ಗುಜರಾತ್‌ | ನ. 21 ರಿಂದ ಕಾಂಗ್ರೆಸ್‌ ಜನಾಕ್ರೋಶ ಯಾತ್ರೆ

Date:

2027ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಗುಜರಾತ್‌ ಕಾಂಗ್ರೆಸ್‌ಮೂರು ದಶಕದ ಬಿಜೆಪಿಯ ದುರಾಡಳಿತದ ವಿರುದ್ಧ ನವೆಂಬರ್ 21 ರಿಂದ ‘ಜನ್ ಅಕ್ರೋಶ್ ಯಾತ್ರೆ’ ಆರಂಭಿಸುತ್ತಿದೆ. ಉತ್ತರ ಗುಜರಾತ್‌ನಿಂದ ಆರಂಭವಾಗುವ ಈ ಯಾತ್ರೆ 1,100 ಕಿಲೋಮೀಟರ್ ಕ್ರಮಿಸಿ ಡಿಸೆಂಬರ್ 3 ರಂದು ಮೊದಲ ಹಂತ ಪೂರ್ಣಗೊಳಿಸಲಿದೆ ಎಂದು ಹೇಳಿಲಾಗಿದೆ.

ಉತ್ತರ ಗುಜರಾತ್‌ನ ಧೀಮಾ ಗ್ರಾಮದಿಂದ ಆರಂಭವಾಗುವ ಈ ಯಾತ್ರೆಯು ಮೊದಲ ಹಂತದಲ್ಲಿ ಏಳು ಜಿಲ್ಲೆಗಳು, 40 ತಾಲೂಕುಗಳು ಮತ್ತು 12 ನಗರಗಳನ್ನು ಕ್ರಮಿಸಲಿದೆ. ಸುಮಾರು 1,100 ಕಿಲೋಮೀಟರ್ ದೂರವನ್ನು ಕ್ರಮಿಸಿ, ಡಿಸೆಂಬರ್ 3 ರಂದು ಬೆಹರಜಿ ದೇವಾಲಯದಲ್ಲಿ ಮೊದಲ ಹಂತವು ಕೊನೆಗೊಳ್ಳಲಿದೆ.

- Advertisement -

ಕಳೆದ ಮೂರು ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಆಡಳಿತವು ಜನರನ್ನು ಗುಲಾಮರನ್ನಾಗಿಸಿ, ಶೋಷಿಸುತ್ತಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚಾವ್ಡಾ ಆರೋಪಿಸಿದ್ದಾರೆ. ಗುಜರಾತ್‌ನಲ್ಲಿ ಭಯ, ಹಸಿವು ಮತ್ತು ಭ್ರಷ್ಟಾಚಾರ ಮನೆಮಾಡಿದೆ. ಸರ್ಕಾರದ ಬದಲಿಗೆ ಅಧಿಕಾರಿಗಳ ಆಡಳಿತ ನಡೆಯುತ್ತಿದೆ ಮತ್ತು ಜನರ ಸಂವಿಧಾನಬದ್ಧ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಈ ಯಾತ್ರೆಯನ್ನು ಬದಲಾವಣೆಯ ಚಳವಳಿ ಎಂದು ಕರೆದ ಚಾವ್ಡಾ, ಇದು 2027 ರ ರಾಜ್ಯ ಚುನಾವಣೆಗೆ ಕಾಂಗ್ರೆಸ್‌ನ ಸುದೀರ್ಘ ಪ್ರಚಾರದ ಆರಂಭ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖ್ಯಾತ ಹಿರಿಯ ಸಂಗೀತ ನಿರ್ದೇಶಕ ದೇವ ಇನ್ನಿಲ್ಲ

ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಚಿತ್ರಗಳಿಗೆ ಸುಮಧುರ ಸಂಗೀತ...

‘ಮಕ್ಕಳಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು; ಸಂಪೂರ್ಣ ನಿಷೇಧ ಪರಿಹಾರವಲ್ಲ’: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಯಸ್ಕರಂತೆ ಮಕ್ಕಳಿಗೂ ಇಂಟರ್‌ನೆಟ್ ಸಂಪರ್ಕ ಪಡೆಯುವ ಮತ್ತು ಅದನ್ನು ಬಳಸುವ ಮೂಲಭೂತ...

ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ

ಅನುಮತಿಯಿಲ್ಲದೆ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ...

ಒಂದೇ ಕುಟುಂಬದ ಐವರು ಶವವಾಗಿ ಪತ್ತೆ; ವಿಷಾಹಾರ ಸೇವಿಸಿದ ಶಂಕೆ

ಒಂದೇ ಕುಟುಂಬದ ಐವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ...