ಕಾಶ್ಮೀರದ ಕಾರ್ಗಿಲ್ ಪ್ರದೇಶಗಳನ್ನು ಅತಿಕ್ರಮಣ ಮಾಡಿದ್ದ ಪಾಕಿಸ್ತಾನದ ಭಯೋತ್ಪಾದಕರು ಮತ್ತು ಸೇನೆಯ ವಿರುದ್ಧ ವಿರುದ್ಧ ಭಾರತೀಯ ಸೇನೆ ಹೋರಾಡಿ ವಿಜಯ ಗಳಿಸಿದ ಕಾರ್ಗಿಲ್ ಯುದ್ಧದ ಸಂಭ್ರಮೋತ್ಸವವನ್ನು ಮತ್ತು ಇತ್ತೀಚೆಗೆ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ಆಪರೇಷನ್ ಸಿಂಧೂರದ ವಿಜಯೋತ್ಸವವನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಜುಲೈ 26ರಂದು ಸಂಜೆ 6 ಗಂಟೆಗೆ ಹೊನ್ನಾಳಿಯ ನಗರದ ಸೈನಿಕ ಪ್ರತಿಮೆ ಬಳಿ ಆಯೋಜಿಸಲಾಗಿದೆ.

“27 ನೇ ಕಾರ್ಗಿಲ್ ವಿಜಯೋತ್ಸವ ಮತ್ತು ಇತ್ತೀಚಿಗೆ ನಡೆದ ಆಪರೇಷನ್ ಸಿಂಧೂರದ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಸೈನಿಕರು ತಮ್ಮ ಜೀವದ ಹಂಗು ತೊರೆದು ರಾಷ್ಟ್ರದ ಗಡಿ ರಕ್ಷಣೆಗಾಗಿ ಬಲಿದಾನಗಳಿಂದ ದೇಶವನ್ನು ರಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ಸಲುವಾಗಿ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತದೆ” ಎಂದು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವಾಸಪ್ಪ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅತಿವೃಷ್ಟಿ, ಪ್ರಕೃತಿ ವಿಕೋಪಕ್ಕೆ ಬೆಳೆ ವಿಮೆ, ಬೀಜ ರಸಗೊಬ್ಬರ ಬೆಲೆ ನಿಯಂತ್ರಣಕ್ಕೆ ರೈತ ಸಂಘ ಒತ್ತಾಯ
“ಇದೇ ದಿನ ಜುಲೈ 26ರಂದು ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿ ದೇವನಾಯಕನಹಳ್ಳಿಯ ಕನಕದಾಸರ ವೃತ್ತದಿಂದ ಸೈನಿಕ ಪ್ರತಿಮೆವರೆಗೆ ಬೈಕ್ ರ್ಯಾಲಿ ನಡೆಯಲಿದ್ದು ಮಾಜಿ ಯೋಧರು, ರಾಷ್ಟ್ರಪ್ರೇಮಿಗಳು, ಯುವಕರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಸಾರ್ವಜನಿಕರು ಕೂಡ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲು ಹಾಗೂ ಸಂಜೆ 6:00ಗೆ ನಡೆಯುವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆಹ್ವಾನ ನೀಡಿದ್ದಾರೆ.