ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಹರಿಯಾಣ ದಲಿತ ಐಪಿಎಸ್ ಅಧಿಕಾರಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ

Date:

Advertisements

ಆಡಳಿತದಲ್ಲಿರುವ ಜಾತಿ ತಾರತಮ್ಯ, ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಾತಿನಿಧ್ಯ, ದೌರ್ಜನ್ಯ ಮತ್ತು ನಿಂದನೆಯ ವಿರುದ್ಧವಾಗಿ ಧ್ವನಿ ಎತ್ತಿದ್ದ, ಈ ಸಂಬಂಧ ದೂರು ದಾಖಲಿಸಿದ್ದ ಹರಿಯಾಣದ ಐಪಿಸ್‌ ಅಧಿಕಾರಿ ಪೂರಣ್ ಕುಮಾರ್ ಶವವಾಗಿ ಪತ್ತೆಯಾಗಿದ್ದಾರೆ. ಅಧಿಕಾರಿಯು ಗುಂಡೇಟಿನಿಂದ ಸಾವನ್ನಪ್ಪಿದ್ದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಆಂಧ್ರಪ್ರದೇಶ ಮೂಲದ 2001ರ ಬ್ಯಾಚ್‌ನ 52ರ ವರ್ಷದ ಐಪಿಎಸ್‌ ಅಧಿಕಾರಿ ಹಲವು ಬಾರಿ ಪರಿಶಿಷ್ಟ ಜಾತಿ(ಎಸ್‌ಸಿ) ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ್ದರು. ಎಂಜಿನಿಯರಿಂಗ್ ಪದವೀಧರರಾದ ಕುಮಾರ್ ಅವರು ಕುರುಕ್ಷೇತ್ರ ಸೇರಿದಂತೆ ಹರಿಯಾಣದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅಂಬಾಲ ಮತ್ತು ರೋಹ್ಟಕ್ ಶ್ರೇಣಿಗಳ ಮುಖ್ಯಸ್ಥರಾಗಿ(ಐಜಿಪಿ) ಸೇವೆ ಸಲ್ಲಿಸಿದ್ದರು. ಗೃಹರಕ್ಷಕ ದಳ, ದೂರಸಂಪರ್ಕ ಮತ್ತು ಇತರ ಹಲವು ಪ್ರಮುಖ ಇಲಾಖೆಗಳ ಮುಖ್ಯಸ್ಥರಾಗಿದ್ದರು. ಅವರು 2033ರಲ್ಲಿ ನಿವೃತ್ತರಾಗಬೇಕಿತ್ತು.

ಇದನ್ನು ಓದಿದ್ದೀರಾ? BIGG BOSSನಲ್ಲಿಯೂ ಜಾತಿ ತಾರತಮ್ಯ!?

ಹರಿಯಾಣ ಸರ್ಕಾರದೊಂದಿಗೆ ಆಡಳಿತಾತ್ಮಕ ವಿಚಾರದಲ್ಲಿ ಹಲವು ವಿವಾದಗಳ ಮೂಲಕವೇ ಅಧಿಕಾರಿ ಸುದ್ದಿಯಾಗಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ, ಕುಮಾರ್ ತಮ್ಮ ಅಧಿಕೃತ ಕಾರನ್ನು ರಾಜ್ಯ ಪೊಲೀಸ್ ಇಲಾಖೆಗೆ ಹಿಂದಿರುಗಿಸಿದ್ದರು ಮತ್ತು ತಮ್ಮ ಅರ್ಹತೆಗೆ ತಕ್ಕುದಾದ ಕಾರನ್ನು ನೀಡುವಂತೆ ಹೇಳಿದ್ದರು. ಹರಿಯಾಣದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಅಧಿಕೃತ ವಾಹನಗಳನ್ನು ನೀಡುವ ವಿಚಾರತದಲ್ಲಿ ‘ತಾರತಮ್ಯ’ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯದ ಆಗಿನ ಮುಖ್ಯ ಕಾರ್ಯದರ್ಶಿ ಟಿ ವಿ ಎಸ್ ಎನ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು. ಆ ಸಮಯದಲ್ಲಿ, ಕುಮಾರ್ ಐಜಿಪಿ (ದೂರಸಂಪರ್ಕ) ಆಗಿದ್ದರು ಮತ್ತು ರಾಜ್ಯ ಪೊಲೀಸರ ಡಯಲ್-112 ತುರ್ತು ಪ್ರತಿಕ್ರಿಯೆ ಯೋಜನೆಯ ಮುಖ್ಯಸ್ಥರಾಗಿದ್ದರು.

