ಸ್ವಯಂಘೋಷಿತ ದೇವಮಾನವ ಸೂರಜ್ಪಾಲ್ ಅಲಿಯಾಸ್ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಸತ್ಸಂಗದಲ್ಲಿ ನಡೆದ ಹಾಥರಸ್ ಕಾಲ್ತುಳಿತ ಪ್ರಕರಣವು ಆಕಸ್ಮಿಕವಲ್ಲ ಪಿತೂರಿಯಾಗಿದೆ ಎಂದು ಭೋಲೆ ಬಾಬಾ ಪರ ವಕೀಲ ಎಪಿ ಸಿಂಗ್ ಹೇಳಿದ್ದಾರೆ.
ಭಾನುವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಎಪಿ ಸಿಂಗ್, “ಜುಲೈ 2ರಂದು ಸತ್ಸಂಗದಲ್ಲಿ 121 ಜನರು ಸಾವಿಗೆ ಕಾರಣವಾದ ಕಾಲ್ತುಳಿತ ಸಂದರ್ಭದಲ್ಲಿ ಕನಿಷ್ಠ 15-16 ಜನರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ಈ ಜನರು ಗುಂಪಿನೆಡೆ ವಿಷಕಾರಿ ಅನಿಲ ಎರಚಿದ್ದಾರೆ. ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾರೆ” ಎಂದು ತಿಳಿಸಿದರು.
“ಭೋಲೆ ಬಾಬಾ ಅವರ ಬಂಧನ ಮಾಡಿಸಲು ಪಿತೂರಿ ನಡೆದಿದೆ” ಎಂದ ಎಪಿ ಸಿಂಗ್ ಪೊಲೀಸ್, ಅಗ್ನಿಶಾಮಕ ಮತ್ತು ಸಂಚಾರ ಇಲಾಖೆಗಳಿಂದ ತೆಗೆದುಕೊಂಡ ಅನುಮತಿಯ ರಸೀದಿಗಳನ್ನು ತೋರಿಸಿದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳುವಂತೆ ಎಪಿ ಸಿಂಗ್ ಪೊಲೀಸರ ಬಳಿ ಮನವಿ ಮಾಡಿದ್ದು, “ಸಿಸಿಟಿವಿ ದೃಶ್ಯಾವಳಿ ಅಪರಾಧಿಗಳನ್ನು ಬಂಧಿಸುವಲ್ಲಿ ಪ್ರಮುಖ ಅಸ್ತ್ರವಾಗಿದೆ. ಇದು ಆಕಸ್ಮಿಕವಾಗಿ ನಡೆದಿರುವುದಲ್ಲ, ಇದು ಕೊಲೆ” ಎಂದರು.
#WATCH | Delhi: On the Hathras stampede incident, Advocate AP Singh alleges, “… Unidentified men were carrying poisonous sprays…They ran while spraying the poisonous spray and it looked as a part of a pre-planned conspiracy…Many people lost their consciousness…I urge the… pic.twitter.com/Qo0sWoZVFN
— ANI (@ANI) July 7, 2024
ಇದನ್ನು ಓದಿದ್ದೀರಾ? ಹಾಥರಸ್ ಕಾಲ್ತುಳಿತ | ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಯೋಗಿ ಆದಿತ್ಯನಾಥ್ಗೆ ರಾಹುಲ್ ಗಾಂಧಿ ಪತ್ರ
ಇದುವರೆಗೆ ಉತ್ತರ ಪ್ರದೇಶ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಮೂವರು ಹಿರಿಯ ನಾಗರಿಕರು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಇವರಲ್ಲಿ, ಹಾಥರಸ್ ಸತ್ಸಂಗದ ಪ್ರಮುಖ ಸಂಘಟಕ ದೇವ್ ಪ್ರಕಾಶ್ ಮಧುಕರ್ ಸೇರಿದಂತೆ ಸತ್ಸಂಗದ ಹಲವಾರು ಸೇವಾದಾರರನ್ನು (ಸ್ವಯಂಸೇವಕರು) ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಪೊಲೀಸರ ಪ್ರಕಾರ ಮಧುಕರ್ ಅವರು ನಾರಾಯಣ ಸಾಕರ್ ಹರಿ ಕಾರ್ಯಕ್ರಮಗಳಿಗೆ ನಿಧಿಸಂಗ್ರಹಗಾರರಾಗಿ ಕೆಲಸ ಮಾಡಿದ್ದರು, ದೇಣಿಗೆ ಸಂಗ್ರಹಿಸಿದ್ದರು. ಮಧುಕರ್ ಸ್ವತಃ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಎಪಿ ಸಿಂಗ್ ಹೇಳಿದ್ದಾರೆ. ಇನ್ನು ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಕರ್ ಹರಿ ನಾಪತ್ತೆಯಾಗಿದ್ದು, ಎಫ್ಐಆರ್ನಲ್ಲಿ ಹೆಸರು ಆರೋಪಿ ಎಂದು ಉಲ್ಲೇಖಿಸಿಲ್ಲ.