26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸಲು ಪಾಕ್‌ಗೆ ಭಾರತ ಮನವಿ

Date:

26/11ರ ಮುಂಬೈ ದಾಳಿಯ ಪ್ರಮುಖ ರೂವಾರಿ ಭಯೋತ್ಪಾದಕ ಹಫೀಜ್‌ ಸಹೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ವಿದೇಶಾಂಗ ಇಲಾಖೆ ಪಾಕಿಸ್ತಾನಕ್ಕೆ ಮನವಿ ಮಾಡಿದೆ.

- Advertisement -

ಈ ಬಗ್ಗೆ ಪ್ರಕಟಣೆ ಹೊಡಿಸಿರುವ ವಿದೇಶಾಂಗ ಇಲಾಖೆಯ ವಕ್ತಾರರಾದ ಅರಿಂದಮ್ ಬಗ್ಚಿ, “ಭಾರತದಲ್ಲಿ ಹಲವಾರು ಪ್ರಕರಣಗಳಿಗೆ ಬೇಕಾಗಿರುವ ಉಗ್ರಗಾಮಿ ಹಫೀಜ್‌ ಸಹೀದ್‌ನನ್ನು ವಿಚಾರಣೆ ಸಲುವಾಗಿ ಭಾರತಕ್ಕೆ ಹಸ್ತಾಂತರಿಸಬೇಕು” ಎಂದು ಮನವಿ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

2008ರ ಮುಂಬೈ ದಾಳಿಯ ಪ್ರಮುಖ ರೂವಾರಿಯಾದ ಕುಖ್ಯಾತ ಭಯೋತ್ಪಾದಕನಾದ ಹಫೀಜ್ ಸಹೀದ್‌ಗೆ ಅಮೆರಿಕವು 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. 2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ 166 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹಫೀಜ್ ಸಹೀದ್‌ ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಭಯೋತ್ಪಾದಕನಾಗಿದ್ದಾನೆ.

“ಭಾರತದಲ್ಲಿನ ನಿಗದಿತ ವಿಚಾರಣೆಯ ಸಲುವಾಗಿ ಆತನನ್ನು ಹಸ್ತಾಂತರಿಸುವಂತೆ ನಾವು ಸೂಕ್ತ ಬೆಂಬಲಿತ ಆಧಾರಗಳನ್ನು ಪಾಕಿಸ್ತಾನ ಸರ್ಕಾರಕ್ಕೆ ಕಳುಹಿಸಿದ್ದೇವೆ. ಇತರ ದೇಶಗಳ ಚುನಾವಣಾ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಯಿಸುವುದಿಲ್ಲ. ಆದಾಗ್ಯೂ, ತೀವ್ರಗಾಮಿಗಳು ಚುನಾವಣೆಯಲ್ಲಿ ಭಾಗವಹಿಸುವುದು, ಮುಖ್ಯವಾಹಿನಿಗೆ ಬರುವುದು ಪಾಕಿಸ್ತಾನದಲ್ಲಿ ಹೊಸದೇನಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಜಾಬ್ ಹಿಂಜರಿಕೆ; ರಣತಂತ್ರವೋ, ಇಲ್ಲವೇ ಪಲಾಯನ ಮಂತ್ರವೇ?

“ಇಂತಹ ಘಟನೆಗಳು ನಮ್ಮ ದೇಶದ ಭದ್ರತೆಗೆ ತೀವ್ರ ಪರಿಣಾಮ ಉಂಟು ಮಾಡುತ್ತವೆ. ನಮ್ಮ ದೇಶದ ಭದ್ರತಾ ಹಿತದೃಷ್ಟಿಯಿಂದ ನಮ್ಮ ಕಡೆಯಿಂದ ಎಲ್ಲ ಬೆಳವಣಿಗೆಗಳ ಬಗ್ಗೆ ಮೇಲ್ವಿಚಾರಣೆಗೊಳಿಸುತ್ತೇವೆ” ಎಂದು ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪಿಎಂಎಂಎಲ್ ಪಕ್ಷದಿಂದ ಹಫೀಜ್‌ ಸಯೀದ್‌ ಪುತ್ರ ಸ್ಪರ್ಧಿಸುತ್ತಿರುವ ವರದಿಗಳು ಬಂದ ನಂತರದಲ್ಲಿ ಭಾರತದಿಂದ ಪ್ರತಿಕ್ರಿಯೆ ಬಂದಿದೆ. ಹಫೀಜ್‌ ಸಯೀದ್‌ ಪುತ್ರ ತಹ್ಲಾ ಸಹೀದ್ ಲಾಹೋರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾನೆ.

ಹಫೀಜ್‌ ಸಹೀದ್ ಉಗ್ರಗಾಮಿ ಸಂಘಟನೆಯಾದ ಎಲ್‌ಇಟಿಯ ಪ್ರಮುಖ ನಾಯಕನಾಗಿದ್ದು, ಆತನ ಪುತ್ರ ತಹ್ಲಾ ಸಹೀದ್ ಕೂಡ ಎಲ್‌ಇಟಿಯ ಎರಡನೇ ಪ್ರಮುಖ ನಾಯಕನಾಗಿದ್ದಾನೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯಾಂಗದ ಮೇಲೆ ಗೌರವವಿದೆ, ತಪ್ಪಾಗಿದ್ದರೆ ಕ್ಷಮೆಯಾಚಿಸುವೆ: ಸಂಜಯ್ ರಾವತ್

ಸುಪ್ರೀಂ ಕೋರ್ಟ್ ಕುರಿತು ತಾವು ನೀಡಿರುವ ಹೇಳಿಕೆಗಳು ಸೂಕ್ತವಲ್ಲ ಅಥವಾ ಅನುಚಿತ...

ವಿರಳಾತಿ ವಿರಳ ಪ್ರಕರಣ: ಮಾಲೆಗಾಂವ್ ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಅಪರಾಧಿಗೆ ಮರಣದಂಡನೆ ಶಿಕ್ಷೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ತಾಲೂಕಿನ ಡೋಂಗರಾಳೆ ಗ್ರಾಮದಲ್ಲಿ ಸಾಡೇನಾಲ್ಕು ವರ್ಷದ...

ತಿರಂಗಾ ಮಾರ್ಚ್ ನಡೆಸದಂತೆ ಅಭಿಜೀತ್ ದೀಪ್ಕೆಗೆ ದೆಹಲಿ ಪೊಲೀಸರಿಂದ ನೋಟಿಸ್: ಮನೆಯ ಬಳಿ ಬಿಗಿ ಭದ್ರತೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ...

​ಪ್ರತಿಭಟನೆಗಳ ವರದಿಗಾರಿಕೆಗೆ ಭಾರತೀಯ ಪ್ರೆಸ್ ಕೌನ್ಸಿಲ್‌ನಿಂದ ನೂತನ ಮಾರ್ಗದರ್ಶಿ ಸೂತ್ರಗಳ ಬಿಡುಗಡೆ

ಪ್ರತಿಭಟನೆಗಳು ಮತ್ತು ಧರಣಿ ಸತ್ಯಾಗ್ರಹಗಳ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಜವಾಬ್ದಾರಿಯುತ...