ಜಿಎಸ್‌ಟಿ ಪರಿಷ್ಕರಣೆ: ಏನೆಲ್ಲ ದುಬಾರಿ – ಯಾವುದು ಅಗ್ಗ

Date:

Advertisements

2017ರಲ್ಲಿ ಆರಂಭವಾದ ಭಾರತದ ತೆರಿಗೆಗಳ ಬಳಕೆ ತೆರಿಗೆಯಲ್ಲಿ ತರಲಾಗಿರುವ ಸುಧಾರಣೆಗಳನ್ನು  ಸರಕು ಮತ್ತು ಸೇವಾ ತೆರಿಗೆ (GST) ಸಮಿತಿಯು ಬುಧವಾರ ಅನುಮೋದಿಸಿದೆ. ಗೃಹೋಪಯೋಗಿ ವಸ್ತುಗಳು, ಔಷಧಿಗಳು, ಸಣ್ಣ ಕಾರುಗಳು ಹಾಗೂ ಉಪಕರಣಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಆದಾಗ್ಯೂ, ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಸಮಿತಿಯು ದೇಶೀಯ ವೆಚ್ಚವನ್ನು ಉತ್ತೇಜಿಸಲು ಮತ್ತು ಅಮೆರಿಕಾದ 50% ತೆರಿಗೆ ಹೇರಿಕೆಯ ಹೊರೆಯಿಂದ ಆರ್ಥಿಕ ಹೊಡೆತವನ್ನು ತಗ್ಗಿಸಲು ಜಿಎಸ್‌ಟಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ 28% ಇದ್ದ ಗರಿಷ್ಠ ತೆರಿಗೆ ಮಿತಿಯನ್ನು 40%ಗೆ ಏರಿಸಲಾಗಿದೆ. ಮುಖ್ಯವಾಗಿ ಬಹು ಉತ್ಪನ್ನಗಳ ಮೇಲೆ 5% ಮತ್ತು 18% ತೆರಿಗೆಗಳನ್ನು ಹೇರಲಾಗಿದ್ದು, ಆಯ್ದ ಕೆಲವು ವಸ್ತುಗಳು, ಉನ್ನತ ದರ್ಜೆಯ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳ ಮೇಲೆ 40% ತೆರಿಗೆಯನ್ನು ವಿಧಿಸಲಾಗಿದೆ.

ಪಾನ್ ಮಸಾಲ, ಗುಟ್ಕಾ, ಸಿಗರೇಟ್, ಜರ್ದಾ, ಕಚ್ಚಾ ತಂಬಾಕು ಮತ್ತು ಬೀಡಿಗಳನ್ನು ಹೊರತುಪಡಿಸಿ ಎಲ್ಲ ಉತ್ಪನ್ನಗಳಿಗೆ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.

ಯಾವ ವಸ್ತುಗಳ ಬೆಲೆ ಕಡಿಮೆಯಾಗಲಿದೆ?

ಆಹಾರ ಮತ್ತು ಪಾನೀಯ

* ಎಲ್ಲ ರೀತಿಯ ಚಪಾತಿ ಮತ್ತು ಪರಾಠಗಳ ಮೇಲೆ 0% ತೆರಿಗೆ ಜಾರಿಯಾಗಲಿದೆ. ಪ್ರಸ್ತುತ 5% ತೆರಿಗೆ ಇದೆ.

* ಅಲ್ಟ್ರಾ-ಹೈ ಟೆಂಪರೇಚರ್ ಹಾಲು, ಪನೀರ್, ಪಿಜ್ಜಾ ಬ್ರೆಡ್ ಹಾಗೂ ಹಪ್ಪಳ ಮೇಲಿನ ತೆರಿಗೆಯನ್ನು 5%ನಿಂದ ಶೂನ್ಯಕ್ಕೆ ಇಳಿಸಲಾಗಿದೆ.

