ಬಿಹಾರ | ಥಳಿಸಿ, ಬಲವಂತದಿಂದ ಮೂತ್ರ ಕುಡಿಸಿದ್ದ ದುರುಳರು: ಗಾಯಾಳು ಮುಸ್ಲಿಂ ಮಹಿಳೆ ಸಾವು

Date:

ಮುಸ್ಲಿಂ ಮಹಿಳೆಗೆ ದುರುಳರ ಗುಂಪೊಂದು ಅಮಾನವೀಯವಾಗಿ ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ. ಕ್ರೂರ ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

- Advertisement -

ಮಧುಬನಿಯ ಘೋಘರ್ದಿಹಾದ ಅಮ್ಹಿ ಗ್ರಾಮದ ನಿವಾಸಿ ರೋಷನ್ ಖಾಟೂನ್ ಮೃತ ಮಹಿಳೆ. ಖಾಟೂನ್ ಫೆಬ್ರವರಿ 28ರಂದು ಸ್ಥಳೀಯ ವಿವಾದವೊಂದನ್ನು ಪರಿಹರಿಸುವಂತೆ ಕೋರಿ ಗ್ರಾಮದ ಮುಖ್ಯಸ್ಥೆ ಕುಮಾರಿ ದೇವಿಯನ್ನು ಭೇಟಿಯಾಗಿದ್ದರು. ಈ ವೇಳೆ ಗ್ರಾಮದ ಮುಖ್ಯಸ್ಥನ ಮಗ ಮನು ಸಿಂಗ್ ಮತ್ತು ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು, ಖಾಟೂನ್ ಗಂಭೀರ ಗಾಯಗೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

ಇದನ್ನು ಓದಿದ್ದೀರಾ? ದನ ಕಳ್ಳಸಾಗಣೆ ಆರೋಪ: ತರಕಾರಿ ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಹತ್ಯೆಗೈದ ಹಿಂದುತ್ವ ಗೂಂಡಾಗಳು

ಮಾರ್ಚ್ 1ರಂದು ಪಟನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಖಾಟೂನ್ ಸಾವನ್ನಪ್ಪಿದ್ದಾರೆ. ಆದರೆ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯ ಡಿಜಿಟಲ್ ಸುದ್ದಿ ಮಾಧ್ಯಮವಾದ ಮಿಥ್ಲಾ ಸಮಾಚಾರ್ ಪ್ರಕಾರ ಮಹಿಳೆ ರಂಜಾನ್ ಉಪವಾಸ ನಡೆಸುತ್ತಿದ್ದರು, ಗುಂಪು ತೀವ್ರವಾಗಿ ಥಳಿಸಿದಾಗ ನೀರು ನೀಡುವಂತೆ ಮಹಿಳೆ ಕೇಳಿದ್ದು, ಈ ವೇಳೆ ದುರುಳರು ಮೂತ್ರ ಬೆರೆಸಿದ ಮದ್ಯವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ.

ಮಕ್ತೂಬ್ ಉಲ್ಲೇಖಿಸಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿ ನಡೆಸಿದವರು ಖಾಟೂನ್ ಅವರನ್ನು ಕಂಬಕ್ಕೆ ಕಟ್ಟಿ ತೀವ್ರವಾಗಿ ಥಳಿಸಿದೆ. ಇನ್ನು ಮಹಿಳೆಯ ಪತಿ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. “ನಾವು ಗ್ರಾಮದ ಮುಖ್ಯಸ್ಥರ ಮಗನನ್ನು ವಶಕ್ಕೆ ಪಡೆದಿದ್ದೇವೆ, ವಿಚಾರಣೆ ನಡೆಸುತ್ತಿದ್ದೇವೆ. ಘಟನೆಯ ಸಮಯದಲ್ಲಿ ಹಾಜರಿದ್ದ ಎಲ್ಲರನ್ನೂ ನಾವು ಗುರುತಿಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

“ಉಪವಾಸ ನಡೆಸುತ್ತಿದ್ದ ಮಹಿಳೆ ನೀರು ಕೇಳಿದ್ದ ಬಗ್ಗೆ ಕೆಲವು ವರದಿಗಳನ್ನು ನಾವು ನೋಡಿದ್ದೇವೆ. ಈ ಹಂತದಲ್ಲಿ, ನಾವು ಈ ವಿವರಗಳನ್ನು ದೃಢೀಕರಿಸಲು ಸಾಧ್ಯವಿಲ್ಲ. ತನಿಖೆ ಮುಂದುವರೆದಿದೆ ಮತ್ತು ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.

ಈ ಘಟನೆಯ ವಿಡಿಯೋ ಅಥವಾ ಸುದ್ದಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಡಿಗೆ ಕಾರು, ಇನ್‌ಸ್ಟಾಗ್ರಾಮ್ ಬಿಲ್ಡಪ್: ಉದ್ಯಮಿ ಸೋಗಿನಲ್ಲಿ ಮಹಿಳಾ ಪೊಲೀಸರಿಗೆ 24 ಲಕ್ಷ ರೂ. ವಂಚನೆ

ಮದುವೆಯಾಗುವ ಆಮಿಷವೊಡ್ಡಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಬರೋಬ್ಬರಿ 24 ಲಕ್ಷ ರೂಪಾಯಿ...

ಶೇರುಪೇಟೆ- ಈ ವಾರದ ನಷ್ಟ 20 ಲಕ್ಷ ಕೋಟಿ! ತೈಲ ಬೆಲೆಗಳ ‘ಕರಡಿ ಕುಣಿತ’ವೇ ಕಾರಣ

ಹಬ್ಬದ ಸಂಭ್ರಮದ ಸಮಯದಲ್ಲಿ ಶೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದವರು ತೀವ್ರ ನಿರಾಸೆಯನ್ನು...

ಅಮೆರಿಕದ ನಿರ್ಬಂಧ ಭೀತಿ: ಇರಾನ್‌ಗೆ ಔಷಧ ಸಾಗಿಸುವ ನೇರ ವಿಮಾನ ಹಾರಾಟಕ್ಕೆ ಭಾರತ ತಡೆ

ಅಮೆರಿಕ ವಿಧಿಸಬಹುದಾದ ಆರ್ಥಿಕ ನಿರ್ಬಂಧಗಳ ಭೀತಿಯಿಂದಾಗಿ, ಇರಾನ್ ಜತೆಗಿನ ನೇರ ವಿಮಾನಗಳ...