ದಕ್ಷಿಣ ಭಾರತಕ್ಕೆ ಬುಲೆಟ್ ರೈಲು ಜಾಲವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದಕ್ಷಿಣ ಭಾರತಕ್ಕೆ ಪ್ರವಾವಿತ ಬುಲೆಟ್ ರೈಉ ಯೋಜನೆ ಹೈದರಾಬಾದ್, ಅಮರಾವತಿ, ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಪರ್ಕ ಒದಗಿಸಲಿದೆ. ಈ ಬುಲೆಟ್ ರೈಲು ಯೋಜನೆಗಾಗಿ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ‘ಭಾರತ ಆಹಾರ ಉತ್ಪಾದನಾ ಶೃಂಗಸಭೆ’ಯಲ್ಲಿ ಮಾತನಾಡಿ ನಾಯ್ಡು, “ದಕ್ಷಿಣ ಭಾರತದ ಈ ಪ್ರಮುಖ ನಾಲ್ಕು ನಗರಗಳು ಸುಮಾರು 5 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಈ ನಗರಗಳ ನಡುವೆ ಶೀಘ್ರದಲ್ಲೇ ಬುಲೆಟ್ ರೈಲು ಬರಲಿದೆ. ಸಮೀಕ್ಷೆಗೆ ಆದೇಶ ನೀಡಲಾಗಿದೆ” ಎಂದು ಹೇಳಿದ್ದಾರೆ.
ಸದ್ಯ ಚೆನ್ನೈ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಂದು ಮುಂಜಾನೆ ಬುಲೆಟ್ ರೈಲಿನಲ್ಲಿ ಟೋಕಿಯೊದಿಂದ ಸೆಂಡೈಗೆ ಪ್ರಯಾಣಿಸಿದರು. ಅವರೊಂದಿಗೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಕೂಡ ಇದ್ದರು. ಈ ವೇಳೆ, ಜಪಾನ್ ದಿನಪತ್ರಿಕೆಯೊಂದಿಗೆ ಮಾತನಾಡಿರುವ ಮೋದಿ, “ಭಾರತದಲ್ಲಿ ಹೈಸ್ಪೀಡ್ ರೈಲು ಜಾಲವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ” ಎಂದು ಹೆಳಿದ್ದಾರೆ.
“ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯು ಪ್ರಗತಿಯಲ್ಲಿದೆ. ಇದೇ ಸಮಯದಲ್ಲಿ, ನಾವು ಒಂದು ದೊಡ್ಡ ಮಹತ್ವಾಕಾಂಕ್ಷೆಯನ್ನು ಘೋಷಿಸಿದ್ದೇವೆ. ನಮ್ಮ ದೇಶದಲ್ಲಿ 7,000 ಕಿಲೋಮೀಟರ್ ಉದ್ದದ ಹೈಸ್ಪೀಡ್ ರೈಲು ಜಾಲವನ್ನು ನಿರ್ಮಿಸಲಾಗುತ್ತದೆ” ಎಂದು ಮೋದಿ ಹೇಳಿದ್ದಾರೆ.
“ಮುಂದಿನ ಕೆಲವು ವರ್ಷಗಳಲ್ಲಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಪ್ರಯಾಣಿಕರ ಬಳಕೆಗೆ ದೊರೆಯಲಿದೆ. ಈ ಯೋಜನೆಯು ಭಾರತ ಮತ್ತು ಜಪಾನ್ ನಡುವಿನ ಪ್ರಮುಖ ಯೋಜನೆಯಾಗಿದೆ” ಎಂದಿದ್ದಾರೆ.
ಈ ಲೇಖ ಓದಿದ್ದೀರಾ?: “ಕನ್ನಡನಾಡು ನನ್ನ ಪ್ರೀತಿಯ ನಾಡು” ಎಂದು ಇಡೀ ಜಗತ್ತಿಗೆ ಸಾರುತ್ತಾ ಬಂದ ಬಾನು ದಸರಾ ಉದ್ಘಾಟಿಸಿದರೆ ತಪ್ಪೇ!
ಈ ಹಿಂದೆ, ಸರ್ಕಾರವು ಹೈಸ್ಪೀಡ್ ರೈಲು ಜಾಲದ ಸಂಭಾವ್ಯ ಮಾರ್ಗಗಳನ್ನು ಪಟ್ಟಿ ಮಾಡಿತ್ತು/ ಆ ಪಟ್ಟಿ ಇಂತಿದೆ;
ದೆಹಲಿ – ವಾರಣಾಸಿ
ದೆಹಲಿ – ಅಹಮದಾಬಾದ್
ಮುಂಬೈ – ನಾಗ್ಪುರ
ಮುಂಬೈ – ಹೈದರಾಬಾದ್
ಚೆನ್ನೈ – ಮೈಸೂರು
ದೆಹಲಿ – ಅಮೃತಸರ
ವಾರಣಾಸಿ – ಹೌರಾ