ಕಳೆದ ವರ್ಷ, ಹರಿಯಾಣದಲ್ಲಿ 1991, 1996, 1997 ಮತ್ತು 2005 ಬ್ಯಾಚ್‌ಗಳ ಐಪಿಎಸ್ ಅಧಿಕಾರಿಗಳ ಬಡ್ತಿಯ ಬಗ್ಗೆಯೂ ಕುಮಾರ್‌ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಪತ್ರ ಬರೆದಿದ್ದರು. “ಬಡ್ತಿಗಳು ಕಾನೂನುಬಾಹಿರವಾಗಿದೆ. ಹಣಕಾಸು ಇಲಾಖೆಯ ಒಪ್ಪಿಗೆಯನ್ನು ಮಾತ್ರ ಆಧರಿಸಿದೆ. ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ” ಎಂದು ಹೇಳಿದ್ದರು.

ಹಾಗೆಯೇ ತಾವು ಮತ್ತು ತಮ್ಮ ಬ್ಯಾಚ್‌ಮೇಟ್‌ಗಳು ಎಸ್‌ಸಿ ವರ್ಗಕ್ಕೆ ಸೇರಿದವರಾಗಿರುವುದರಿಂದ ತಮ್ಮ ಮೇಲೆ ತಾರತಮ್ಯ ನಡೆಯುತ್ತಿದೆ ಎಂದೂ ದೂರಿದ್ದರು. ರಾಜ್ಯದ ಗೃಹ ಇಲಾಖೆಯಲ್ಲಿ, ಕಾನೂನು ಅಭಿಪ್ರಾಯದ ಅಗತ್ಯವಿಲ್ಲದ ಫೈಲ್‌ಗಳನ್ನು ಸಹ ಅನಗತ್ಯವಾಗಿ ಕಾನೂನು ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು.

1997ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳಿಗೆ ಮುಂಚಿತವಾಗಿ ವೇತನವನ್ನು ನಿಗದಿಪಡಿಸಲಾಗಿದೆ ಮತ್ತು ಅವರಿಗೆ ಮುಂಗಡ ವೇತನ ಹೆಚ್ಚಳವನ್ನು ನೀಡಲಾಗಿದೆ. ಜಾತಿಯ ಆಧಾರದ ಮೇಲೆ ತನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಕುಮಾರ್ ಆರೋಪಿಸಿದ್ದರು. ಆ ಆದೇಶಗಳನ್ನು ನಂತರ ತಡೆಹಿಡಿಯಲಾಗಿದ್ದರೂ, ಅವರ ಸ್ವಂತ ಬಡ್ತಿ ವಿಳಂಬವಾಗಿತ್ತು.

ಕಳೆದ ವರ್ಷ, ಅವರು ಹಿರಿಯ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಐದು ದೂರುಗಳನ್ನು ನೀಡಿದ್ದರು. ‘ಕಿರುಕುಳ ಮತ್ತು ಅವಮಾನ’ದ ದೂರುಗಳನ್ನು ದಾಖಲಿಸಿದ್ದರು. ಫೆಬ್ರವರಿ 8ರಂದು ಅವರ ಆರೋಪಗಳ ತನಿಖೆಗಾಗಿ ಮೂವರು ಮಾಜಿ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಐ ಗವಾಯಿ ಪ್ರಕರಣ; ನ್ಯಾಯಾಧೀಶರ ಮೇಲಾದ ಹಲ್ಲೆಗಳು ಮುನ್ನಲೆಗೆ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಮೇಲೆ 2009ರಲ್ಲಿ...

ಬಿಹಾರ ಚುನಾವಣೆ | ಚಿರಾಗ್‌ರ ‘ಎಲ್‌ಜೆಪಿ’ – ಪ್ರಶಾಂತ್‌ ಕಿಶೋರ್‌ರ ‘ಜನ ಸುರಾಜ್’ ಮೈತ್ರಿ?

ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ಕಣದಲ್ಲಿ ರಾಜಕೀಯ ಚಟುವಟಿಕೆಗಳು...

ಬಿಹಾರ ಚುನಾವಣೆ | 35 ವರ್ಷಗಳಲ್ಲಿ ಲಾಲೂ-ನಿತೀಶ್‌ ದೋಸ್ತಿ-ಕುಸ್ತಿಯದ್ದೇ ಆಡಳಿತ

35 ವರ್ಷಗಳ ಹಿಂದೆ, ಬಿಹಾರದಲ್ಲಿ ಕಾಂಗ್ರೆಸ್‌ನ ಅಧಿಪತ್ಯ ಕೊನೆಗೊಂಡಿತು. ಅಂದಿನಿಂದ ಇಂದಿನವರೆಗಿನ...

Download Eedina App Android / iOS

X