* ಬೆಣ್ಣೆ, ತುಪ್ಪ, ಒಣ ಹಣ್ಣುಗಳು, ಕಂಡೆನ್ಸ್ಡ್ ಹಾಲು, ಸಾಸೇಜ್‌ಗಳು, ಮಾಂಸ, ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿ, ಜಾಮ್ ಮತ್ತು ಫ್ರೂಟ್ ಜೆಲ್ಲಿಗಳು, ಪ್ಯಾಕ್‌ ಮಾಡಲಾದ ಎಳನೀರು, ಖಾರಾ ಮಿಕ್ಸ್‌ಚರ್‌ಗಳು, 20 ಲೀಟರ್‌ ನೀರು ತುಂಬಿದ ಬಾಟಲಿಗಳು, ಹಣ್ಣಿನ ಪಲ್ಪ್ ಅಥವಾ ಜ್ಯೂಸ್, ಹಾಲುಯುಕ್ತ ಪಾನೀಯಗಳು, ಐಸ್ ಕ್ರೀಂ, ಪೇಸ್ಟ್ರಿ, ಬಿಸ್ಕತ್ತುಗಳು, ಕಾರ್ನ್ ಫ್ಲೇಕ್ಸ್, ಸೀರಿಯಲ್ಸ್‌ಗಳ ಮೇಲಿನ ತೆರಿಗೆಯು 18%ನಿಂದ 5%ಗೆ ಕಡಿತವಾಗಲಿದೆ.

* ಇತರ ಕೊಬ್ಬು (ಫ್ಯಾಟ್‌) ಮತ್ತು ಚೀಸ್‌ ಮೇಲಿನ GST 12%ನಿಂದ 5%ಗೆ ಇಳಿಸಲಾಗಿದೆ.

* ಸಸ್ಯಗಳ ರಸದಿಂದ ತಯಾರಿಸಿದ ಪಾನೀಯಗಳು ಮತ್ತು ಸೋಯಾ ರಸದ ಪಾನೀಯಗಳ ಮೇಲಿನ GST ದರವು ಕ್ರಮವಾಗಿ 18%ನಿಂದ 5%ಗೆ ಹಾಗೂ 12%ನಿಂದ 5%ಗೆ ಕಡಿಮೆ ಮಾಡಲಾಗಿದೆ.

ಗೃಹೋಪಯೋಗಿ ವಸ್ತುಗಳು

* ಟೂತ್ ಪೌಡರ್, ಫೀಡಿಂಗ್ ಬಾಟಲ್‌ಗಳು, ಅಡುಗೆ ಪಾತ್ರೆಗಳು, ಛತ್ರಿಗಳು, ಸೈಕಲ್‌ಗಳು, ಬಿದಿರಿನ ಪೀಠೋಪಕರಣಗಳು ಹಾಗೂ ಬಾಚಣಿಗೆಗಳ ಮೇಲಿನ ತೆರಿಗೆಯು 12%ನಿಂದ 5%ಗೆ ಇಳಿದಿದೆ.

* ಶಾಂಪೂ, ಸೌಂದರ್ಯವರ್ಧಕ ಪೌಡರ್‌, ಟೂತ್‌ಪೇಸ್ಟ್, ಟೂತ್‌ಬ್ರಷ್‌ಗಳು, ಫೇಸ್ ಪೌಡರ್, ಸಾಬೂನು ಹಗೂ ಕೂದಲಿನ ಎಣ್ಣೆಗಳ ತೆರಿಗೆ ದರವು 18%ನಿಂದ 5%ಗೆ ತಗ್ಗಿದೆ.

* ಏರ್-ಕಂಡಿಷನರ್‌ಗಳು, ಪಾತ್ರೆ ತೊಳೆವ ಯಂತ್ರ ಹಾಗೂ ಟಿವಿಗಳಂತಹ ವಿದ್ಯುತ್‌ಚಾಲಿತ ಉಪಕರಣಗಳ ಮೇಲಿನ ತೆರಿಗೆಯು 28%ನಿಂದ 18%ಗೆ ಇಳಿಕೆಯಾಗಿದೆ.

