ಸಾರ್ವಜನಿಕ ಆಸ್ತಿ ಹರಾಜು ರದ್ದುಪಡಿಸುವ ಅಧಿಕಾರ ಸರ್ಕಾರಿ ಸಂಸ್ಥೆಗಳಿಗೆ ಇದೆ: ಸುಪ್ರೀಂ ಕೋರ್ಟ್

Date:

ಸಾರ್ವಜನಿಕ ಆಸ್ತಿಗಳ ಮಾರಾಟ ಅಥವಾ ಗುತ್ತಿಗೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದ್ದರೆ, ಈಗಾಗಲೇ ನಡೆದ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸದಾಗಿ ಹರಾಜು ಕರೆಯುವ ಸಂಪೂರ್ಣ ಅಧಿಕಾರ ಸಾರ್ವಜನಿಕ ಪ್ರಾಧಿಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಇಂತಹ ನಿರ್ಧಾರಗಳು ಯಾವುದೇ ರೀತಿಯಲ್ಲಿ ಸ್ವೇಚ್ಛಾನುಸಾರವಾದ (ಮನಸ್ಸಿಗೆ ಬಂದಂತೆ) ಅಥವಾ ಅವಿವೇಕದ್ದಲ್ಲ ಎಂದು ನ್ಯಾಯಾಲಯ ಹೇಳಿದೆ.

- Advertisement -

ಚಂಡೀಗಢದಲ್ಲಿ ನರ್ಸಿಂಗ್ ಹೋಮ್ ಸೈಟ್ ಹರಾಜಿಗೆ ಸಂಬಂಧಿಸಿದಂತೆ ‘ಬೇಡಿ ಆಸ್ಪತ್ರೆ’ಯು 12.58 ಕೋಟಿ ರೂ.ಗಳ ಗರಿಷ್ಠ ಬಿಡ್‌ದಾರರಾಗಿ ಹೊರಹೊಮ್ಮಿ ಸಂಪೂರ್ಣ ಹಣ ಪಾವತಿಸಿತ್ತು. ಆದರೆ, ಅದೇ ದಿನ ಹರಾಜಾಗಿದ್ದ ಅಕ್ಕಪಕ್ಕದ ಇನ್ನೊಂದು ನಿವೇಶನಕ್ಕೆ 18.25 ಕೋಟಿ ರೂ. ಬೆಲೆ ಬಂದಿರುವುದನ್ನು ಗಮನಿಸಿದ ಆಡಳಿತವು, ಸಾರ್ವಜನಿಕ ಆಸ್ತಿಯ ಬೆಲೆ ಹೆಚ್ಚಿಸುವ ಉದ್ದೇಶದಿಂದ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ ಸಂಪೂರ್ಣ ಹಣವನ್ನು ಮರಳಿಸಿತ್ತು. ಹೊಸ ಇ-ಹರಾಜಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆಸ್ಪತ್ರೆಯು ಹೈಕೋರ್ಟ್ ಮೆಟ್ಟಿಲೇರಿತ್ತು, ಆಸ್ಪತ್ರೆ ಪರವಾಗಿ ಹೈಕೋರ್ಟ್‌ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ರಾಯಚೂರು | ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು ಮಹತ್ವದ ತೀರ್ಪನ್ನು ನೀಡಿದೆ. ಚಂಡೀಗಢ ಎಸ್ಟೇಟ್ ನಿಯಮಗಳು-2007ರ ಪ್ರಕಾರ, ಹರಾಜಿನಲ್ಲಿ ಕೇವಲ ಮಾರಾಟ ಒಪ್ಪಂದಕ್ಕೆ ಸಹಿ ಮಾಡುವುದರಿಂದ ಮಾತ್ರ ಸಾರ್ವಜನಿಕ ಆಸ್ತಿಯ ಮಾರಾಟವು ಅಂತಿಮಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆಸ್ತಿಯ ಹಂಚಿಕೆ ಪತ್ರ (Allotment letter) ಜಾರಿಯಾಗಿ, ಕನ್ವೇಯನ್ಸ್ ಡೀಡ್ ಪೂರ್ಣಗೊಳ್ಳುವವರೆಗೆ ಮಾರಾಟವು ಅಂತಿಮವಾಗುವುದಿಲ್ಲ. ಅದುವರೆಗೆ ಆಸ್ತಿಯನ್ನು ಹರಾಜಿನಿಂದ ವಾಪಸ್ ಪಡೆಯುವ ಅಧಿಕಾರ ಆಡಳಿತ ಯಂತ್ರಕ್ಕೆ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಮರು ಹರಾಜಿನಲ್ಲಿ ಹೆಚ್ಚುವರಿಯಾಗಿ 6 ಕೋಟಿ ರೂ. ಆದಾಯ ಬಂದಿರುವುದನ್ನು ಉಲ್ಲೇಖಿಸಿದ ನ್ಯಾಯಾಲಯವು, “ಮೊದಲ ಹರಾಜಿನಲ್ಲಿ ಕಡಿಮೆ ಬೆಲೆ ಬಂದಾಗ ಒಪ್ಪಂದವನ್ನು ಅಂತಿಮಗೊಳಿಸದಿರುವುದು ಸರಿಯಾದ ಕ್ರಮವೇ ಆಗಿದೆ” ಎಂದು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕ ಆಸ್ತಿಯ ಮಾರಾಟದಲ್ಲಿ ಗರಿಷ್ಠ ಬೆಲೆ ಮತ್ತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವುದೇ ಪ್ರಾಧಿಕಾರಗಳ ಗುರಿಯಾಗಿರಬೇಕು ಎಂದು ತಿಳಿಸಿರುವ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ಸರಿಯಾದ ನಿಯಮಗಳನ್ನು ಅನುಸರಿಸಿ ಮುಂಬರುವ ಮೂರು ತಿಂಗಳೊಳಗೆ ಸದರಿ ನಿವೇಶನಕ್ಕೆ ಹೊಸದಾಗಿ ಇ-ಹರಾಜು ನಡೆಸುವಂತೆ ಚಂಡೀಘಢ ಆಡಳಿತಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಮಾ Vs ಚಾಚಾ: ಬಿಜೆಪಿ ಬಿರುಕನ್ನು ಬಯಲು ಮಾಡಿದ ಮಧ್ಯಪ್ರದೇಶ ಆದಿವಾಸಿ ಪ್ರತಿಭಟನೆ

ಈ ವಿವಾದವು ಕೇವಲ ಒಂದು ಅರಣ್ಯ ಭೂಮಿ ತೆರವು ಪ್ರಕರಣವಾಗಿ ಉಳಿದಿಲ್ಲ....

ಸಾಸಾಬಾಳದಲ್ಲಿ ಅ. 20ರಿಂದ ನಿಂಗಪ್ಪ ಮುತ್ಯಾ ಉರೂಸ್; ಕಬಡ್ಡಿ ಪಂದ್ಯಾವಳಿ, ನಾಟಕ ಪ್ರದರ್ಶನ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಾಸಾಬಾಳ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಪ್ರತೀಕವಾಗಿರುವ...

‘ನೊಬೆಲ್’ ಪುರಸ್ಕೃತೆಗೆ ಶುಭಾಷಯ ಕೋರದ ಮೋದಿ ಸರ್ಕಾರ; ‘ಕ್ಷುದ್ರ ಆಡಳಿತ’ ಎಂದು ತರೂರ್ ವಾಗ್ದಾಳಿ

ಈ ವರ್ಷದ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿರುವ ಭಾರತೀಯ ಮೂಲದ...