ರಸ್ತೆಯಲ್ಲಿ ತೆರಳುವಾಗಿ ಪ್ರಬಲ ಜಾತಿಯ ವ್ಯಕ್ತಿಗೆ ಸೇರಿದ ಕಾರಿಗೆ ಬೈಕ್ ತಗುಲಿತು ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಜಾತಿ ದೌರ್ಜನ್ಯದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಂದು ಘಟನೆ ನಡೆದಿದೆ. ದಲಿತ ಯುವಕ ಆದಿತ್ಯ ಕುಮಾರ್ ಮೇಲೆ ಪ್ರಬಲ ಜಾತಿಯ ದುರುಳರು ಅಮಾನುಷವಾಗಿ ಹಲ್ಲೆಗೈದಿದ್ದಾರೆ.
ಆದಿತ್ಯ ಕುಮಾರ್ ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಬೈರಾಗಿ ಪೂರ್ವಾ ಗ್ರಾಮದ ನಿವಾಸಿ, ಪ್ರಬಲ ಜಾತಿಯ ಕೃಷ್ಣ ಪಟೇಲ್ ಅವರ ಕಾರಿಗೆ ಆದಿತ್ಯ ಅವರ ಬೈಕ್ ಆಕಸ್ಮಿಕವಾಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಪಟೇಲ್ ಮತ್ತು ಅವರ ಸಹಚರರು ಯುವಕನನ್ನು ತಡೆದು, ಗಲಾಟೆ ನಡೆಸಿದ್ದಾರೆ. ಆದಿತ್ಯ ಅವರ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ರಕ್ತಸ್ರಾವವಾಗಿದ್ದು, ಆದಿತ್ಯ ಅವರನ್ನು ಗ್ರಾಮಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಆದಿತ್ಯ ಅವರ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?
ಕಾನೂನು ರಕ್ಷಣೆ ಮತ್ತು ಸರ್ಕಾರಿ ಕಾನೂನುಗಳ ಹೊರತಾಗಿಯೂ, ಭಾರತದಲ್ಲಿ ದಲಿತರು ಜಾತಿ ಆಧಾರಿತ ಹಿಂಸೆ, ತಾರತಮ್ಯ, ಲೈಂಗಿಕ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ರಾಜಸ್ಥಾನದಲ್ಲಿ ನೀರಿನ ಪಾತ್ರೆ ಮುಟ್ಟಿದ್ದಕ್ಕಾಗಿ ಎಂಟು ವರ್ಷದ ದಲಿತ ಬಾಲಕನನ್ನು ಮರದಿಂದ ತಲೆಕೆಳಗಾಗಿ ನೇತು ಹಾಕಲಾಯಿತು. ಶೌಚಾಲಯವನ್ನು ಸ್ವಚ್ಛಗೊಳಿಸಲು ಮತ್ತು ಕಸ ಸಂಗ್ರಹಿಸಲು ಕೇಳಲಾಯಿತು. ಕೆಲಸ ಮುಗಿಸಿದ ನಂತರ ನೀರು ಕೇಳಿದಾಗ ಅವರು ಹಲ್ಲೆ ನಡೆಸಿದರು.