* ಹೊಲಿಗೆ ಯಂತ್ರಗಳ ಮೇಲಿನ ಜಿಎಸ್‌ಟಿಯನ್ನು 12%ನಿಂದ 5%ಗೆ ಕಡಿಮೆ ಮಾಡಲಾಗಿದೆ.

* ಸಿಮೆಂಟ್‌ ಮೇಲಿನ ತೆರಿಗೆಯು 28%ನಿಂದ 18%ಗೆ ಇಳಿಕೆ ಮಾಡಲಾಗಿದೆ.

ಸ್ಟೇಷನರಿ ವಸ್ತುಗಳು

* ನಕಾಶೆಗಳು, ಚಾರ್ಟ್‌ಗಳು, ಗ್ಲೋಬ್‌ಗಳು, ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಬಣ್ಣದ ಪೆನ್ಸಿಲ್‌ (ಕ್ರೇಯಾನ್) ಮತ್ತು ಡ್ರಾಯಿಂಗ್‌ಶೀಟ್‌ಗಳು, ಇರೇಸರ್‌ಗಳು, ಪುಸ್ತಕಗಳು ಹಾಗೂ ನೋಟ್‌ಬುಕ್‌ಗಳ ತೆರಿಗೆಯು 12%ನಿಂದ 0%ಗೆ ಇಳಿಸಲಾಗಿದೆ.

ಜವಳಿ ಮತ್ತು ಪಾದರಕ್ಷೆ

* ಚಪ್ಪಲಿಗಳು ಮತ್ತು ಜವಳಿಗಳ (ಬಟ್ಟೆ) ಮೇಲಿನ GSTಯನ್ನು 12%ನಿಂದ 5%ಗೆ ಇಳಿಸಲಾಗಿದೆ. ಇದರಿಂದ ಸಾಮಾನ್ಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ವೆಚ್ಚ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಔಷಧಿ ಮತ್ತು ವೈದ್ಯಕೀಯ

* ಜೀವರಕ್ಷಕ ಔಷಧಿಗಳು, ಆರೋಗ್ಯ ಸಂಬಂಧಿತ ಉತ್ಪನ್ನಗಳು ಹಾಗೂ ಕೆಲವು ವೈದ್ಯಕೀಯ ಸಾಧನಗಳ ಮೇಲಿನ ತೆರಿಗೆ ದರವನ್ನು 12%/18%ನಿಂದ 5% ಮತ್ತು 0%ಗೆ ಕಡಿತ ಮಾಡಲಾಗಿದೆ.

* ಥರ್ಮಾಮೀಟರ್‌ಗಳ ಮೇಲಿನ ತೆರಿಗೆಯನ್ನು 18%ನಿಂದ 5%, ವೈದ್ಯಕೀಯ ಗ್ರೇಡ್ ಆಕ್ಸಿಜನ್, ಎಲ್ಲ ರೀತಿಯ ರೋಗನಿರ್ಣಯ ಕಿಟ್‌ಗಳು, ರಿಯಾಜೆಂಟ್‌ಗಳು, ಗ್ಲೂಕೋಮೀಟರ್, ಟೆಸ್ಟ್ ಸ್ಟ್ರಿಪ್‌ಗಳು ಹಾಗೂ ಸರಿಪಡಿಸಬಹುದಾದ ಕನ್ನಡಕಗಳ ಮೇಲಿನ ತೆರಿಗೆಯು 12%ನಿಂದ 5%ಗೆ ಇಳಿಕೆ ಮಾಡಲಾಗಿದೆ.

ವಿಮೆ ಮತ್ತು ಪಾಲಿಸಿಗಳು

* ವೈಯಕ್ತಿಕ ಜೀವನ ಮತ್ತು ಆರೋಗ್ಯ ವಿಮೆ ಪಾಲಿಸಿಗಳಿಗೆ ಶೂನ್ಯ ತೆರಿಗೆ.

