ನಾಳೆ (ಜುಲೈ 9) ಭಾರತ್ ಬಂದ್: ಮುಷ್ಕರ ಯಾಕೆ? ಏನೆಲ್ಲ ಲಭ್ಯ – ಯಾವುದು ಅಲಭ್ಯ

Date:

Advertisements

ಬ್ಯಾಂಕಿಂಗ್, ಅಂಚೆ ಸೇವೆಗಳು, ಗಣಿಗಾರಿಕೆ, ನಿರ್ಮಾಣ ಹಾಗೂ ಸಾರಿಗೆ ಸೇರಿದಂತೆ ಸರ್ಕಾರಿ ವಲಯಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಜುಲೈ 9ರ ಬುಧವಾರ ದೇಶಾದ್ಯಂತ ಸಾರ್ವತ್ರಿಕ ಮುಷ್ಕರ – ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ಬೃಹತ್ ಬಂದ್‌ನಿಂದ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಹೇಳಲಾಗಿದೆ. ಆದಾಗ್ಯು, ಸರ್ಕಾರಿ-ಖಾಸಗಿ ಶಾಲೆಗಳು ಮತ್ತು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ.

ಕೇಂದ್ರ ಸರ್ಕಾರದ “ಕಾರ್ಮಿಕ ವಿರೋಧಿ, ರೈತ ವಿರೋಧಿ ಹಾಗೂ ಬಂಡವಾಳಶಾಹಿ ಪರವಾದ ಧೋರಣೆ ಮತ್ತು ನೀತಿಗಳ ವಿರುದ್ಧ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಜಂಟಿ ವೇದಿಕೆ ಮುಷ್ಕರಕ್ಕೆ ಕರೆ ನೀಡಿದೆ.

ಸರ್ಕಾರವು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವ, ಯುವಜನರನ್ನು ನಿರುದ್ಯೋಗಕ್ಕೆ ದೂಡುವ, ಆರ್ಥಿಕತೆಯನ್ನು ಹದಗೆಡಿಸುವ ಹಾಗೂ ಕಾರ್ಮಿಕರನ್ನು ದಮನಿಸುವ ನೀತಿಗಳನ್ನು ಕೇಂದ್ರ ಸರ್ಕಾರ ಹೇರುತ್ತಿದೆ ಎಂದು ಜಂಟಿ ವೇದಿಕೆ ಆರೋಪಿಸಿದೆ.

ಭಾರತ್ ಬಂದ್ – ಪ್ರತಿಭಟನೆ ಕಾರಣಗಳು

  • ಕಾರ್ಮಿಕ ವಿರೋಧಿ ನೀತಿಗಳು
  • ಸಾಮೂಹಿಕ ಚೌಕಾಸಿ ಮತ್ತು ಮುಷ್ಕರದಂತಹ ಹಕ್ಕುಗಳನ್ನು ಕಸಿದುಕೊಳ್ಳುವ 4 ಹೊಸ ಕಾರ್ಮಿಕ ನೀತಿಗಳು
  • ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರ
  • ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ನಾಗರಿಕ ಸೌಲಭ್ಯಗಳು
  • ಯುವಕರಿಗೆ ಉದ್ಯೋಗ ನೀಡುವ ಬದಲು ನಿವೃತ್ತರನ್ನು ನೇಮಿಸಿಕೊಳ್ಳುವ ಸರ್ಕಾರದ ನಿರ್ಧಾರ
  • 10 ವರ್ಷಗಳಲ್ಲಿ ಕಾರ್ಮಿಕ ಸಮ್ಮೇಳನ ನಡೆದಿಲ್ಲ
  • ವಲಸೆ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರದ ಹುನ್ನಾರ
  • ಸಾರ್ವಜನಿಕ ಭದ್ರತಾ ಮಸೂದೆಗಳನ್ನು ಬಳಸಿಕೊಂಡು ಪ್ರತಿಭಟನೆಗಳನ್ನು ಹತ್ತಿಕ್ಕುವ ಹುನ್ನಾರ

