ಭಾರತ ಮತ್ತು ಅಮೆರಿಕ ನಡುವೆ ಆರಂಭವಾದ ಸುಂಕಾಸ್ತ್ರದ ಕಾರ್ಮೋಡ ಅಂತ್ಯಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಪರಸ್ಪರ ಮುನಿಸಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತೆ ಸ್ನೇಹದ ಮಾತುಗಳನ್ನು ಆಡಿದ್ದಾರೆ.
“ನರೇಂದ್ರ ಮೋದಿ ಜೊತೆ ಎಂದಿಗೂ ನನಗೆ ಉತ್ತಮ ಸ್ನೇಹವಿದೆ. ಅವರು ಅದ್ಭುತ ಪ್ರಧಾನಿ. ಆದರೆ ಅವರು ಈಗ ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಭಾರತದೊಂದಿಗೆ ಅಮೆರಿಕಕ್ಕೆ ವಿಶೇಷ ಸಂಬಂಧ ಇದೆ, ಎರಡೂ ದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ, ಸ್ವಲ್ಪ ಕಾಯಿರಿ” ಎಂದಿರುವ ಟ್ರಂಪ್ ಹೇಳಿಕಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.
“ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಧನಾತ್ಮಕ ನಡೆಯನ್ನು ಸ್ವಾಗತಿಸುತ್ತೇನೆ. ಡೊನಾಲ್ಡ್ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧಗಳ ಬಗ್ಗೆ ಅವರು ಸಕಾರಾತ್ಮಕ ಮೌಲ್ಯಮಾಪ ಮಾಡಿದ್ದಾಗಿ ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ” ಎಂದು ಎಂದು ಮೋದಿ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
“ಭಾರತ ಮತ್ತು ಅಮೆರಿಕಗಳು ಬಹಳ ಸಕಾರಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ” ಎಂದು ಮೋದಿ ಅವರು ಡೊನಾಲ್ಡ್ ಟ್ರಂಪ್ ಮತ್ತು POTUS (ಯುಎಸ್ ಅಧ್ಯಕ್ಷ) ಅವರನ್ನು ಟ್ಯಾಗ್ ಮಾಡಿ ಈ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ.