ಬಂಧನದಲ್ಲಿ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್‌ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ: ಸಿಪಿಐಎಂ ಆರೋಪ

Date:

ಇತ್ತೀಚೆಗೆ ಬಂಧನಗೊಂಡಿದ್ದ ನೋಯ್ಡಾ ಕಾರ್ಮಿಕರ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ ನಡೆದಿದೆ ಎಂದು ಸಿಪಿಐಎಂ ಆರೋಪಿಸಿದೆ. ಬಂಧನದ ಒಂದು ತಿಂಗಳ ನಂತರ ಇತ್ತೀಚೆಗೆ ಜಾಮೀನು ಪಡೆದ ನೋಯ್ಡಾ ಕಾರ್ಮಿಕರನ್ನು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ನೇತೃತ್ವದ ನಿಯೋಗ ಭೇಟಿ ಮಾಡಿದೆ.

- Advertisement -

ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯರಾದ ಆರ್ ಅರುಣ್ ಕುಮಾರ್ ಮತ್ತು ತಪನ್ ಸೇನ್, ರಾಜ್ಯಸಭಾ ಸದಸ್ಯ ವಿ ಶಿವದಾಸನ್ ಮತ್ತು ಇತರ ಪಕ್ಷದ ನಾಯಕರು ಸೇರಿದಂತೆ ನಿಯೋಗಕ್ಕೆ ಕಾರ್ಮಿಕರು ತಮ್ಮ ಅನುಭವಗಳನ್ನು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ...

ವಿಜಯಪುರದಲ್ಲಿ ಜಿ.ಪಂ ತಾ.ಪಂ ಚುನಾವಣೆಯ ಕಾವು; AI ಪೋಸ್ಟರ್‌ಗಳಲ್ಲೂ...

ಚುನಾವಣೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಅಭ್ಯರ್ಥಿಗಳ ಅಂತಿಮ ಪಟ್ಟಿಯೂ ಸಿದ್ಧವಾಗಿಲ್ಲ. ಆದರೆ, ಗ್ರಾಮೀಣ ರಾಜಕಾರಣದಲ್ಲಿ ಮಾತ್ರ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ...

ಸ್ಟಿಂಗ್ ಆರೋಪದ ಸುತ್ತ ರಾಜಕೀಯ ಲೆಕ್ಕಾಚಾರ; ಸತ್ಯಾಸತ್ಯತೆ ಹೊಣೆಗಾರಿಕೆಯ...

ಸಿದ್ದರಾಮಯ್ಯ ಅವರ ನಿರಾಕರಣೆ, ಕುಮಾರಸ್ವಾಮಿ ಅವರ ಆರೋಪಗಳು, ಆರ್. ಅಶೋಕ್ ಅವರ ಹಣಕಾಸಿನ ಕುರಿತ ಹೇಳಿಕೆಗಳು ಮತ್ತು ಸರ್ಕಾರದ ತನಿಖೆಯ ಭರವಸೆ—ಇವೆಲ್ಲವೂ ಪ್ರಕರಣದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಆದರೆ ಇವುಗಳಲ್ಲಿ ಯಾವುದೂ ಸ್ವತಃ...

ಇದನ್ನು ಓದಿದ್ದೀರಾ? ಪರ್ಯಾಯ ರಾಜಕಾರಣಕ್ಕೆ ನೀತಿಗಳು ಬದಲಾಗಬೇಕೇ ಹೊರತು ಸರ್ಕಾರ ಬದಲಾವಣೆಯಲ್ಲ: ಸಿಪಿಐಎಂ ಕೆ ಪ್ರಕಾಶ್

ಈ ಕಾರ್ಮಿಕರಿಗೆ ಪೊಲೀಸ್ ಕಸ್ಟಡಿಯಲ್ಲಿ ದೈಹಿಕವಾಗಿ ಕಿರುಕುಳ ನೀಡಲಾಗಿದೆ. ಸುಳ್ಳು ಸಾಕ್ಷ್ಯಗಳನ್ನು ಇಟ್ಟುಕೊಂಡು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾರ್ಮಿಕರು ತಮಗೆ ಮಾಹಿತಿ ನೀಡಿದ್ದಾರೆ ಎಂದು ನಿಯೋಗ ಆರೋಪಿಸಿದೆ. ಜತೆಗೆ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ಕಾರ್ಮಿಕರನ್ನು ಸಹ ನಿಯೋಗ ಭೇಟಿ ಮಾಡಿದೆ.

ಏನಿದು ಘಟನೆ, ಕಾರ್ಮಿಕರ ಬಂಧನವೇಕೆ?

