ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ಅವರ ಗುರುಗ್ರಾಮದಲ್ಲಿರುವ ನಿವಾಸದ ಹೊರಗೆ ಅಪರಿಚಿತರು ಕಳೆದ ವಾರ ಗುಂಡಿನ ದಾಳಿ ನಡೆಸಿದ್ದು, ಮೂವರಲ್ಲಿ ಒಬ್ಬ ಆರೋಪಿಯನ್ನು ಇಂದು(ಆಗಸ್ಟ್ 22) ಬೆಳಿಗ್ಗೆ ಹರಿಯಾಣದ ಫರಿದಾಬಾದ್‌ನಲ್ಲಿ ಎನ್‌ಕೌಂಟರ್ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಫರಿದಾಬಾದ್‌ನ ಜವಾಹರ್ ಕಾಲೋನಿಯ ನಿವಾಸಿ ಇಶಾಂತ್ ಅಲಿಯಾಸ್ ಇಶು ಗಾಂಧಿ ಎಂದು ಗುರುತಿಸಲಾದ ಆರೋಪಿ ಫರಿದಾಬಾದ್ ಅಪರಾಧ ವಿಭಾಗದ ತಂಡದ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದಾನೆ. ಅರ್ಧ ಡಜನ್‌ಗೂ ಹೆಚ್ಚು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಯಾದವ್ ನಿವಾಸದ ಹೊರಗೆ ಗುಂಡಿನ ದಾಳಿ
ಆಗಸ್ಟ್ 17ರಂದು ಬೆಳಿಗ್ಗೆ ಸುಮಾರು 5.30ರಿಂದ 6 ಗಂಟೆಯ ನಡುವೆ ಗುಂಡಿನ ದಾಳಿ ನಡೆದಿದೆ. ಬೈಕ್‌ನಲ್ಲಿ ಬಂದ ಮೂವರು ಸೆಕ್ಟರ್ 57ರಲ್ಲಿರುವ ಯಾದವ್ ಮನೆಯ ಮೇಲೆ 25ಕ್ಕೂ ಅಧಿಕ ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ವೇಳೆ ಯಾದವ್ ಮನೆಯಲ್ಲಿ ಇರಲಿಲ್ಲ, ಯಾವುದೋ ಕೆಲಸಕ್ಕಾಗಿ ಹರಿಯಾಣದ ಹೊರಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮನೆಯಲ್ಲಿ ಕುಟುಂಬಸ್ಥರು ಇದ್ದರು. ಆದರೆ ಯಾರಿಗೂ ಹಾನಿಯಾಗಿಲ್ಲ.
VIDEO: Faridabad, Haryana: Ishant alias Ishu Gandhi, one of the accused in case of firing at YouTuber Elvish Yadav's residence, arrested after encounter with police. The encounter took place under BPTP police station area early morning.
— Press Trust of India (@PTI_News) August 22, 2025
Two masked men fired more than two dozen… pic.twitter.com/Wf1HeXKUvl
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೂವರು ವ್ಯಕ್ತಿಗಳು ಮನೆಯ ಹೊರಗೆ ಬೈಕ್‌ನಲ್ಲಿ ಬರುತ್ತಿರುವುದು ಕಂಡುಬಂದಿದೆ. ಕೆಲವು ನಿಮಿಷಗಳ ನಂತರ ಈ ಪೈಕಿ ಇಬ್ಬರು ಯೂಟ್ಯೂಬರ್‌ನ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೆಲವು ಸಮಯ ನಿಲ್ಲಿಸಿ ಮತ್ತೆ ದಾಳಿ ಮುಂದುವರೆಸಿರುವುದು, ಬಳಿಕ ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿದೆ.
ಘಟನೆಯ ಕೆಲವು ಗಂಟೆಗಳ ನಂತರ, ಕುಖ್ಯಾತ ಹಿಮಾಂಶು ಭೌ ಗ್ಯಾಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಗುಂಡಿನ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಯೂಟ್ಯೂಬರ್ ಜೂಜಾಟವನ್ನು ಉತ್ತೇಜಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ದಾಳಿ ನಡೆಸಿರುವುದಾಗಿ ಹೇಳಿದೆ. ಪೋರ್ಚುಗಲ್ ಮೂಲದ ಪರಾರಿಯಾಗಿರುವ ದರೋಡೆಕೋರ ಹಿಮಾಂಶು ಭೌ ನೇತೃತ್ವದ ಗ್ಯಾಂಗ್ ಇದು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಹಾವಿನ ವಿಷ ಪ್ರಕರಣ | ಬಲಪಂಥೀಯ ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಇನ್ನು ವಿದೇಶಿಯರನ್ನು ಆಹ್ವಾನಿಸಿ, ವಿಷಕಾರಿ ಹಾವುಗಳ ವಿಷವನ್ನು ಬಳಸಿಕೊಂಡು ರೇವ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ, ಯೂಟ್ಯೂಬರ್ ಎಲ್ವಿಶ್ ಯಾದವ್ ಅವರನ್ನು ನೋಯ್ಡಾ ಪೊಲೀಸರು ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿಸಿದ್ದರು. ಸದ್ಯ ಎಲ್ವಿಶ್ ಜಾಮೀನು ಮೇಲೆ ಹೊರಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
2023ರ ನವೆಂಬರ್ ತಿಂಗಳಲ್ಲಿ ನೋಯ್ಡಾದಲ್ಲಿ ಆಯೋಜನೆಗೊಂಡಿದ್ದ ರೇವ್ ಪಾರ್ಟಿಗೆ ದಾಳಿ ನಡೆಸಿ ನೋಯ್ಡಾ ಪೊಲೀಸರು ಐವರನ್ನು ಬಂಧಿಸಿದ್ದರು. ಈ ವೇಳೆ ಐದು ನಾಗರ ಹಾವು ಸೇರಿ ಒಟ್ಟಾಗಿ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಅದು ಮಾತ್ರವಲ್ಲದೆ ಎಲ್ವಿಶ್ ಯಾದವ್ ಮತ್ತು ಅವರ ಸಹಚರರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