* ಸರಕು ಸಾಗಾಟದ ‘ಥರ್ಡ್‌ ಪಾರ್ಟಿ ವಿಮೆ’ ಸೇವೆಯ ಪೂರೈಕೆಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಜೊತೆಗೆ ಇದ್ದ ಜಿಎಸ್‌ಟಿಯನ್ನು 12%ನಿಂದ 5%ಗೆ ಇಳಿಸಲಾಗಿದೆ.

ಹೋಟೆಲ್ ದರಗಳು ಮತ್ತು ವಿಮಾನ ಟಿಕೆಟ್‌ಗಳು

* ಹೋಟೆಲ್‌ ಬುಕಿಂಗ್‌ ಸೇವೆಗಳಲ್ಲಿ ಐಟಿಸಿ ಒಳಗೊಂಡು 12% ಇದ್ದ ತೆರಿಗೆಯನ್ನು ಐಟಿಸಿರಹಿತ 5%ಗೆ ನಗದಿ ಮಾಡಿಲಾಗಿದೆ. 7,500 ರೂ.ವರೆಗಿನ ಕೊಠಡಿಗಳ ತೆರಿಗೆಯನ್ನು 5%ಗೆ ಇಳಿಸಲಾಗಿದೆ.

* ವಿಮಾನ ಟಿಕೆಟ್‌ಗಳಲ್ಲಿ ಇಕಾನಮಿ ಕ್ಲಾಸ್ ಟಿಕೆಟ್‌ಗಳಿಗೆ 5% ಜಿಎಸ್‌ಟಿ ನಿಗದಿ ಮಾಡಲಾಗಿದೆ.

ವಾಹನಗಳು ಮತ್ತು ಬಿಡಿಭಾಗಗಳು

* 350cc ವರೆಗಿನ ಮೋಟಾರ್‌ಸೈಕಲ್‌ಗಳು (ಬೈಕ್‌-ಸ್ಕೂಟಿ) ತೆರಿಗೆಯನ್ನು 28%ನಿಂದ 18%ಗೆ ಇಳಿಸಲಾಗಿದೆ. ಎಲೆಕ್ಟ್ರಾನಿಕ್ ವಾಹನಗಳಿಗೆ 5% GST ಮುಂದುವರಿಯಲಿದೆ.

* ವಾಹನಗಳ ಬಿಡಿಭಾಗಗಳ ಮೇಲಿನ ತೆರಿಗೆಯನ್ನೂ 28%ನಿಂದ 18%ಗೆ ಇಳಿಸಲಾಗಿದೆ.

* 1,200cc ಗಿಂತ ಕಡಿಮೆ ಮತ್ತು 4,000mm ಗಿಂತ ಕಡಿಮೆ ಉದ್ದದ ಪೆಟ್ರೋಲ್, ಎಲ್‌ಪಿಜಿ ಹಾಗೂ ಸಿಎನ್‌ಜಿ ವಾಹನಗಳು (ಸಾಮಾನ್ಯವಾಗಿ ಕಾರು, ಗೂಡ್ಸ್‌ ವಾಹನಗಳು) ಮತ್ತು 1,500cc ವರೆಗಿನ ಮತ್ತು 4,000 mm ಉದ್ದದ ಡೀಸೆಲ್ ವಾಹನಗಳ ಮೇಲಿನ ತೆರಿಗೆಯನ್ನು 28%ನಿಂದ 18%ಗೆ ಕಡಿಮೆ ಮಾಡಲಾಗಿದೆ.