ಉತ್ತರ ಪ್ರದೇಶದ ನೋಯ್ಡಾದ ಕೈಗಾರಿಕಾ ಪ್ರದೇಶಗಳಲ್ಲಿ ಜೀವನ ವೆಚ್ಚ ಮತ್ತು ಹಣದುಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸುವಂತೆ ಆಗ್ರಹಿಸಿ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯು ಕೆಲವು ಕಡೆ ಹಿಂಸಾಚಾರಕ್ಕೆ ತಿರುಗಿದಾಗ, ಪೊಲೀಸರು ಸುಮಾರು 300ಕ್ಕೂ ಹೆಚ್ಚು ಜನರನ್ನು ಬಂಧಿಸಿ 7ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ಇನ್ನು ಈ ಹಿಂಸಾಚಾರದ ಹಿಂದೆ ಸಂಘಟಿತ ಪಿತೂರಿ ಇದೆ ಎಂದು ಗೌತಮ್ ಬುದ್ಧ ನಗರದ ಪೊಲೀಸ್ ಕಮಿಷನರ್ ಲಕ್ಷ್ಮಿ ಸಿಂಗ್ ದೂರಿದ್ದರು. ಬಂಧಿತರಲ್ಲಿ ಹಲವರು ಕಾರ್ಮಿಕರಲ್ಲ, ಬದಲಿಗೆ ಹೊರಗಿನಿಂದ ಬಂದು ಗಲಭೆ ಸೃಷ್ಟಿಸಿದ ಸಮಾಜವಿರೋಧಿ ಶಕ್ತಿಗಳು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿತ್ತು. ಇವೆಲ್ಲ ಬೆಳವಣಿಗೆ ನಡುವೆ ಇತ್ತೀಚೆಗೆ ಜಾಮೀನು ಪಡೆದ ನೋಯ್ಡಾ ಕಾರ್ಮಿಕರನ್ನು ಸಿಪಿಐಎಂ ನಿಯೋಗ ಭೇಟಿ ಮಾಡಿದೆ.

ಇದನ್ನು ಓದಿದ್ದೀರಾ? ವಿ.ಬಿ.ಜಿ ರಾಮ್​ ಜಿ ಯೋಜನೆ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರ ಪಾಲಿಗೆ ಮರಣ ಶಾಸನ : ಡಾ.ಅನಿಲ್ ಕುಮಾರ್

ಇನ್ನು, “ಕಳೆದ ಕೆಲವು ದಿನಗಳಿಂದ, ಜೈಲಿನಲ್ಲಿರುವ ಕಾರ್ಮಿಕರನ್ನು ಭೇಟಿ ಮಾಡಲು ನಮ್ಮ ಸಂಸತ್ ಸದಸ್ಯ ವಿ ಶಿವದಾಸನ್ ಮೂಲಕ ಅನುಮತಿ ಪಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ ಉನ್ನತ ಅಧಿಕಾರಿಗಳು ವಿನಂತಿಯನ್ನು ತಿರಸ್ಕರಿಸಿದ್ದರು” ಎಂದು ಸಿಪಿಐಎಂ ನಾಯಕ ಬೇಬಿ ಹೇಳಿದ್ದಾರೆ.

“ಜೈಲಿನಲ್ಲಿರುವ ಕೆಲವು ಕಾರ್ಮಿಕರು ಜಾಮೀನು ಅರ್ಜಿಗಳನ್ನು ಹಾಕಲು ಮತ್ತು ಸಾಕಷ್ಟು ಕಾನೂನು ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ. ಇದು ಅವರ ಮೂಲಭೂತ ಹಕ್ಕುಗಳ ನಿರಾಕರಣೆಗೆ ಸಮಾನವಾಗಿದೆ. ಸಿಪಿಐಎಂ ಕಾರ್ಮಿಕರಿಗೆ ಕಾನೂನು ನೆರವು ಮತ್ತು ರಾಜಕೀಯ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ” ಎಂದು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕನ್ನರಿಗೆ ಉದ್ಯೋಗ ವಂಚನೆ: ಕ್ಲೌಡೆರಾ ಕಂಪನಿಗೆ ಭಾರಿ ದಂಡ, ಗ್ರೀನ್ ಕಾರ್ಡ್ ಪ್ರೋಗ್ರಾಂನಿಂದ ನಿಷೇಧ

ಅಮೆರಿಕ ಸರ್ಕಾರವು ಸ್ಥಳೀಯ ಕಾರ್ಮಿಕರಿಗೆ ತಾರತಮ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ 'ಕ್ಲೌಡೆರಾ'...

ಶಿರಾಳಕೊಪ್ಪ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಮತಗಳ್ಳತನದ ರೂವಾರಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಯುಪಿ ಚುನಾವಣೆಗೆ ಕಾಂಗ್ರೆಸ್ ಪ್ಲ್ಯಾನ್: ಎಸ್‌ಪಿ ಮುಂದೆ 125+ ಸೀಟುಗಳ ಬೇಡಿಕೆ ಇಡಲು ಪ್ರಿಯಾಂಕಾ ಸಜ್ಜು!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ...

SIR | 14 ಕೋಟಿ ‘ಮತದಾರರು ಕಣ್ಮರೆ’; ಬೆಚ್ಚಿಬೀಳಿಸುವ ಅಂಕಿಅಂಶ!

ಎಸ್‌ಐಆರ್ ವಿವಾದದ ಚರ್ಚೆಗಳಲ್ಲಿ ಎರಡು ವಾದಗಳಿವೆ; ಒಂದು - ಮತಪಟ್ಟಿಯಿಂದ 13.3...