ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಗುಜರಾತ್, ಕೇರಳ, ಹರಿಯಾಣ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಕೇಂದ್ರ ಆರೋಗ್ಯ ಇಲಾಖೆಯ ವರಧಿ ಪ್ರಕಾರ ಸೀಮಿತ ಲಕ್ಷಗಳು ಮಾತ್ರ ರೋಗಿಗಳಲ್ಲಿ ಕಂಡು ಬಂದಿರುವುದರಿಂದ, ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾಗುತ್ತದೆ.
ಒಂದು ವೇಳೆ, ಕೊರೋನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾದರೂ ಅಗತ್ಯ ವೈದ್ಯಕೀಯ ಸೌಕರ್ಯಗಳು ನಮ್ಮಲ್ಲಿವೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.
ಕೋವಿಡ್-19 ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲದೇ ಇದ್ದರೂ, ಕೊರೋನ 2ನೇ ಅಲೆಯಿಂದಾದ ಸಾವು-ನೋವು ಜೀವಹಾನಿ ಹಾಗೂ ಸಂಕಷ್ಟಗಳು ಜನರನ್ನು ಕಾಡುತ್ತಿದ್ದು, ಆತಂಕದಿಂದ ಹೊರಬರುವುದು ಕಷ್ಟಕರ. 2020ರಲ್ಲಿ ಮೊದಲ ಬಾರಿಗೆ ಭಾರತ ಪ್ರವೇಶಿಸಿದ ಕೊರೋನ, ಆ ವರ್ಷದ ಮಾರ್ಚ್-ಏಪ್ರಿಲ್ ಹೊತ್ತಿಗೆ ದೇಶವನ್ನು ಆವರಿಸಿಕೊಂಡಿತು. ದೇಶದಲ್ಲಿ ಲಾಕ್‌ಡೌನ್ ಹೇರಬೇಕಾಯಿತು.
ಆ ಸಮಯದಲ್ಲಿ ಭಾರತದ ಆರ್ಥಿಕತೆ ನೆಲಕಚ್ಚಿತು. ಮಾತ್ರವಲ್ಲದೆ, ಷೇರುಪೇಟೆಯೂ ಗಂಭೀರವಾಗಿ ಕುಸಿದಿತ್ತು. ಭಾರತದ ಅಗ್ರಗಣ್ಯ ಕಂಪನಿಗಳ ಮೌಲ್ಯವು 50%ಗೂ ಹೆಚ್ಚು ಸಂಪತ್ತು ಕರಗಿತು. 2020ರ ಮಾರ್ಚ್ ತಿಂಗಳಲ್ಲಿ ನಿಫ್ಟಿ ಸೂಚ್ಯಾಂಕವು ಸುಮಾರು 30%ಗೂ ಅಧಿಕವಾಗಿ ಕುಸಿದಿತ್ತು. ಈಗ, ಮತ್ತೆ ಕೊರೋನ ಪ್ರಕರಣಗಳು ಏರುತ್ತಿದ್ದು, 2020ರ ಸ್ಥಿತಿ ಮತ್ತೊಮ್ಮೆ ನಿರ್ಮಾಣವಾಗುತ್ತದೆಯೇ ಎಂಬ ಗೊಂದಲ ಷೇರು ಮಾರುಕಟ್ಟೆಯಲ್ಲಿದೆ.
ಈ ಲೇಖನ ಓದಿದ್ದೀರಾ?: ‘ಭಾರತ-ಪಾಕ್ ಯುದ್ಧ ನಿಲ್ಲಲು ವ್ಯಾಪಾರವೇ ಕಾರಣ’: ಒತ್ತಿ ಹೇಳುತ್ತಿರುವ ಅಮೆರಿಕ, ಬಾಯಿಬಿಡದ ಭಾರತ
ಕಳದೆ ಒಂದೂವರೆ ತಿಂಗಳಿನಿಂದ ಷೇರುಪೇಟೆಯಲ್ಲಿ ಕೊಂಚ ಏರುಗತಿಯಲ್ಲಿದ್ದರೂ, ಕಡೆಯ ಎಂಟು ತಿಂಗಳಿಗೆ ಹೋಲಿಸಿದರೆ ಕುಸಿತದ ಹಾದಿಯನ್ನು ಇನ್ನೂ ಹಿಮ್ಮೆಟ್ಟಲಾಗಿಲ್ಲ. ಟ್ರಂಪ್ ಜಾರಿಗೊಳಿಸಿದ ಟಾರಿಫ್ ಮತ್ತು ಚೀನಾದ ಆಕರ್ಷಿತ ಷೇರು ಮಾರುಕಟ್ಟೆಯಿಂದಾಗಿ ವಿದೇಶಿ ಹೂಡಿಕೆದಾರರು ಭಾರತವನ್ನು ತೊರೆದಿದ್ದರು. ಪರಿಣಾವಾಗಿ, ಭಾರತದ ಮಾರುಕಟ್ಟೆಯಲ್ಲಿ ಗಣನೀಯ ಇಳಿಕೆ ಕಂಡಿತ್ತು. ಅದು ಈವರೆಗೂ ಮುಂದುವರಿಕೆದಿದೆ.
ಇಂತಹ ಸ್ಥಿತಿಯಲ್ಲೇನಾದರೂ ಕೊರೋನ ಪ್ರಕರಣಗಳು ಮತ್ತಷ್ಟು ಉಲ್ಬಣಗೊಂಡರೆ ಆರ್ಥಿಕ ವಲಯದಲ್ಲಿ ಸಾಕಷ್ಟು ಹಿಂಜರಿಕೆಯಾಗುವ ಸಂಭವವಿದೆ. 2020 ಮತ್ತು 2021ರಲ್ಲಿ ಸರ್ಕಾರಗಳು ತೆಗೆದುಕೊಂಡ ಅನಿಯಂತ್ರಣ ಕ್ರಮಗಳು ಮತ್ತು ಆರ್ಥಿಕತೆಯಲ್ಲಿನ ಬೇಜವಾಬ್ದಾರಿಯಿಂದಾಗಿ ಮಧ್ಯಮ ಮತ್ತು ಸಣ್ಣ ಕಂಪನಿಗಳು ಹಾಗೂ ದೇಶಿಯ ಸಣ್ಣ ಸಣ್ಣ ಹೂಡಿಕೆದಾರರು ಕೋಟ್ಯಾಂತರ ರೂ. ಮೌಲ್ಯದ ಸಂಪತ್ತನ್ನು ಕಳೆದುಕೊಳ‍್ಳಬೇಕಾಗಿಯಿತು. ಅದೇ ಕ್ರಮಗಳನ್ನು ಸರ್ಕಾರ ಈಗಲೂ ಅನುಸರಿದರೆ ಹೂಡಿಕೆದಾರರು ಖಂಡಿತವಾಗಿ ಮುಂಬರುವ ದಿನಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.