ಕೃಷಿ ಯಂತ್ರೋಪಕರಣಗಳು

* ವಿವಿಧ ಕೃಷಿ ಯಂತ್ರೋಪಕರಣಗಳ ತೆರಿಗೆಯನ್ನು 12%ನಿಂದ 5%ಗೆ ಇಳಿಕೆ ಮಾಡಲಾಗಿದೆ. 15HPಗಿಂತ ಕಡಿಮೆ ಶಕ್ತಿಯ ಫಿಕ್ಸ್‌ಡ್ ಸ್ಪೀಡ್ ಡೀಸೆಲ್ ಮೋಟಾರ್‌ಗಳು, ಹ್ಯಾಂಡ್ ಪಂಪ್‌ಗಳು, ಹನಿ ನಿರಾವರಿ ಉಪಕರಣಗಳು, ತುಂತುರು ನೀರಾವರಿಯ ಸ್ಪ್ರಿಂಕ್ಲರ್‌ಗಳು, ಕೊಯ್ಲು ಮತ್ತು ತೆನೆ ತೆಗೆಯುವ ಯಂತ್ರೋಪಕರಣಗಳು, ಕಾಂಪೋಸ್ಟಿಂಗ್ ಯಂತ್ರಗಳು ಹಾಗೂ ಟ್ರಾಕ್ಟರ್‌ಗಳು (1800cc ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಟ್ರಾಕ್ಟರ್‌ ಹೊರತುಪಡಿಸಿ) ಈ ವ್ಯಾಪ್ತಿಯಲ್ಲಿವೆ.

* ಸಲ್ಫ್ಯೂರಿಕ್ ಆಸಿಡ್, ನೈಟ್ರಿಕ್ ಆಸಿಡ್ ಹಾಗೂ ಅಮೋನಿಯಾದಂತಹ ಪ್ರಮುಖ ಗೊಬ್ಬರಗಳು ಮತ್ತು ಸೂಕ್ಷ್ಮ ಪೋಷಕಾಂಶ ಒದಗಿಸುವ ಉತ್ಪನ್ನಗಳ ಮೇಲಿನ ತೆರಿಗೆಯೂ 18%ನಿಂದ 5%ಗೆ ಇಳಿಕೆ ಮಾಡಲಾಗಿದೆ.

* ಟ್ರಾಕ್ಟರ್‌ಗಳಿಗೆ ರಿಯರ್ ಟೈರ್‌ಗಳು ಮತ್ತು ಟ್ಯೂಬ್‌ಗಳು, ಟ್ರಾಕ್ಟರ್‌ಗಳ 250ccಗಿಂತ ಹೆಚ್ಚಿನ ಸಿಲಿಂಡರ್ ಸಾಮರ್ಥ್ಯದ ಕೃಷಿ ಡೀಸೆಲ್ ಎಂಜಿನ್‌ಗಳು, ಟ್ರಾಕ್ಟರ್‌ಗಳ ಹೈಡ್ರಾಲಿಕ್ ಪಂಪ್‌ಗಳು ಹಾಗೂ ರಿಯರ್ ವೀಲ್ ರಿಮ್, ಸೆಂಟರ್ ಹೌಸಿಂಗ್, ಟ್ರಾನ್ಸ್‌ಮಿಷನ್ ಹೌಸಿಂಗ್, ಫ್ರಂಟ್ ಆಕ್ಸಲ್ ಸಪೋರ್ಟ್, ಬಂಪರ್‌ಗಳು, ಬ್ರೇಕ್ ಅಸೆಂಬ್ಲಿ, ಗೇರ್ ಬಾಕ್ಸ್‌ಗಳು, ಟ್ರಾನ್ಸ್-ಆಕ್ಸಲ್‌ಗಳು, ರೇಡಿಯೇಟರ್ ಅಸೆಂಬ್ಲಿ ಹಾಗೂ ಕೂಲಿಂಗ್ ಸಿಸ್ಟಮ್ ರೀತಿಯ ಬಿಡಿಭಾಗಗಳ ಮೇಲಿನ GSTಯನ್ನು 18%ನಿಂದ 5%ಗೆ ಇಳಿಸಲಾಗಿದೆ.

ಏನೆಲ್ಲ ದುಬಾರಿ?

ಗ್ಯಾಸ್‌, ಕೆಫೀನ್‌ಯುಕ್ತ ತುಂಪು ಪಾನೀಯಗಳು

* ಕೋಕಾ-ಕೋಲಾ ಮತ್ತು ಪೆಪ್ಸಿಯಂತಹ ಜನಪ್ರಿಯ ಸಾಫ್ಟ್ ಡ್ರಿಂಕ್‌ಗಳು ಮತ್ತು ಇತರ ಆಲ್ಕೊಹಾಲ್-ರಹಿತ ಪಾನೀಯಗಳ ಮೇಲಿನ ತೆರಿಗೆಯನ್ನು 28%ನಿಂದ 40%ಗೆ ಏರಿಕೆ ಮಾಡಲಾಗಿದೆ.

