ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

Date:

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ ಬದಲು ಮತ್ತೆ ಮಾರುಕಟ್ಟೆಗೆ ತಲುಪಿಸಿದ ಆರೋಪದ ಕುರಿತು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತನಿಖೆ ಕೈಗೊಂಡಿದೆ. ರಿಲಯನ್ಸ್‌ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌, ರಿಲಯನ್ಸ್‌ ರಿಟೇಲ್‌, ಬ್ಲಿಂಕಿಟ್‌ ಹಾಗೂ ಜೊಮ್ಯಾಟೊ ಹೈಪರ್‌ಪ್ಯೂರ್‌ಗೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ 10 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

- Advertisement -

ಠಾಣೆ ಮತ್ತು ಪುಣೆ ಜಿಲ್ಲೆಗಳಲ್ಲಿ ಅಕ್ಟೋಬರ್‌ 14 ಹಾಗೂ 15ರಂದು ಏಳು ತಂಡಗಳು ಏಕಕಾಲದಲ್ಲಿ ತಪಾಸಣೆ ನಡೆಸಿವೆ. ಗೋದಾಮುಗಳು, ವಿಲೇವಾರಿ ಕೇಂದ್ರಗಳು ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಒಟ್ಟು ₹48,09,924 ಮೌಲ್ಯದ ಆಹಾರ ದಾಸ್ತಾನು ಜಪ್ತಿಯಾಗಿದೆ. ಇದರಲ್ಲಿ ಭಿವಂಡಿಯ ವಿಲೇವಾರಿ ಕೇಂದ್ರದಿಂದ ₹24 ಲಕ್ಷಕ್ಕೂ ಹೆಚ್ಚು, ವಡಪೆಯ ರಿಲಯನ್ಸ್‌ ಘಟಕದಿಂದ ಸುಮಾರು ₹4.92 ಲಕ್ಷ ಹಾಗೂ ಉಸತಾನೆಯ ಹೈಪರ್‌ಪ್ಯೂರ್‌ ಘಟಕದಿಂದ ₹7.81 ಲಕ್ಷದ ಸರಕು ಸೇರಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಎಫ್‌ಡಿಎ ಪ್ರಾಥಮಿಕ ತನಿಖೆಯ ಪ್ರಕಾರ, ನಾಶಪಡಿಸಬೇಕಿದ್ದ ಉತ್ಪನ್ನಗಳನ್ನು ವಿಲೇವಾರಿ ಗುತ್ತಿಗೆದಾರರಿಗೆ ಒಪ್ಪಿಸಲಾಗುತ್ತಿತ್ತು. ಅಲ್ಲಿಂದ ಅವು ಪರವಾನಗಿಯಿಲ್ಲದ ವಿಂಗಡಣಾ ಕೇಂದ್ರಗಳಿಗೆ ತಲುಪುತ್ತಿದ್ದವು ಎಂಬ ಆರೋಪವಿದೆ. ಹೊರನೋಟಕ್ಕೆ ಮಾರಾಟಯೋಗ್ಯವಾಗಿ ಕಾಣುವ ಪ್ಯಾಕೆಟ್‌ಗಳನ್ನು ಪ್ರತ್ಯೇಕಿಸಿ, ಮಧ್ಯವರ್ತಿಗಳು ಮತ್ತು ಪೂರೈಕೆದಾರರ ಮೂಲಕ ಚಿಲ್ಲರೆ ಅಂಗಡಿಗಳಿಗೆ ಕಳುಹಿಸಲಾಗುತ್ತಿತ್ತು ಎಂದು ತನಿಖಾ ದಾಖಲೆಗಳು ತಿಳಿಸಿವೆ. ಉತ್ಪನ್ನಗಳ ನೈಜ ನಾಶದ ಕುರಿತು ಪರಿಶೀಲಿಸಬಹುದಾದ ಪುರಾವೆಗಳು ಲಭ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisements

