ಪ್ರಸಿದ್ಧ ಇತಿಹಾಸಕಾರ ಕೆ ಎನ್ ಪಣಿಕ್ಕರ್ ನಿಧನ

Date:

ಆಧುನಿಕ ಭಾರತದ ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ ಹಾಗೂ ಜಾತ್ಯತೀತ ಇತಿಹಾಸ ರಚನೆಯ ಪ್ರತಿಪಾದಕ ಕೆ ಎನ್ ಪಣಿಕ್ಕರ್ (89) ಅವರು ಇಂದು (ಮಾರ್ಚ್ 9) ಕೇರಳದ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

- Advertisement -

ಭಾರತೀಯ ಇತಿಹಾಸದ ಕೋಮುವಾದಿ ವ್ಯಾಖ್ಯಾನಗಳನ್ನು ನಿರಂತರವಾಗಿ ಖಂಡಿಸುತ್ತಿದ್ದ ಪಣಿಕ್ಕರ್ ಅವರು, ಆಧಾರಸಹಿತ ಹಾಗೂ ಬೌದ್ಧಿಕ ಪ್ರಾಮಾಣಿಕತೆಯಿಂದ ಇತಿಹಾಸ ರಚನೆಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಇವರ ಬರಹಗಳು ಮತ್ತು ಅಧ್ಯಯನಗಳು ಅನೇಕ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ರಾಜಕೀಯ-ಸಾಂಸ್ಕೃತಿಕ ಕ್ಷೇತ್ರದ ಮೇಲೆ ಆಳವಾದ ಪ್ರಭಾವ ಬೀರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಮೈಸೂರಿನ ಬೀದಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದ ಮನ್ವಂತ್‌ಕುಮಾರ್, ಈಗ...

ಮೈಸೂರಿನ ಗಲ್ಲಿಗಳಿಂದ ಕಾಲೇಜ್ ಕ್ರಿಕೆಟ್ ಮೈದಾನಕ್ಕೆ ಜಿಗಿದ ಯುವಕನೊಬ್ಬ ಕರ್ನಾಟಕದ ರಣಜಿ ತಂಡದಲ್ಲಿ ಸ್ಥಾನ ಪಡೆದು, ಐಪಿಎಲ್ ತಂಡದ ಗಮನ ಸೆಳೆದು, ದೇಶೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿ, ಕರ್ನಾಟಕ ಕ್ರಿಕೆಟ್‌ನ ಭರವಸೆಯ ಆಟಗಾರನಾಗಿ...

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (IIPA) ನಲ್ಲಿ ಬೋಧಕರಾಗಿದ್ದ ಅವರು 1972ರಲ್ಲಿ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಸೇರಿದರು. ಜೆಎನ್‌ಯುನಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ, ‘ಸೆಂಟರ್ ಫಾರ್ ಹಿಸ್ಟಾರಿಕಲ್ ಸ್ಟಡೀಸ್’ ಮುಖ್ಯಸ್ಥರಾಗಿ ಹಾಗೂ ‘ಸ್ಕೂಲ್ ಆಫ್ ಸೋಷಿಯಲ್ ಸೈನ್ಸಸ್’ನ ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಕೇವಲ ಬೋಧನೆಯಲ್ಲದೆ, ಅವರು ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹಾಗೂ ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.

ಇದರ ಜೊತೆಗೆ, ಕೇರಳ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (KCHR) ನ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. 2008ರಲ್ಲಿ ದೇಶದ ವೃತ್ತಿಪರ ಇತಿಹಾಸಕಾರರ ಅತಿದೊಡ್ಡ ಸಂಸ್ಥೆಯಾದ ‘ಇಂಡಿಯನ್ ಹಿಸ್ಟರಿ ಕಾಂಗ್ರೆಸ್’ ನ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು ಮತ್ತು ‘ಕೇರಳ ಹಿಸ್ಟರಿ ಕಾಂಗ್ರೆಸ್’ ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ವಿಶೇಷವೆಂದರೆ, ಮುಂದಿನ ತಿಂಗಳು (ಏಪ್ರಿಲ್ 26 ರಂದು) ಪಣಿಕ್ಕರ್ ಅವರ 90ನೇ ಜನ್ಮದಿನವನ್ನು ಆಚರಿಸಲು ಕೆಸಿಎಚ್‌ಆರ್ (KCHR) ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ ಸಂದರ್ಭದಲ್ಲಿಯೇ ಈ ದುಃಖದ ಘಟನೆ ನಡೆದಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ವಿಮಾನ ಇಂಧನ ತೆರಿಗೆ ಇಳಿಸಿದ ತಮಿಳುನಾಡು ಸಿಎಂ ವಿಜಯ್‌

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ವಿಮಾನಯಾನ ಸಂಸ್ಥೆಗಳಿಗೆ...

ಪಂಜಾಬ್‌ ಹೊಗೆ ಹರಿಯಾಣ ಬಿಟ್ಟು ನೇರವಾಗಿ ದೆಹಲಿಗೆ ಬರಲು ಪೈಪ್‌ಲೈನ್ ಇದೆಯೇ? BJPಗೆ AAP ಲೇವಡಿ

ಪಂಜಾಬ್‌ನಲ್ಲಿ ಭತ್ತದ ಹುಲ್ಲನ್ನು ಸುಡಲಾಗುತ್ತಿದೆ. ಅದರ ಹೊಗೆ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ...

‘ಉಗ್ರ ಕೃತ್ಯದ ಆರೋಪಿಗೆ ಇಷ್ಟೊಂದು ವಿನಾಯಿತಿ ಏಕೆ?’- ಅಮೆರಿಕ ಪ್ರಜೆ ವ್ಯಾನ್‌ಡೈಕ್ ಬಿಡುಗಡೆಗೆ ಕಾಂಗ್ರೆಸ್ ಕಿಡಿ

ಮ್ಯಾನ್ಮಾರ್‌ ಶಸ್ತ್ರಾಸ್ತ್ರ ತರಬೇತಿ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್...