* ಕೆಫೀನ್‌ಯುಕ್ತ ಪಾನೀಯಗಳ ತೆರಿಗೆಯು 28%ನಿಂದ 40%ಗೆ ಏರಿಕೆ ಕಂಡಿದೆ.

* ಇತರ ಆಲ್ಕೊಹಾಲ್-ರಹಿತ ಪಾನೀಯಗಳ ತೆರಿಗೆಯೂ 18%ನಿಂದ 40%ಗೆ ಹೆಚ್ಚಾಗಿದೆ.

* ಸಕ್ಕರೆ ಅಥವಾ ಇತರ ಸಿಹಿ ವಸ್ತುಗಳನ್ನು ಒಳಗೊಂಡಿರುವ (ಗ್ಯಾಸಿನಿಂದ ಕೂಡಿದ ನೀರು ಸೇರಿದಂತೆ) ಅಥವಾ ಫ್ಲೇವರ್ಡ್ ವಸ್ತುಗಳ ತೆರಿಗೆಯನ್ನು 28%ನಿಂದ 40%ಗೆ ಏರಿಕೆಯಾಗಿದೆ.

ವಾಹನಗಳು

* 1,200ccಗಿಂತ ಹೆಚ್ಚಿನ ಮತ್ತು 4,000mmಗಿಂತ ಉದ್ದದ ಎಲ್ಲ ವಾಹನಗಳು, 350ccಗಿಂತ ಹೆಚ್ಚಿನ ಮೋಟಾರ್‌ಸೈಕಲ್‌ಗಳು ಹಾಗೂ ವೈಯಕ್ತಿಕ ಬಳಕೆಯ ಖಾಸಗಿ ಹಡಗು, ವಿಮಾನಗಳು ಹಾಗೂ ರೇಸಿಂಗ್ ಕಾರುಗಳ ಮೇಲೆ 40% ತೆರಿಗೆ ವಿಧಿಸಲಾಗಿದೆ.

ತಂಬಾಕು ವಸ್ತುಗಳು

* ತಂಬಾಕು ಮತ್ತು ತಂಬಾಕು-ಸಂಬಂಧಿತ ಉತ್ಪನ್ನಗಳಿಗೆ 40% GST ವಿಧಿಸಲಾಗಿದೆ.

ವಿರಾಮ ಚಟುವಟಿಕೆಗಳು

* ರೇಸ್ ಕ್ಲಬ್‌ ಸೇವೆಗಳು, ಕ್ಯಾಸಿನೊ/ಜೂಜಾಟ/ಕುದುರೆ ರೇಸಿಂಗ್/ಲಾಟರಿ/ಆನ್‌ಲೈನ್ ಮನಿ ಗೇಮಿಂಗ್‌ ಮೇಲೆ 40% ತೆರಿಗೆ ವಿಧಿಸಲಾಗಿದೆ. IPL ಟಿಕೆಟ್‌ಗಳ ಮೇಲೂ 40% ತೆರಿಗೆ ಇರಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

ಭಾರತದ ಅಗ್ರ ಕೋಟ್ಯಾಧಿಪತಿಗಳಲ್ಲಿ ಮಹಿಳೆಗೆ ಸ್ಥಾನ; ಅತೀ ಶ್ರೀಮಂತ ಮಹಿಳೆ ರೋಶ್ನಿ ಮಲ್ಹೋತ್ರಾ!

ಭಾರತದ ಬಿಲಿಯನೇರ್‌ಗಳ ಇತಿಹಾಸದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದೆ. ಇದೇ ಮೊದಲ ಬಾರಿಗೆ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

Download Eedina App Android / iOS

X