ಕಾರ್ಮಿಕರ ಹಕ್ಕೊತ್ತಾಯಗಳು

  • ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು.
  • ಕಾರ್ಮಿಕರ ಒಕ್ಕೂಟ ಮತ್ತು ಮುಷ್ಕರದ ಹಕ್ಕನ್ನು ಮರಳಿ ಜಾರಿಗೊಳಿಸಬೇಕು.
  • ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ವಿಶೇಷವಾಗಿ ಯುವಜನರಿಗೆ (ಭಾರತದ ಜನಸಂಖ್ಯೆಯಲ್ಲಿ 65% ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು).
  • ಹೊಸ ನೇಮಕಾತಿಗಳೊಂದಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು.
  • ಮನರೇಗಾ ವೇತನವನ್ನು ಹೆಚ್ಚಿಸಬೇಕು, ನಗರ ಪ್ರದೇಶಗಳಿಗೂ ವಿಸ್ತರಿಸಬೇಕು.
  • ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ನಾಗರಿಕ ಸೇವೆಗಳನ್ನು ಬಲಪಡಿಸಬೇಕು.

ಭಾರತ್ ಬಂದ್ – ದೇಶಾದ್ಯಂತ ಯಾವ ಸೇವೆಗಳಿಗೆ ಅಡಚಣೆ?

  • ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳು
  • ಅಂಚೆ ಸೇವೆಗಳು
  • ಕಲ್ಲಿದ್ದಲು ಗಣಿಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆ
  • ರಾಜ್ಯ-ಚಾಲಿತ ಸಾರ್ವಜನಿಕ ಸಾರಿಗೆಗಳು
  • ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು

ಯಾವ ಸೇವೆಗಳು ಲಭ್ಯ?

  • ಶಾಲೆಗಳು ಮತ್ತು ಕಾಲೇಜುಗಳು ತೆರೆದಿರುತ್ತವೆ
  • ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
  • ರೈಲುಗಳ ಸಂಚಾರ ಇರುತ್ತದೆ

ಭಾರತ್ ಬಂದ್‌ನಲ್ಲಿ ಭಾಗಿಯಾಗುವ ಪ್ರಮುಖ ಸಂಘಟನೆಗಳು

  • ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
  • ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
  • ಸೆಂಟರ್‌ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ (CITU)
  • ಹಿಂದ್ ಮಜ್ದೂರ್ ಸಭಾ (HMS)
  • ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA)
  • ಕಾರ್ಮಿಕ ಪ್ರಗತಿಪರ ಒಕ್ಕೂಟ (LPF)
  • ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC)
  • ಸಂಯುಕ್ತ ಕಿಸಾನ್ ಮೋರ್ಚಾ
  • ಗ್ರಾಮೀಣ ಕಾರ್ಮಿಕ ಸಂಘಟನೆಗಳು
  • ರೈಲ್ವೆ, NMDC ಲಿಮಿಟೆಡ್ ಮತ್ತು ಉಕ್ಕು ಕೈಗಾರಿಕೆಗಳ ಸಾರ್ವಜನಿಕ ವಲಯದ ಸಿಬ್ಬಂದಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

ಯುವತಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ...

ರೆಪೋ ದರ ಶೇ. 5.5 ಕ್ಕೆ ಸ್ಥಿರವಾಗಿರಿಸಿದ ಆರ್‌ಬಿಐ; ಸತತ ಎರಡನೇ ಬಾರಿಯೂ ಯಥಾಸ್ಥಿತಿ

ಶೇ.5.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು...

Bihar SIR | ಬಿಜೆಪಿ-ಚುನಾವಣಾ ಆಯೋಗದ ಕುತಂತ್ರಕ್ಕೆ 47 ಲಕ್ಷ ಮತದಾರರು ಬಲಿ

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ...

ಎಲ್ಲರ ತಾಯಿ ಸಾಯುತ್ತಾರೆ; ರಜೆ ಕೇಳಿದ್ದಕ್ಕೆ ಮೇಲಧಿಕಾರಿಯ ಉಡಾಫೆಯ ಉತ್ತರ

ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ರಜೆ ಕೇಳಿದ ಬ್ಯಾಂಕ್ ಉದ್ಯೋಗಿಗೆ, “ಎಲ್ಲರ ತಾಯಿ...

Download Eedina App Android / iOS

X