ಆಹಾರ ನಾಶಪಡಿಸಿರುವುದಾಗಿ ನೀಡಲಾಗಿದ್ದ ಪ್ರಮಾಣಪತ್ರಗಳು ಮತ್ತು ವಿಲೇವಾರಿ ದಾಖಲೆಗಳಲ್ಲಿಯೂ ವ್ಯತ್ಯಾಸಗಳು ಕಂಡುಬಂದಿವೆ. ಸರಕುಗಳ ಪ್ರಮಾಣ ಹಾಗೂ ಕಳುಹಿಸಿದವರು, ಸ್ವೀಕರಿಸಿದವರ ವಿವರಗಳು ಹೊಂದಿಕೆಯಾಗಿರಲಿಲ್ಲ. ಭಿವಂಡಿಯ ಗುಲ್ಜಾರ್‌ನಗರದ ಅಂಗಡಿಯಲ್ಲಿ ಅವಧಿ ಮೀರಿದ ಮತ್ತು ಸೋರಿಕೆಯಾಗುತ್ತಿದ್ದ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿರುವುದು ಪತ್ತೆಯಾಗಿದೆ. ಆ ಅಂಗಡಿಗೆ ಪರವಾನಗಿ ಅಥವಾ ಖರೀದಿ ಬಿಲ್‌ಗಳಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್‌ 15ರ ವಿಚಾರಣೆಯ ಬಳಿಕ ಐದು ಘಟಕಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ಅವುಗಳಲ್ಲಿ ರಿಲಯನ್ಸ್‌ಗೆ ಸಂಬಂಧಿಸಿದ ಮೂರು ಹಾಗೂ ಎಟರ್ನಲ್‌ ಸಮೂಹಕ್ಕೆ ಸಂಬಂಧಿಸಿದ ಎರಡು ಘಟಕಗಳಿವೆ. ಎಟರ್ನಲ್‌ ಸಮೂಹವು ಬ್ಲಿಂಕಿಟ್‌ ಮತ್ತು ಜೊಮ್ಯಾಟೊ ವ್ಯವಹಾರಗಳನ್ನು ನಡೆಸುತ್ತದೆ. ಪರವಾನಗಿಯಿಲ್ಲದ ನಾಲ್ಕು ಕೇಂದ್ರಗಳ ವಹಿವಾಟನ್ನೂ ಸ್ಥಗಿತಗೊಳಿಸಲಾಗಿದೆ. ಠಾಣೆಯ ಶಾಂತಿನಗರ ಠಾಣೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಾಗಿದೆ.

ನಾಶಪಡಿಸಬೇಕಾದ ಆಹಾರವನ್ನು ಮಾರುಕಟ್ಟೆಗೆ ಮರಳಿಸುವುದು ಗಂಭೀರ ವಿಚಾರ; ಯಾವುದೇ ಕಂಪನಿಯೂ ಕಾನೂನಿಗಿಂತ ಮೇಲಲ್ಲ ಎಂದು ಎಫ್‌ಡಿಎ ಆಯುಕ್ತ ತುಕಾರಾಮ್‌ ಮುಂಢೆ ಹೇಳಿದ್ದಾರೆ. ರಿಲಯನ್ಸ್‌ ಮತ್ತು ಬ್ಲಿಂಕಿಟ್‌ನ ಪ್ರತಿಕ್ರಿಯೆ ತಕ್ಷಣ ಲಭ್ಯವಾಗಿಲ್ಲ. ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ, ಹೇಳಿಕೆಗಳನ್ನು ದಾಖಲಿಸಿದ್ದಾರೆ. ಜಪ್ತಿಯಾದ ಸರಕುಗಳ ಸಾಗಣೆ, ಮಾರಾಟ ಮತ್ತು ನಾಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ರೈತರಿಗೆ ಎಕರೆಗೆ ರೂ.25 ಸಾವಿರ ಪರಿಹಾರ ನೀಡಿ: ಭೀಮ್ ರಾಜ್ಯ ದಲಿತ ಸೇವಾ ಸಮಿತಿ ಆಗ್ರಹ

ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ...

14 ಎಸೆತಗಳಲ್ಲಿ ಅರ್ಧಶತಕ: ಮೆಕ್‌ಗರ್ಕ್‌ ಸಿಡಿಲಾಟ, ವೈಭವ್‌ ವಿಶ್ವದಾಖಲೆ ಅಬಾಧಿತ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ ಕೇವಲ 14...

ರಷ್ಯಾ-ಉಕ್ರೇನ್ ಸಂಘರ್ಷ: ನಿರ್ಬಂಧ ವಿನಾಯಿತಿ ಪುಟಿನ್‌ಗೆ ಟ್ರಂಪ್ ನೀಡಿದ ಬಹುಮಾನ ಎಂದ‌ ಝೆಲೆನ್ಸ್ಕಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ಮೇಲಿನ ಪ್ರಮುಖ ನಿರ್ಬಂಧಗಳನ್ನು...

CJPಯ ತಿರಂಗಾ ಯಾತ್ರೆಗೆ ಮುನ್ನ ಬಂಧನ; ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು

ಕನ್ನಾಟ್ ಪ್ಲೇಸ್‌ನಲ್ಲಿ ಆಯೋಜಿಸಲಾಗಿದ್ದ ‘ಲೇಹ್ರಾ ದೋ ತಿರಂಗಾ’ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ...