ಕೌಟುಂಬಿಕ ದೌರ್ಜನ್ಯ | ತಮ್ಮ ಪತಿಯರನ್ನು ತೊರೆದು ಪರಸ್ಪರ ವಿವಾಹವಾದ ಮಹಿಳೆಯರು

Date:

ಗಂಡಂದಿರ ಮದ್ಯದ ವ್ಯಸನ ಮತ್ತು ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತಿದ್ದ ಇಬ್ಬರು ಮಹಿಳೆಯರು ತಮ್ಮ ಗಂಡಂದಿರನ್ನು ತೊರೆದು, ಪರಸ್ಪರ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಗೋರಖ್‌ಪುರದ ಡಿಯೋರಿಯಾದಲ್ಲಿರುವ ಶಿವನ ದೇವಾಲಯದಲ್ಲಿ (ಚೋಟಿ ಕಾಶಿ) ಕವಿತಾ ಮತ್ತು ಗುಂಜಾ ಎಂಬ ಮಹಿಳೆಯರು ವಿವಾಹವಾಗಿದ್ದಾರೆ.
ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದರು. ತಾವು ಎದುರಿಸುತ್ತಿರುವ ಕೌಂಟುಂಬಿಕ ದೌರ್ಜನ್ಯಗಳ ಬಗ್ಗೆ ಇಬ್ಬರು ಹಂಚಿಕೊಂಡಿದ್ದರು. ತಮ್ಮ ಗಂಡಂದಿರು ಮದ್ಯದ ವ್ಯಸನಕ್ಕೆ ತುತ್ತಾಗಿದ್ದು, ದಿನನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಕಲಹಗಳ ಬಗ್ಗೆ ಪರಸ್ಪರ ಅಳಲು ತೋಡಿಕೊಳ್ಳುತ್ತಿದ್ದರು. ಪತಿಯರ ದೌರ್ಜನ್ಯದಿಂದ ಬೇಸತ್ತು, ತಮ್ಮ ಪತಿಯರನ್ನು ತೊರೆಯಲು ನಿರ್ಧಿಸಿದ್ದ ಮಹಿಳೆಯರು ಪರಸ್ಪರ ವಿವಾಹವಾಗಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.
“ನಾವಿಬ್ಬರು ನಮ್ಮ ಗಂಡಂದಿರ ಕುಡಿತದ ಚಟ ಮತ್ತು ದೌರ್ಜನ್ಯದಿಂದಾಗಿ ಬೇಸತ್ತು ಹೋಗಿದ್ದೆವು. ಮನೆಯಲ್ಲಿನ ಕೌಟುಂಬಿಕ ದೌರ್ಜನ್ಯವು ನಮ್ಮಿಬ್ಬರ ನಡುವೆ ಶಾಂತಿ ಮತ್ತು ಪ್ರೀತಿಯ ಹುಡುಕಾಟಕ್ಕೆ ಕಾರಣವಾಯಿತು. ನಾವು ನಮ್ಮ ಪತಿಯರನ್ನು ತೊರೆದು, ಇಬ್ಬರೂ ಹೊಸ ಜೀವನ ಆರಂಭಿಸಿದ್ದೇವೆ” ಎಂದು ಗುಂಜಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...