ಕೇಂದ್ರ ಸಚಿವ ಅಮಿತ್ ಶಾ ಹೆಸರಿನಲ್ಲಿ ಮಾಜಿ ಬ್ಯಾಂಕರ್‌ಗೆ 4 ಕೋಟಿ ರೂ. ವಂಚನೆ

Date:

Advertisements

ತಾನೊಬ್ಬ ಗುಪ್ತಚರ ಅಧಿಕಾರಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾನ್ಫರೆನ್ಸ್‌ ‘ಕಾಲ್‌’ನಲ್ಲಿದ್ದಾರೆ ಎಂದು ಹೇಳಿಕೊಂಡು ವಂಚಕನೊಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 4 ಕೋಟಿ ರೂ. ವಂಚಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ನಿವೃತ್ತ ಬ್ಯಾಂಕ್ ಅಧಿಕಾರಿ ಸೂರ್ಯಕಾಂತ್ ಥೋರಟ್‌ ಅವರು ವಂಚನೆಗೆ ತುತ್ತಾದ ಸಂತ್ರಸ್ತ. ಸೂರ್ಯಕಾಂತ್ ಅವರಿಗೆ ಪರಿಚಿತರೇ ಆಗಿದ್ದ ವಂಚಕರಿಗೆ, ಸೂರ್ಯಕಾಂತ್ ಅವರ ಮಗ ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿತ್ತು. ಹೀಗಾಗಿ, ಗುಪ್ತಚರ ಅಧಿಕಾರಿಯ ಹೆಸರಿನಲ್ಲಿ ವಂಚಕರು ಕರೆ ಮಾಡಿದ್ದಾರೆ. ‘ನಿಮ್ಮ ಪುತ್ರ ವಿಶೇಷ ಕಾರ್ಯಾಚರಣೆ ಒಂದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಕಾರಣಕ್ಕೆ, ಕೇಂದ್ರ ಸರ್ಕಾರವು 38 ಕೋಟಿ ರೂ. ಬಹುಮಾನ ನೀಡಲು ನಿರ್ಧರಿಸಿದೆ. ಆದರೆ, ಅದಕ್ಕೂ ಮುಂಚೆ ಸಂಸ್ಕರಣಾ ಶುಲ್ಕ, ವಕೀಲರ ಶುಲ್ಕ ಹಾಗೂ ಹಿರಿಯ ಅಧಿಕಾರಿಗಳಿಗೆ ಉಡುಗೊರೆಗಳನ್ನು ಪಾವತಿಸಬೇಕಿದೆ. ಅದಕ್ಕಾಗಿ, 4 ಕೋಟಿ ರೂ. ಪಾವತಿಸಬೇಕು’ ಎಂದು ಕೇಳಿದ್ದಾಗಿ ಆರೋಪಿಸಲಾಗಿದೆ.

ಮುಂಗಡವಾಗಿ ಪಾವತಿಸುವ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ವಂಚಕರು ಭರವಸೆ ನೀಡಿದ್ದಾರೆ. ಅಲ್ಲದೆ, ಸೂರ್ಯಕಾಂತ್ ಅವರ ವಿಶ್ವಾಸವನ್ನು ಗಳಿಸಲು, ಆರೋಪಿಗಳು ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹಾಗೂ ಕೆಲವು ಅಧಿಕಾರಿಗಳು ಕಾನ್ಫರೆನ್ಸ್‌ ಕಾಲ್‌ನಲ್ಲಿದ್ದಾರೆ ಎಂದು ನಟಿಸಿದ್ದಾರೆ. ಅವರನ್ನು ನಂಬಿದ ಸೂರ್ಯಕಾಂತ್ ಅವರು ವಿವಿಧ ಬ್ಯಾಂಕ್‌ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ಪಾವತಿ ಮಾಡಿದ್ದಾರೆ. ಅದಕ್ಕಾಗಿ, ಪರಿಚಿತರಿಂದ ಸಾಲವನ್ನೂ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಈ ಲೇಖನ ಓದಿದ್ದೀರಾ?: ಕೆ.ಆರ್.ಪೇಟೆ | ರಾತ್ರೋರಾತ್ರಿ ಗಣಪತಿ ಇಟ್ಟು ವಿವಾದ ಸೃಷ್ಟಿಸಲು ಯತ್ನ?

ತಮಗಾದ ವಂಚನೆ ಬಗ್ಗೆ ಹೇಳಿಕೊಂಡಿರುವ ಸೂರ್ಯಕಾಂತ್, “ಅವರು (ವಂಚಕರು) ತಮ್ಮ ಮಗನ ಐಡಿ ಕಾರ್ಡ್, ರಿವಾಲ್ವರ್, ಬ್ಯಾಂಕ್‌ ಸಂದೇಶವನ್ನು ನನಗೆ ತೋರಿಸಿದರು. ನಮಗೆ ಅವರ ಬಗ್ಗೆ ಎಂದಿಗೂ ಅನುಮಾನವೇ ಮೂಡಲಿಲ್ಲ. ನನ್ನ ಫ್ಲಾಟ್‌ಗಳು, ತೋಟ, ಅಂಗಡಿ, ಕಾರು ಹಾಗೂ ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿ ಹಣ ಹೊಂದಿಸಿ, ಅವರಿಗೆ 4 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಟ್ಟಿದ್ದೇನೆ” ಎಂದು ಹೇಳಿದ್ದಾರೆ.

ಹಣ ಪಾವತಿಸಿದ ಕೆಲವು ತಿಂಗಳುಗಳ ಬಳಿಕ, ನಮಗೆ ಇದು ವಂಚನೆ, ಅದೊಂದು ಕಟ್ಟುಕಥೆ ಎಂಬುದು ಗೊತ್ತಾಯಿತು. ಬಳಿಕ ದೂರು ದಾಖಲಿಸಿದ್ದೇನೆ ಎಂದು ಸೂರ್ಯಕಾಂತ್ ಹೇಳಿಕೊಂಡಿದ್ದಾರೆ.

ಶುಭಂ ಸನಿಲ್ ಪ್ರಭಾಲೆ, ಸುನಿಲ್ ಬಬನ್‌ರಾವ್ ಪ್ರಭಾಲೆ, ಓಂಕಾರ್ ಸುನಿಲ್ ಪ್ರಭಾಲೆ, ಪ್ರಶಾಂತ್ ರಾಜೇಂದ್ರ ಪ್ರಭಾಲೆ ಮತ್ತು ಭಾಗ್ಯಶ್ರೀ ಸುನಿಲ್ ಪ್ರಭಾಲೆ ಎಂದು ಗುರುತಿಸಲಾದ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆಯನ್ನು ಆರ್ಥಿಕ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X