Fact Check | ಹೊಸ ಸಂಸತ್ ಭವನಕ್ಕೆ ಯುಪಿಎ ಸರ್ಕಾರ 3,000 ಕೋಟಿ ರೂ. ಅನುಮೋದಿಸಿತ್ತೆ?

Date:

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಸರ್ಕಾರ 2012ರಲ್ಲಿ ಯೋಜನೆ ರೂಪಿಸಿತ್ತು. 3,000 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ, ಮೋದಿ ಸರ್ಕಾರ ಕೇವಲ 970 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಲವರು ಈ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಹೇಳಲಾಗಿರುವ ಪ್ರತಿಪಾದನೆ ನಿಜವೇ ಪರಿಶೀಲಿಸೋಣ.

- Advertisement -
ಪ್ರತಿಪಾದನೆ: 2012ರಲ್ಲಿ ಯುಪಿಎ ಸರ್ಕಾರ ಹೊಸ ಸಂಸತ್ ಭವನ ನಿರ್ಮಾಣಕ್ಕೆ 3,000 ಕೋಟಿ ರೂ. ಮೊತ್ತದ ಯೋಜನೆಯನ್ನು ಅನುಮೋದಿಸಿತ್ತು. 
ಸತ್ಯ: 2012ರಲ್ಲಿ ಅಂದಿನ  ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ ಭವನ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ನಿಜವಾದರೂ, ಆ ವೇಳೆ ಯೋಜನಾ ವೆಚ್ಚ ಮತ್ತು ಹಣ ಹಂಚಿಕೆಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಯನ್ನು ಅಂದಿನ ಸರ್ಕಾರ ಸಿದ್ದಪಡಿಸಿರಲಿಲ್ಲ. ಆದರೆ, ಕೆಲವರು ಯುಪಿಎ ಆಡಳಿತಾವಧಿಯಲ್ಲಿ ಹೊಸ ಸಂಸತ್ ಕಟ್ಟಡಕ್ಕೆ 3,000 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು ಎಂದು ಕಪೋಲ ಕಲ್ಪಿತ ವೆಚ್ಚವನ್ನು ಹಬ್ಬಿಸಲಾಗಿದೆ. ಹೀಗಾಗಿ, ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿನ ಪ್ರತಿಪಾದನೆ ಸುಳ್ಳಾಗಿದೆ.
upa

ಯುಪಿಎ ಆಡಳಿತಾವಧಿಯಲ್ಲಿ ಸಂಸತ್ ಭವನದ ಪಾರಂಪರಿಕತೆ ಮತ್ತು ವೈಭವವನ್ನು ಕಾಪಾಡುವ ದೃಷ್ಟಿಯಿಂದ ಅಂದಿನ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಎರಡು ಸಮಿತಿಗಳನ್ನು ರಚಿಸಿದ್ದರು. ಮೊದಲನೆಯದು ‘ಪಾರಂಪರಿಕ ಕಟ್ಟಡವಾಗಿ ಕ್ಯಾರೆಕ್ಟರ್ ನಿರ್ವಹಣೆ ಮತ್ತು ಸಂಸತ್ ಭವನ ಸಂಕೀರ್ಣದ ಅಭಿವೃದ್ಧಿ’ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ). ಎರಡನೆಯದು ಜೆಪಿಸಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಲು ತಾಂತ್ರಿಕ ತಜ್ಞರನ್ನು ಒಳಗೊಂಡಿರುವ ಸ್ಥಾಯಿ ತಾಂತ್ರಿಕ ಸಮಿತಿ (ಎಸ್‌ಟಿಸಿ). ಆದರೆ, ಸಮಿತಿಯ ವರದಿಗಳು ಸದ್ಯ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಜುಲೈ 2012ರಲ್ಲಿ, ಸಂಸದೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಾಧ್ಯಮ ಸಂದರ್ಶಕರು ಮತ್ತು ಸಂಸತ್ತಿನ ಚಟುವಟಿಕೆಗಳ ಸಂಖ್ಯೆಯಲ್ಲಿನ ಏರಿಕೆಯನ್ನು ಪರಿಗಣಿಸಿ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ತಿನ ಕಟ್ಟಡ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.

