ಸರಿಯಾದ ಹಣಕಾಸು ಜ್ಞಾನ ಮತ್ತು ನಿರಂತರ ಅನ್ವೇಷಣೆಯೊಂದಿದ್ದರೆ ಅತ್ಯಲ್ಪ ಹೂಡಿಕೆಯಿಂದಲೂ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದು ಎಂಬುದಕ್ಕೆ ಈ ಮಾಹಿತಿ ಒಂದು ಉದಾಹರಣೆ. ಕಳೆದ ಐದು ವರ್ಷಗಳ ಕೆಳಗೆ ಇಡೀ ಜಗತ್ತನ್ನೇ ಆವರಿಸಿಕೊಂಡಿದ್ದ ಕೋವಿಡ್ ವೈರಸ್ ಎಲ್ಲರನ್ನು ನಿತ್ರಾಣಗೊಳಿಸಿತ್ತು. ಸಾಮಾನ್ಯ ಜನರ ಕೆಲಸಗಳು ಮತ್ತು ಸಣ್ಣ ಉಧ್ಯಮಗಳು ನಿಂತುಹೋದವು. ಅಂತಹ ಸಮಯದಲ್ಲಿ ಷೇರು ಮಾರುಕಟ್ಟೆಯೂ ಪಾತಾಳ ಕಚ್ಚಿತ್ತು. ಆದರೆ, ಆ ಸನ್ನಿವೇಶವೂ ಇಂದು ಕೆಲವರ ಆದಾಯಕ್ಕೆ ಸುಗಮವಾಗಿದೆ ಎಂಬುದನ್ನು ಗಮನಿಸಬೇಕು.
Genesys International Corporation Ltd ಕಂಪನಿಯು 2019-2020ರ ಒಂದೇ ವರ್ಷದಲ್ಲಿ ಕೋವಿಡ್ ಕಾರಣದಿಂದ ಭಾರೀ ಹಿನ್ನೆಡೆ ಕಂಡಿತ್ತು. ಈ ಅವದಿಯಲ್ಲಿ ಸುಮಾರು 78% ಕುಸಿತದಿಂದ ತನ್ನ ಒಟ್ಟು ಬಂಡವಾಳದಲ್ಲಿ ಸಾಕಷ್ಟು ನಷ್ಟ ಅನುಭವಿಸಿತ್ತು. 2017ರಲ್ಲಿ ಪ್ರತಿ ಷೇರಿನ ಬೆಲೆ ಗರಿಷ್ಟ 400 ರೂ. ಇತ್ತು. ಕೋವಿಡ್ ಆಕ್ರಮಿಸಿಕೊಂಡ 2020ರ ವೇಳೆಗೆ ಕಂಪನಿಯ ಪ್ರತಿ ಷೇರಿನ ಬೆಲೆ ಕೇವಲ 30ರೂ.ಗೆ ಕುಸಿದಿತ್ತು.
2020ರ ಕೋವಿಡ್ ಸಂದರ್ಭ ಮತ್ತು ದೊರೆತ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಆ ಕಂಪನಿಯ ಮೇಲೆ ಹೂಡಿಕೆ ಮಾಡಿದ್ದವರಿಗೆ ಇಂದು ಕಂಪನಿಯು 1880%ರಷ್ಟು ಆದಾಯವನ್ನು ಗಳಿಸಿಕೊಟ್ಟಿದೆ.
2020ರಲ್ಲಿ ಇಂತಿಷ್ಟು ಹೂಡಿಕೆ ಮಾಡಿದ್ದರೆ ಎಷ್ಟು ಗರಿಷ್ಠ ಪ್ರಮಾಣದಲ್ಲಿ ಆದಾಯ ಗಳಿಸಬಹುದಿತ್ತು ಎಂಬುದನ್ನು ಈ ಕೆಳಕಂಡಂತೆ ಅಂದಾಜು ಮಾಡಬಹುದು;
Genesys International Corporation Ltd | ||
ಹೂಡಿಕೆ ಮೊತ್ತ | 2020ರಲ್ಲಿ ಸಿಗುತ್ತಿದ್ದ ಷೇರುಗಳ ಸಂಖ್ಯೆ (30 ರೂ ನಂತೆ) | ಇಂದಿನ ಬೆಲೆ (710 ರೂ) |
10,000 | 333 | 2,36,430 |
50,000 | 1,666 | 11,82,860 |
1,00,000 | 3,333 | 23,66,430 |
1,50,000 | 5,000 | 35,50,000 |
10,00,000 | 33,333 | 2,36,66,430 |
ವಿಶೇಷ ಸೂಚನೆ: ಷೇರು ಮಾರುಕಟ್ಟೆಯು ಹಲವು ಏರಿಳಿತಗಳಿಂದ ಕೂಡಿರುವ ವೇದಿಕೆಯಾಗಿದೆ. ಇಲ್ಲಿನ ಮಾಹಿತಿಗಳನ್ನು ಕಲಿಕೆಯ ಉದ್ದೇಶದಿಂದ ಮಾತ್ರ ಪ್ರಕಟಿಸಲಾಗಿದೆ. ಹೂಡಿಕೆ ಮಾಡುವುದು ಮತ್ತು ಹಣಕಾಸು ನಿರ್ವಹಣೆಯನ್ನು ಸ್ವತಃ ಅಧ್ಯಯನ ನಡೆಸಿ ಮಾಡುವುದು ಉತ್ತಮ.
Supre good news
Thanks
Waw