ಮಾಧವಿ ಬುಚ್ ವಿರುದ್ಧ ತಿರುಗಿಬಿದ್ದ ಸೆಬಿ ಉನ್ನತಾಧಿಕಾರಿಗಳು

Date:

Advertisements

ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ವಿರುದ್ಧ ಸಂಸ್ಥೆಯ ಉನ್ನತಾಧಿಕಾರಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥೆ ವಿರುದ್ಧ ಆರೋಪ ಮಾಡಿದ್ದು ಮಾತ್ರವಲ್ಲದೇ ಅವರ ವಿರುದ್ಧ ಪ್ರತಿಭಟನೆಗೂ ಇಳಿದಿರುವುದು ಸಂಸ್ಥೆಯ ಕೆಲಸದ ಸಂಸ್ಕೃತಿಯನ್ನು ವಿಷಪೂರಿತಗೊಳಿಸಿರುವ ಮಾಧವಿ ಬುಚ್ ರಾಜೀನಾಮೆ ನೀಡಬೇಕು ಎನ್ನುವುದು, ವಾರ್ಷಿಕ 34 ಲಕ್ಷ ರೂಪಾಯಿ ಆರಂಭಿಕ ವೇತನ ಪಡೆಯುತ್ತಿರುವ ಗ್ರೇಡ್ ಎ ಪ್ರವೇಶ ಮಟ್ಟದ ಉನ್ನತಾಧಿಕಾರಿಗಳ ಒಕ್ಕೊರಲ ಆಗ್ರಹ.

ಕಳೆದ ಎರಡು ಮೂರು ವರ್ಷಗಳಿಂದ ಒಳಗೊಳಗೇ ಕುದಿಯುತ್ತಿರುವ ಈ ಆಕ್ರೋಶ ಹಾಗೂ ಹತಾಶೆ ಇದೀಗ ಕಟ್ಟೆಯೊಡೆದಿದೆ ಎಂದು ಸೆಬಿ ಅಧಿಕಾರಿಗಳು ಹೇಳುತ್ತಾರೆ.

ಗೌರವಕ್ಕಾಗಿ ಆಗ್ರಹಿಸುವ ಎ ದರ್ಜೆಯ ಸೆಬಿ ಅಧಿಕಾರಿಗಳ ಅಹವಾಲುಗಳು ಎಂಬ ಶೀರ್ಷಿಕೆಯಡಿ ಪತ್ರ ಬರೆದಿರುವ ಅಧಿಕಾರಿಗಳು, ಉದ್ಯೋಗಿಗಳ ಬಗ್ಗೆ ಮುಖ್ಯಸ್ಥರ ದೃಷ್ಟಿಕೋನ ಮತ್ತು ಅವರೊಂದಿಗೆ ವರ್ತಿಸುವ ರೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಡವರಿಗೆ 10%; ಶ್ರೀಮಂತರಿಗೆ 5% ಬಡ್ಡಿ; ಇದೇ ಮೋದಿ ನ್ಯಾಯ?

ಸುಮಾರು ಒಂದು ಸಾವಿರ ಮಂದಿ ಇರುವ ಸಹಾಯಕ ವ್ಯವಸ್ಥಾಪಕರು ಹಾಗೂ ಮೇಲ್ದರ್ಜೆಯ ಅಧಿಕಾರಿಗಳ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದಾರೆ. ಆದರೆ ಈ ಆರೋಪವನ್ನು ಸೆಬಿ ತಳ್ಳಿಹಾಕಿದೆ. ಶೇಕಡ 55ರಷ್ಟು ಎಚ್ ಆರ್ ಎ ಬೇಡಿಕೆ ಮುಂದಿಟ್ಟಿರುವ ಉದ್ಯೋಗಿಗಳನ್ನು ಬಾಹ್ಯಶಕ್ತಿಗಳು ಪ್ರಚೋದಿಸುವ ಕುಮ್ಮಕ್ಕು ನಡೆದಿದೆ ಎನ್ನುವದು ಸೆಬಿಯ ಪ್ರತ್ಯಾರೋಪ.

ಈ ಹಿಂದೆ ಅವರು ನಡೆಸಿದ ಪ್ರತಿಭಟನೆಗೆ ಯಾವುದೇ ಪ್ರಯೋಜನ ಸಿಗದ ಹಿನ್ನೆಲೆಯಲ್ಲಿ ಕೆಲಸದ ಸಂಸ್ಕೃತಿ ಹದಗೆಟ್ಟಿದೆ ಎಂಬ ಅರೋಪ ಮುಂದಿಟ್ಟಿದ್ದಾರೆ ಎನ್ನುವುದು ಸೆಬಿ ವಾದ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತ – 18 ಮಂದಿ ದುರ್ಮರಣ

ಪಶ್ಚಿಮ ಬಂಗಾಳದ ಮಿರಿಕ್ ಮತ್ತು ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತಗಳು...

ವರದಕ್ಷಿಣೆ ದೌರ್ಜನ್ಯ | ಯೋಗಿ ರಾಜ್ಯದಲ್ಲಿ ಗರ್ಭಿಣಿಯನ್ನು ಹೊಡೆದು ಕೊಂದ ದುರುಳ ಕುಟುಂಬ

ರಾಮ ರಾಜ್ಯವನ್ನು ನಿರ್ಮಾಣ ಮಾಡುತ್ತೇವೆಂದು ಅಧಿಕಾರದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ...

ಲಡಾಖ್ ಹತ್ಯೆಗಳ ಕುರಿತು ನ್ಯಾಯಾಂಗ ತನಿಖೆ ನಡೆವವರೆಗೂ ಜೈಲಿನಲ್ಲಿರಲು ಸಿದ್ದ: ಸೋನಂ ವಾಂಗ್ಚುಕ್

ಇತ್ತೀಚೆಗೆ ಲಡಾಖ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರ ಹತ್ಯೆಯಾಗಿದೆ. ಆ ಹತ್ಯೆಗಳ ಕುರಿತು...

ಮುಂಬೈ | ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ರಿಯಲ್ ಎಸ್ಟೇಟ್ ಏಜೆಂಟ್ ಬಂಧನ

ಮುಂಬೈನ ಪೂರ್ವ ಅಂಧೇರಿಯ ಚಕಾಲಾ ಬಳಿಯ ವಸತಿ ಕಟ್ಟಡವೊಂದರಲ್ಲಿ ಶನಿವಾರ ಮಧ್ಯಾಹ್ನ...

Download Eedina App Android / iOS

X