New Parliament UPA Committee

ಅದರಂತೆ, ಮೀರಾ ಕುಮಾರ್ ಅವರ ವಿಶೇಷ ಕರ್ತವ್ಯದ ಅಧಿಕಾರಿ (ಒಎಸ್‌ಡಿ) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಔಪಚಾರಿಕ ಪತ್ರವನ್ನು ಬರೆದರು, “ಸಂಸತ್ತಿನ ಕಟ್ಟಡವನ್ನು 1920ರ ದಶಕದಲ್ಲಿ ನಿರ್ಮಿಸಲಾಗಿದೆ. ಆ ಕಟ್ಟಡದಲ್ಲಿ 1927ರಿಂದ ಕೆಲಸ-ಕಾರ್ಯಗಳು ಆರಂಭವಾದವು. ಹೀಗಾಗಿ, ಕಟ್ಟಡವನ್ನು ಪಾರಂಪರಿಕ ಗ್ರೇಡ್‌-1 ಕಟ್ಟಡವೆಂದು ಘೋಷಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಹೊಸ ಸಂಸತ್ ಕಟ್ಟಣ ನಿರ್ಮಾಣಕ್ಕೆ ಯೋಜನಾ ವರದಿ ರೂಪಿಸಲು ಸೂಚಿಸಿದ್ದರು.

upa1

ಆದರೆ, ಹೊಸ ಸಂಸತ್ ಭವನ ನಿರ್ಮಾಣದ ಈ ಪ್ರಯತ್ನ ಸ್ಥಗಿತಗೊಂಡಿತ್ತು. ಹಾಗಾಗಿ, ಪೋಸ್ಟ್‌ನಲ್ಲಿ ಹೇಳಿರುವಂತೆ ವೆಚ್ಚದ ಅಂದಾಜು ಮತ್ತು ಹಣ ಹಂಚಿಕೆ ಸೇರಿದಂತೆ ಯೋಜನೆಯ ವಿವರವಾದ ವರದಿಯನ್ನು ಸಿದ್ಧಪಡಿಸಲಾಗಿರಲಿಲ್ಲ. ವಾಸ್ತವವಾಗಿ, ಹೊಸ ಸಂಸತ್ತಿನ ಕಟ್ಟಡವನ್ನು ಎಲ್ಲಿ ನಿರ್ಮಿಸಬೇಕು ಎಂದೂ ಆಗ ನಿರ್ಧರಿಸಲಾಗಿರಲಿಲ್ಲ.

New Parliament UPA News article1

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿಎ ಸರ್ಕಾರವು ಹೊಸ ಸಂಸತ್ ಭವನದ ನಿರ್ಮಾಣಕ್ಕೆ 3,000 ಕೋಟಿ ರೂ. ವೆಚ್ಚದ ಯೋಜನಾ ವರದಿಗೆ ಅನುಮೋದನೆ ನೀಡಿರಲಿಲ್ಲ.

ಸದ್ಯ, ಬಿಜೆಪಿ ಸರ್ಕಾರ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದೆ. ಭವನ ನಿರ್ಮಾಣಕ್ಕೆ 970 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಯೋಜನಾ ವರದಿಯಲ್ಲಿ ಹೇಳಲಾಗಿತ್ತು.ಈಗ, 1,250 ಕೋಟಿ ರೂ. ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುದೀರ್ಘ ವಿಚಾರಣಾಧೀನ ಬಂಧನ ‘ಶಿಕ್ಷೆ’ಯಾಗದಿರಲಿ: ₹979 ಕೋಟಿ ಹಗರಣದ ಆರೋಪಿಗಳಿಗೆ ಸುಪ್ರೀಂ ಜಾಮೀನು

​₹979.45 ಕೋಟಿ ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ಪಡೆಯಲು ವಂಚನೆ ಹಾಗೂ ಅಕ್ರಮ...

ಏಕನಾಥ ಶಿಂಧೆ ಒಲಿಸಿಕೊಳ್ಳಲು 500 ಕೋಟಿ ಹಣ ನೀಡಿದ ಬಿಜೆಪಿ: ಜಾರಂಗೆ ಪಾಟೀಲ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಬಿಡುಗಡೆ ಮಾಡಿರುವ ವಿವಾದಾತ್ಮಕ ಆಡಿಯೊ...

ಅರುಣಾಚಲ ಗಡಿಯ ಹಲವೆಡೆ ಚೀನಾ ಸೇನೆ ಜೊತೆ ಸಂಘರ್ಷ ಮುಂದುವರಿಕೆ: ಐಟಿಬಿಪಿ ಮಹಾನಿರ್ದೇಶಕ

ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಸೇನೆಯ ಜೊತೆಗಿನ ಮುಖಾಮುಖಿ ಹಾಗೂ...