತ್ತಾರೆ. ಸಂಸತ್ತಿನಲ್ಲಿ ಮಸೂದೆ ಗೆಲ್ಲಿಸಿಕೊಳ್ಳಲು ಆಗದವರು, ಹೊರಗೆ ಬಂದು ಘೋಷಣೆ ಕೂಗುವುದರಲ್ಲಿ ನಿಸ್ಸೀಮರು” ಎಂದು ಕೆಲವರು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: BREAKING NEWS | ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲು

ಹೊಸ ಮಸೂದೆಗೆ ಅಗತ್ಯವಿದ್ದ 352 ಮತಗಳ ಬದಲಾಗಿ ಕೇವಲ 298 ಮತಗಳು ಬಂದಿದ್ದರಿಂದ ಮಸೂದೆ ಬಿದ್ದುಹೋಯಿತು. ಆದರೆ, ಈ ಸೋಲನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾದ ರೀತಿ ಈಗ ವ್ಯಂಗ್ಯಕ್ಕೊಳಗಾಗುತ್ತಿದೆ. ವಿರೋಧ ಪಕ್ಷಗಳನ್ನು ಮಹಿಳಾ ವಿರೋಧಿಗಳು ಎಂದು ಬಿಂಬಿಸಲು ಹೋಗಿ, ಬಿಜೆಪಿ ತನ್ನ ಎಡವಟ್ಟಿನ ತಂತ್ರದಿಂದಾಗಿ ತಾನೇ ಟ್ರೋಲ್‌ಗೆ ಆಹಾರವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇಶದ ಜನತೆ ಅಧಿಕಾರ ಬದಲಾವಣೆ ಬಯಸಿದ್ದಾರೆ, ನೀವು ಹೊರಡುವ ಸಮಯ ಬಂದಿದೆ; ರಾಜ್‌ನಾಥ್‌ಗೆ ಸಿಬಲ್‌ ಎಚ್ಚರಿಕೆ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಾಂಗ್ಲಾದೇಶ ಮಾದರಿಯಲ್ಲಿ ದೇಶದಲ್ಲಿ 'ಸರ್ಕಾರ ಬದಲಾವಣೆ'ಯ...

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...

ಹಾವೇರಿ | ಸಿಡಿಲು ಬಡಿದು ರೈತ ಸಾವು

ಹೊಲದಲ್ಲಿ ಕೃಷಿ ಕೆಲಸ ಮಾಡುವ ಸಮಯದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿರುವ...

ಬೀದರ್‌ | ಶೋಷಿತರಿಗೆ ಶರಣರ ಮಾನವೀಯ ಮೌಲ್ಯ ತಲುಪಿಸುವ ಗುರಿ : ಪ್ರಭುದೇವ ಸ್ವಾಮೀಜಿ

ಬಸವಾದಿ ಶರಣರ ವಚನಗಳು ಎಲ್ಲರ ನಡೆ-ನುಡಿಗೆ ದರ್ಪಣವಾಗಬೇಕು ಎಂದು ಲಿಂಗಾಯತ ಮಹಾ...