ಕಾನೂನು ಜಾರಿ ನಿರ್ದೇಶನಾಲಯ ತನ್ನ ಇಚ್ಛೆಯಂತೆ ಎಲೆಂದರಲ್ಲಿ ದಾಳಿ ಮಾಡುವ “ಅಡ್ಡಾಡುವ ಶಸ್ತ್ರ ಅಥವಾ ಡ್ರೋನ್ ಅಲ್ಲ” ಅಥವಾ ತನ್ನ ಗಮನಕ್ಕೆ ಬಂದ ಪ್ರತಿಯೊಂದು ವಿಚಾರಗಳ ತನಿಖೆ ನಡೆಸುವ “ಸೂಪರ್ ಪೊಲೀಸ್” ಕೂಡಾ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿದೆ. 901 ಕೋಟಿ ರೂಪಾಯಿ ನಿಶ್ಚಿತ ಠೇವಣಿ ಖಾತೆಯನ್ನು ಅಮಾನತು ಮಾಡಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವ ವೇಳೆ ಕೋರ್ಟ್ ಈ ಅಭಿಪ್ರಾಯಕ್ಕೆ ಬಂದಿದೆ.
ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ವಿ.ಲಕ್ಷ್ಮೀನಾರಾಯಣನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಪ್ರಕರಣದ ಬಗ್ಗೆ ತೀರ್ಪು ನೀಡಿ, ಹಣ ದುರುಪಯೋಗ ತಡೆ ಕಾಯ್ದೆ (ಪಿಎಂಎಲ್ಎ) ಅನ್ವಯ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರವನ್ನು ದೃಢಪಟ್ಟ ಅಪರಾಧ ಎಂದು ಪರಿಗಣಿಸಲಾದ ಪ್ರಕರಣಗಳಲ್ಲಿ ಮತ್ತು ಅಪರಾಧ ಕೃತ್ಯದಿಂದ ಬಂದ ಹಣ ಕಂಡುಬಂದಾಗ ಮಾತ್ರ ಚಲಾಯಿಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದೆ. ಪಿಎಂಎಲ್ಎ ಪ್ರಕಾರ, ದೃಢಪಟ್ಟ ಅಪರಾಧ ಇರುವುದು ಅಗತ್ಯ ಎಂದು ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ?: ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ
ದೃಢಪಟ್ಟ ಅಪರಾಧ ಇಲ್ಲದ ಸಂದರ್ಭದಲ್ಲಿ, ಪಿಎಂಎಲ್ಎ ಅನ್ವಯವಾಗುವುದಿಲ್ಲ ಎಂದು ಹೇಳಿದೆ. ಕಾನೂನು ಜಾರಿ ನಿರ್ದೇಶನಾಲಯದ ಪಾತ್ರವನ್ನು ಒಂದು ಹಡಗು ಕಾರ್ಯ ನಿರ್ವಹಿಸಲು ನೌಕೆಯ ತಳದಲ್ಲಿರುವ ಸಿಡಿಗುಂಡಿಗೆ ನ್ಯಾಯಪೀಠ ಹೋಲಿಸಿದೆ. ನೌಕೆ ಒಂದು ದೃಢಪಟ್ಟ ಅಪರಾಧ ಹಾಗೂ ಅಪರಾಧ ಕೃತ್ಯದಿಂದ ಬಂದ ಹಣದಂತೆ ಎಂದು ವಿವರಿಸಿದೆ.
ಆರ್‌ಕೆಎಂ ಪವರ್ಜೆನ್ ಪ್ರೈವೆಟ್ ಲಿಮಿಟೆಡ್‌ನ ನಿಶ್ಚಿತ ಠೇವಣಿ ಖಾತೆಯನ್ನು ಅಮಾನತುಗೊಳಿಸಿ ಕಾನೂನು ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಜನವರಿ 31ರ ಆದೇಶ ರದ್ದುಪಡಿಸುವಂತೆ ಕೋರಿ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಹಿರಿಯ ವಕೀಲ ಬಿ.ಕುಮಾರ್ ಕಂಪನಿ ಪರ ವಾದ ಮಂಡಿಸಿದ್ದರು. ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಕಡೆಗಣಿಸಿ ನಿರ್ದೇಶಾನಲಯ ಕ್ರಮ ಕೈಗೊಂಡಿದೆ ಎಂದು ಅರ್ಜಿದಾರರು ವಾದಿಸಿದ್ದರು. ಆರ್‌ಕೆಎಂಪಿಗೆ 2006ರಲ್ಲಿ ಫತೇಪುರ ಪೂರ್ವ ಕಲ್ಲಿದ್ದಲು ಗಣಿ ಹಂಚಿಕೆ ಮಾಡಲಾಗಿತ್ತು.